News Kannada
Tuesday, October 04 2022

ಕರಾವಳಿ

ಪತ್ನಿಗೆ ವರದಕ್ಷಿಣಿ ಕಿರುಕುಳ: ಆರೋಪಿಗೆ ಜೈಲು ಶಿಕ್ಷೆ - 1 min read

Photo Credit :

ಪತ್ನಿಗೆ ವರದಕ್ಷಿಣಿ ಕಿರುಕುಳ: ಆರೋಪಿಗೆ ಜೈಲು ಶಿಕ್ಷೆ

ಬೆಳ್ತಂಗಡಿ: ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ಸೋಮವಾರ ಶಿಕ್ಷೆ ವಿಧಿಸಿದೆ.

ಬಂಟ್ವಾಳ ತಾಲೂಕು ಕುಳ ಗ್ರಾಮ ನಿವಾಸಿ ಸಯ್ಯದ್ ನಜೀಬ್‍ಗೆ ಬೆಳ್ತಂಗಡಿ ನ್ಯಾಯಾಲಯ ಐಪಿಸಿ 498(ಎ) ವರದಕ್ಷಿಣೆ ಹಿಂಸೆ ಪ್ರಕಾರ 2 ತಿಂಗಳು ಜೈಲು ಹಾಗೂ ಸಾವಿರ ರೂ.ದಂಡ, ವರದಕ್ಷಿಣೆ ನಿಷೇಧ ಕಾಯ್ದೆ-1961 ಕಲಂ 4ರ ಪ್ರಕಾರ 6 ತಿಂಗಳು ಶಿಕ್ಷೆ ಹಾಗೂ ಸಾವಿರ ರೂ.ಗಳ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ ತಲಾ 15 ದಿನಗಳ ಹೆಚ್ಚುವರಿ ಜೈಲು ಶಿಕ್ಷೆ ಪ್ರಕಟಿಸಿದೆ.

ಬೆಳ್ತಂಗಡಿ ತಾಲೂಕು ಕರಾಯ ಗ್ರಾಮ ನಿವಾಸಿ ಮಹಿಳೆಯನ್ನು ಆರೋಪಿಯು 2015ರಲ್ಲಿ ವಿವಾಹವಾಗಿದ್ದನು. ಬಳಿಕ ಪತ್ನಿಗೆ ಹಿಂಸೆ ಸೇರಿದಂತೆ ವರದಕ್ಷಿಣೆಯ ಜತೆಗೆ ಚಿನ್ನಾಭರಣಕ್ಕಾಗಿ ಪೀಡಿಸುತ್ತಿದ್ದ ಎಂದು ಮಹಿಳೆ ಆರೋಪಿಯ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಪುತ್ತೂರು ಗ್ರಾಮಾಂತರದ ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಅನಿಲ್ ಎಸ್.ಕುಲಕರ್ಣಿ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಬೆಳ್ತಂಗಡಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಬಿ.ಕೆ.ಕೋಮಲ ಅವರು ಪ್ರಕರಣದ ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಜಿ.ಕೆ.ಕಿರಣ್‍ಕುಮಾರ್ ಅವರು ವಾದಿಸಿದ್ದರು.

See also  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೇ.ಟಿ.ಎಂಗೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು