News Kannada
Monday, December 05 2022

ಕರಾವಳಿ

ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯ ಅಪಹರಿಸಿ ದರೋಡೆ

Photo Credit :

ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯ ಅಪಹರಿಸಿ ದರೋಡೆ

ಉಡುಪಿ: ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ದಾರಿ ಕೇಳಿ ಬಳಿಕ ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ದರೋಡೆಗೈದ ಘಟನೆ ಉಡುಪಿಯ ಸಂತೆಕಟ್ಟೆ ಬಳಿ ಮಂಗಳವಾರ ರಾತ್ರಿ ಸುಮಾರು 7.30 ರ ಹೊತ್ತಿಗೆ ನಡೆದಿದೆ.

ನಿಟ್ಟೂರಿನ ಅಡ್ಕದಕಟ್ಟೆಯ ಸುರೇಂದ್ರ ಡಿ.ಕುಂದರ್ (37) ಎಂಬವರು ತನ್ನ ಹೆಂಡತಿಯ ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ ಎಂದು ದೂರಲಾಗಿದೆ. ಸುರೇಂದ್ರ ಅವರು ನಿಟ್ಟೂರಿನಲ್ಲಿ ಬಸ್ ಗಾಗಿ ಕಾಯುತ್ತಿರುವ ವೇಳೆ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಗೋವಾ ಹಾಗೂ ಕುಂದಾಪುರಕ್ಕೆ ಎಷ್ಟು ದೂರ ಎಂದು ಕೇಳಿ ಬಳಿಕ ಸುರೇಂದ್ರ ಅವರಿಗೆ ಡ್ರಾಪ್ ಕೊಡುತ್ತೇವೆ ಎಂಬ ನೆಪಯೊಡ್ಡಿ ಕರೆದೊಯ್ದಿದ್ದಾರೆ‌. ಕಾರನ್ನು ಸಂತೆಕಟ್ಟೆ ಬಳಿ ನಿಲ್ಲಿಸದ ದುಷ್ಕರ್ಮಿಗಳು, ಸುರೇಂದ್ರ ಅವರ ಕುತ್ತಿಗೆಯಲ್ಲಿದ್ದ 30 ಸಾವಿರ ಮೌಲ್ಯದ 13 ಗ್ರಾಂ ತೂಕದ ಚಿನ್ನದ ಸರ, 3 ಸಾವಿರ ನಗದು ಹಾಗೂ ಒಂದು ಮೊಬೈಲ್‌ ಫೋನ್ ದರೋಡೆಗೈಯಲಾಗಿದೆ ಎಂದು ದೂರಿದ್ದಾರೆ‌.

ಹಲ್ಲೆಯಿಂದ ಗಾಯಗೊಂಡ ಸುರೇಂದ್ರ ಅವರು ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮೂಡುಬಿದಿರೆ: ಬೈಕ್ ಸ್ಕಿಡ್ ಆಗಿ ವಿದ್ಯಾರ್ಥಿ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

192
Shreyas Vittal

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು