ಬೆಳ್ತಂಗಡಿ: ಯುವತಿಯಿಂದ ಮಾಜಿ ಪ್ರಿಯತಮನ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಫೋಸ್ಟ್ ಮಾಡಿ ಕಿರುಕುಳ ನೀಡುತ್ತಿದ್ದು, ನೊಂದ ಯುವಕನ ಕುಟುಂಬ ಠಾಣೆ ಹಾಗೂ ಕೋರ್ಟ್ ಮೇಟ್ಟಿಲೇರಿದೆ.
ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಬೊಲ್ಮ ನಿವಾಸಿ ಯುವಕನ ಜೊತೆಗೆ ಮೂಡಬಿದ್ರೆ ತಾಲೂಕಿನ ಉದ್ರಾಜೆಯ ಶಿರ್ತಾಡಿ ನಿವಾಸಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಲವು ಸಮಯ ಪ್ರೀತಿಯ ನಾಟಕವಾಡುತ್ತಿದ್ದಳು. ಯುವಕ ಮದುವೆಯಾಗುವ ಎಂದು ಮನೆಯವರ ಸಮ್ಮುಖದಲ್ಲಿ ಕಳೆದ ವರ್ಷ ನವಂಬರ್ ತಿಂಗಳಲ್ಲಿ ಯುವತಿ ಮನೆಗೆ ಹೋಗಿ, ಮನೆಯವರ ಒಪ್ಪಿಗೆ ಮೇರೆಗೆ ಮದುವೆ ನಿಗದಿಪಡಿಸಿದ್ದರು. ಇದರ ಒಂದು ತಿಂಗಳ ಬಳಿಕ ಕನ್ಯಾಡಿಯ ಯುವಕನಿಗೆ ನನಗೆ ನೀನು ಬೇಡ, ನನಗೆ ನನ್ನ ಸೋದರ ಮಾವನಾದ ಉಜಿರೆ ಕೆದ್ಲಾ ನಿವಾಸಿ ಜೊತೆ ಸಂಬಂಧ ಇರುವುದಾಗಿ ಯುವತಿಯೇ ಯುವಕನಿಗೆ ಹಾಗೂ ಕುಟುಂಬದವರ ಜೊತೆ ಖುದ್ದಾಗಿ ತಿಳಿಸಿದ ಕಾರಣ ಮದುವೆ ಮಾತುಕತೆಯನ್ನು ಯುವಕ ಮತ್ತು ಯುವತಿ ಮನೆಯವರು ಸೇರಿ ರದ್ದುಗೊಳಿಸಿದ್ದರು.
ನಂತರ ಸೋದರ ಮಾವ ಯುವತಿಯನ್ನು ಮದುವೆಯಾಗಲ್ಲ ಎಂದು ಕೈಕೊಟ್ಟಿದ್ದಾನೆ. ಇದಾದ ನಂತರ ಯುವತಿ ತನ್ನ ಹಳೆ ಪ್ರಿಯತಮ, ಕನ್ಯಾಡಿಯ ಯುವಕನಿಗೆ ಹಾಗೂ ಮನೆಯವರಿಗೆ ಕರೆ ಮಾಡಿ ಕಿರುಕುಳ ಕೊಡುತ್ತಿದ್ದಾಳೆ. ಯುವಕನ ಕುಟುಂಬದವರು ಯುವತಿಯ ನಡವಳಿಕೆ ಬಗ್ಗೆ ಸ್ಪಲ್ಪನೂ ಸಹಿಸದೆ ಯುವತಿಗೆ ಎಚ್ಚರಿಕೆ ನೀಡಿ ನಮ್ಮ ಕುಟುಂಬದವರ ಜೊತೆ ನೀನು ಸಂಪರ್ಕದಲ್ಲಿರುವುದು ಸರಿಯಲ್ಲ ಎಂದಿದ್ದಾರೆ. ಇದರಿಂದ ಯುವತಿ ಕೋಪಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟ್ ಮಾಡಿ ಯುವಕ, ಯುವಕನ ಅಣ್ಣ, ಅತ್ತಿಗೆ, ತಂಗಿ ಹಾಗೂ ಇತರ ಮನೆಯವರ ಫೋಟೋ ಹಾಕಿ ಅಶ್ಲೀಲ ಪದಗಳ ಬರಹ ಬರೆದು ಹಾಕಿ ಮಾನಹಾನಿ ಮಾಡಿದ್ದು, ಇದೀಗ ಯುವತಿಯ ವಿರುದ್ಧ ಮಂಗಳೂರಿನ ಬಂದರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವತಿ ಹಾಗೂ ಆಕೆಯ ಮನೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಯುವತಿಯೇ “ಹರ್ಷಿತಾ ಹರ್ಷಿ” ಎಂಬ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು ಫೋಟೋ ಹಾಗೂ ಪೋಸ್ಟ್ ಹಾಕಿ ಹರಿದುಬಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾಳೆ. ಕೊನೆಗೆ ಸೂಕ್ತ ಎಚ್ಚರಿಕೆ ನೀಡಿ ತಪ್ಪೋಪ್ಪಿಗೆ ಪತ್ರ ಬರೆದು ಯುವಕನಿಗೆ ಹಾಗೂ ಮನೆಯವರಿಗೆ ಕ್ಷಮೆ ಕೇಳಿ ಅಕೌಂಟ್ ಡಿಲೀಟ್ ಮಾಡುವುದಾಗಿ ಒಪ್ಪಿಕೊಂಡಿದ್ದಳು.
ಮತ್ತೆ ಯುವತಿಯಿಂದ ಕಿರುಕುಳ: ಯುವತಿಯನ್ನು ಸೈಬರ್ ಕ್ರೈಂ ಠಾಣೆಯಲ್ಲಿ ತಪ್ಪೊಪ್ಪಿಗೆ ಬರೆದು ಕ್ಷಮೆ ಕೇಳಿದ್ದು ಫೋಸ್ಟ್ ಹಾಗೂ ಪೋಟೋ ಡಿಲೀಟ್ ಮಾಡಲು ಎಚ್ಚರಿಕೆ ನೀಡಿದ ಮೇಲೂ ಮತ್ತೆ ಯುವಕನ ಕುಟುಂಬದ ವಿರುದ್ಧ ಮೆಸೆಂಜರ್ ಮೂಲಕ ಅಶ್ಲೀಲ ಪದ ಉಪಯೋಗಿಸಿ ಮೇಸೇಜ್ ಹಾಕುತ್ತಿದ್ದಾಳೆ. ಅದಲ್ಲದೆ ಯುವಕನ ತಂಗಿಗೆ ಪ್ರತಿದಿನ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ಇದರಿಂದ ನೊಂದ ಯುವಕ ಮತ್ತು ಆತನ ಕುಟುಂಬದವರು ಖಾಸಗಿಯಾಗಿ ವಕೀಲರ ಮೂಲಕ ಕೋರ್ಟ್ ಗೆ ಯುವತಿ ವಿರುದ್ಧ ಕರೆ ಮಾಡಿದ ಎಲ್ಲಾ ಆಡಿಯೋ ದಾಖಲೆ ಹಾಗೂ ಫೇಸ್ ಬುಕ್ ಪೋಸ್ಟ್ ಪ್ರತಿಯ ದಾಖಲೆ ಸಮೇತ ಕೇಸ್ ಹಾಕಿದ್ದಾರೆ.
ಈ ವಿಚಾರದಲ್ಲಿ ಹುಡುಗಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧವೂ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಸಮಾಜದಲ್ಲಿ ಒಳ್ಳೆಯ ಹೆಸರಿದೆ ಆಕೆಯಿಂದ ಮತ್ತು ಆಕೆಗೆ ಕುಮ್ಮಕು ನೀಡುತ್ತಿರುವ ಕೆಲವರು ಈಗ ನಮ್ಮ ಬೊಲ್ಮ ಮನೆತನದ ಕುಟುಂಬದ ಮರ್ಯಾದೆ ಹಾಳಾಗುತ್ತಿದೆ. ಈಗ ನ್ಯಾಯಕ್ಕಾಗಿ ಹೋರಾಟ ಮಾಡುವುದಾಗಿ ನೊಂದ ಯುವಕನ ಕುಟುಂಬದವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.