ಉಡುಪಿ: ಆಕಸ್ಮಿಕವಾಗಿ ಕಾರಿಗೆ ಬೆಂಕಿ ಹಿಡಿದ ಘಟನೆ ನಗರದ ಬಿಗ್ ಬಜಾರ್ ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ. ಕೆಎ 16 ಡಿ 8118 ನಂಬರಿನ ಕಾರು ಇದಾಗಿದ್ದು, ಕಾಪುವಿನ ರಿಯಾಝ್ ಅಹಮ್ಮದ್ ಎಂಬವರಿಗೆ ಸೇರಿದ ಕಾರು ಬೆಂಕಿಗೆ ಆಹುತಿಯಾಗಿದೆ.
ಬಿಗ್ ಬಜಾರ್ ಬಳಿ ನಿಲ್ಲಿಸಿದ್ದು, ಒಮ್ಮೇಲೆ ಹೊಗೆ ಕಾಣಿಸಿಕೊಂಡ ಪರಿಣಾಮ ಕಾರಿನೊಳಗಿದ್ದ ಇಬ್ಬರು ಹೋರಗೆ ಓಡಿ ಹೋಗಿದ್ದಾರೆ. ತಕ್ಷಣ ಕಾರಿಗೆ ಸಂಪೂರ್ಣವಾಗಿ ಬೆಂಕಿ ಹಿಡಿದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಬೆಂಕಿಗೆ ಕಾರು ಪೂರ್ತಿ ಸುಟ್ಟು ಕರಕಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.