News Kannada
Thursday, October 06 2022

ಕರಾವಳಿ

ಆರು ತಿಂಗಳ ಹಿಂದೆ ಮದುವೆಯಾಗಿದ್ದ ವಧು ಚಿನ್ನ- ನಗದು ಜತೆ ನಾಪತ್ತೆ - 1 min read

Photo Credit :

ಆರು ತಿಂಗಳ ಹಿಂದೆ ಮದುವೆಯಾಗಿದ್ದ ವಧು ಚಿನ್ನ- ನಗದು ಜತೆ ನಾಪತ್ತೆ

ಪುತ್ತೂರು: ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ವಧು ನಗದು ಹಾಗೂ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಸೆ.19ರಂದು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾರಾಡಿ ಜಾರ್ ಕಾಂಪೌಂಡ್ ಮಹಮ್ಮದ್ ಪಯಾಝ್ ಅವರ ಪತ್ನಿ ಅಫ್ರೀನಾ(19.ವ) ನಾಪತ್ತೆಯಾದವರು. ಸುಳ್ಯ ತಾಲೂಕಿನ ಕಸಬಾ ಬೀರಮಂಗಲ ಆಶ್ಪಕ್ ಎಂಬವರ ಪುತ್ರಿ ಅಫ್ರೀನಾರವರೊಂದಿಗೆ ಆರು ತಿಂಗಳ ಹಿಂದೆಯಷ್ಟೇ ಮಹಮ್ಮದ್ -ಯಾಝ್ ಅವರ ವಿವಾಹವಾಗಿತ್ತು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ಮನೆಯಲ್ಲಿ ನಡೆದ ಕ್ಷುಲ್ಲಕ ಕಾರಣಗಳಿಗೆ ಮುನಿಸಿಕೊಂಡು ಆಕೆ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಒಂಟಿಯಾಗಿಯೇ ಇರುತ್ತಿದ್ದರು.

ಸೆ.18ರಂದು ಎಂದಿನಂತೆ ಊಟ ಮಾಡಿ ಮಲಗಿದ್ದರು ರಾತ್ರಿ ಸುಮಾರು 11.45ರ ವೇಳೆಗೆ ಮಹಮ್ಮದ್ -ಯಾಝ್ ಅವರಿಗೆ ಎಚ್ಚರವಾಗಿ ನೋಡಿದಾಗ ಅಫ್ರೀನಾ ನಾಪತ್ತೆಯಾಗಿದ್ದರು.

ಈ ಬಗ್ಗೆ ಮನೆಯ ಕೊಠಡಿಗಳು, ಸುತ್ತಲೂ ಹುಡುಕಾಡಿದರೂ ಪತ್ತೆಯಾಗಲಿಲ್ಲ. ತವರು ಮನೆಗೂ ವಿಚಾರಿಸಲಾಗಿದ್ದು ಅಫ್ರೀನಾ ಸುಳಿವು ದೊರೆಯದಿರುವ ಹಿನ್ನೆಲೆಯಲ್ಲಿ ಪತಿ ಮಹಮ್ಮದ್ -ಯಾಝ್ ಅವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಮನೆಯಲ್ಲಿದ್ದ ರೂ.13 ಸಾವಿರ ನಗದು ಹಾಗೂ 12 ಪವನ್ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

See also  ಕಾಸರಗೋಡಿನಲ್ಲಿ ಕನ್ನಡ ನಿರ್ನಾಮಕ್ಕೆ ಕಮ್ಯೂನಿಸ್ಟ್‌ ಸರ್ಕಾರ ಯತ್ನ : ಸಂಸದ ಪ್ರತಾಪ್ ಸಿಂಹ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

188
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು