ಮಂಗಳೂರು: ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್ ಆ್ಯಂಡ್ ಎಜುಕೇಶನ್( ಸೆಡ್ಸ್) ವತಿಯಿಂದ ಕೇರ್ ಚೈಲ್ಡ್ ಕ್ಯಾನ್ಸರ್ (ಸಿಸಿಸಿ) ವೆಬ್ ಸೈಟ್ ಅನಾವರಣ ಕಾರ್ಯಕ್ರಮ ಮಂಗಳೂರಿನ ರೋಶನಿ ನಿಲಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮಾಜಿ ಶಾಸಕರಾದ ಜೆ ಆರ್ ಲೋಬೊ ಅವರು ವೆಬ್ ಸೈಟ್ ನ್ನು ಅನಾವರಣ ಮಾಡಿದರು.
ಆ ನಂತರ ಮಾತನಾಡಿ ಅವರು, ದೇಶದಲ್ಲಿ ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಇನ್ನೂ ಪ್ರತೀ ೧೦೦ ಪುರುಷರ ಪೈಕಿ ಎಂಟು ಪುರುಷರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬುದು ಒಂದು ಸರ್ವೆಯಿಂದ ತಿಳಿದು ಬಂದಿದೆ.
ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಸೆಡ್ಸ್ ಸಂಸ್ಥೆ ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಒಂದು ವೆಬ್ ಸೈಟ್ ಮಾಡಿ ದಾನಿಗಳ ಮೂಲಕ ನೆರವಾಗಲು ಮುಂದಾಗಿರುವುದು ಶ್ಲಾಘನೀಯ ವಿಚಾರ. ದೇಶದಲ್ಲಿ ಅದೆಷ್ಟೋ ಮಂದಿ ಈ ರೀತಿಯ ಕಾಯಿಗಳಲ್ಲಿ ಬಳಲುವವರಿಗೆ ನೆರವಾಗಳು ಮುಂದಾಗುತ್ತಾರೆ ಆದರೆ ಅವರಿಗೆ ಸಮರ್ಪಕ ಮಾಹಿತಿಯಿಲ್ಲದೆ ದಾನಿಗಳು ಸಹಾಯ ನೀಡಲು ಹಿಂಜರಿಯುತ್ತಾರೆ. ಇದಕ್ಕೆ ಈ ಸಂಸ್ಥೆ ಈಗ ಮಾಡಿದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಸೆಡ್ಸ್ ಸಂಸ್ಥೆ ನಿರ್ದೇಶಕಿ ಡಾ. ರೀಟಾ ನೊರೋನ್ಹಾ, ಸೆಡ್ಸ್ ಸಿಸಿಸಿ ಮುಖ್ಯ ಸಂಯೋಜಕರಾದ ಹೆರಾಲ್ಡ್ ಮೊರಾಸ್, ಸ್ಕೂಲ್ ಸೋಶಿಯಲ್ ವರ್ಕ್ ರೋಶಿನಿಲಯ ಇದರ ಪ್ರಾಂಶುಪಾಲರಾದ ಡಾ.ಜುಲಿಯೇಟ್ ಸಿ.ಜೆ, ಕೆ.ಎಂ.ಸಿ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆ ವೈದ್ಯರು ಸೇರಿ ಮತ್ತಿತರರು ಉಪಸ್ಥಿತರಿದ್ದರು.