News Kannada
Friday, October 07 2022

ಕರಾವಳಿ

ಫೆ.9ರಿಂದ 18ರ ತನಕ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ - 1 min read

Photo Credit :

ಫೆ.9ರಿಂದ 18ರ ತನಕ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ

ಬೆಳ್ತಂಗಡಿ: ಧರ್ಮಸ್ಥಳದಲ್ಲಿನ ಶ್ರೀ ಭಗವಾನ್ ಬಾಹುಬಲಿಯ ಪಂಚ ಮಹಾವೈಭವ ಫೆ.9ರಿಂದ 18ರವರೆಗೆ ನಡೆಯಲಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

ಅವರು ಕ್ಷೇತ್ರದ ಸನ್ನಿಧಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಹಾಮಸ್ತಕಾಭಿಷೇಕದ ವಿವರಗಳನ್ನು ನೀಡಿದರು. ಧರ್ಮಸ್ಥಳದಲ್ಲಿ ಮಹಾವೈಭವ ನಡೆಯಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಧರ್ಮಸ್ಥಳ ಸಾಕ್ಷಿಯಾಗಲಿದೆ. ಸಾಂಪ್ರದಾಯಿಕವಾಗಿ ತೀರ್ಥಂಕರರ ಪಂಚಕಲ್ಯಾಣ ಕಾರ್ಯಕ್ರಮ ನೆರವೇರಿಸಿ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿತ್ತು. ಈ ಬಾರಿ ಆಚಾರ್ಯ ಶ್ರೀಗಳ ಮತ್ತು ಭಟ್ಟಾರಕರಅನುಮತಿ ಪಡೆದು ಶ್ರೀ ಭಗವಾನ್ ಬಾಹುಬಲಿ ಪಂಚ ಮಹಾವೈಭವದ ಮೂಲಕ ಧಾರ್ಮಿಕ ಮತ್ತುಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಣಯಿಸಲಾಗಿದೆ. ನಿತ್ಯವೂ ಪೂಜೆ, ಆರಾಧನೆಗಳು ಪೂರಕವಾಗಿ ನಡೆಯಲಿವೆ. ಈ ಕಾರ್ಯಕ್ರಮಗಳಲ್ಲಿ ಮುನಿಗಳ ಪ್ರವಚನದ ಪುಣ್ಯ ಲಾಭವೂ ದೊರೆಯಲಿದೆ ಎಂದರು.

1982ರ ಫೆ.4ರಂದು 108ನೇ ಆಚಾರ್ಯ ಶ್ರೀ ವಿದ್ಯಾನಂದ ಮಹಾರಾಜ್ ಮತ್ತು 108ನೇ ಆಚಾರ್ಯ ಶ್ರೀ ವಿಮಲ ಸಾಗರ ಮಹಾರಾಜರ ನೇತೃತ್ವದಲ್ಲಿ ಪ್ರಥಮ ಮಹಾಮಸ್ತಕಾಭಿಷೇಕ ನಡೆದಿತ್ತು. 1995ರ ಫೆಬ್ರವರಿ 5ರಿಂದ 10ರವರೆಗೆ 108ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್‍ಜೀ ಮಹಾರಾಜರ ನೇತೃತ್ವದಲ್ಲಿ ದ್ವಿತೀಯ ಮಹಾಮಸ್ತಕಾಭಿಷೇಕ ನಡೆದಿತ್ತು. 2007ರ ಜನವರಿ 28ರಿಂದ ಫೆ.2ರವರೆಗೆ 108ನೇ ಆಚಾರ್ಯ ಶ್ರೀ ವರ್ಧಮಾನ ಸಾಗರ್‍ಜೀ ಮಹಾರಾಜರ ನೇತೃತ್ವದಲ್ಲಿ ತೃತೀಯ ಮಹಾಮಸ್ತಕಾಭಿಷೇಕ ನಡೆದಿತ್ತು. ಇದೀಗ 4ನೇ ಮಹಾಮಸ್ತಕಾಭಿಷೇಕ 2019ರ ಫೆ.9ರಿಂದ ಫೆ.18ರವರೆಗೆ ಶ್ರೀ 108 ಆಚಾರ್ಯಶ್ರೀ ವರ್ಧಮಾನ ಸಾಗರ್‍ಜೀ ಮಹಾರಾಜ್ ಮತ್ತು ಶ್ರೀ 108 ಆಚಾರ್ಯಶ್ರೀ ಪುಷ್ಪದಂತ ಸಾಗರ್‍ಜೀಮಹಾರಾಜ್, ಶ್ರವಣಬೆಳಗೊಳದ ಪರಮಪೂಜ್ಯಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕಮಹಾಸ್ವಾಮೀಜಿಯವರ ಮಾರ್ಗದರ್ಶನ, ಕಾರ್ಕಳ ದಾನಶಾಲಾ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಜರುಗಲಿದೆ. ನಾಡಿನ ಅನೇಕ ಮುನಿಗಳು, ಭಟ್ಟಾರಕರು, ತ್ಯಾಗಿಗಳು ಈ ಮಂಗಲಕರ ಮಹೋತ್ಸವದಲ್ಲಿ ಉಪಸ್ಥಿತರಿರುತ್ತಾರೆ ಎಂದು ವಿವರ ನೀಡಿದರು.

ಫೆ.9ರ ಶನಿವಾರದಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆಯ ಬಳಿಕ ರತ್ನಗಿರಿಗೆ ಆಗ್ರೋದಕ ಮೆರವಣಿಗೆಯೊಂದಿಗೆ ಮಹಾಮಸ್ತಕಾಭಿಷೇಕದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಫೆ.16ರಂದು ಬೆಳಗ್ಗೆ 8.45ರ ಮೀನಲಗ್ನದ ಮಂಗಲ ಮುಹೂರ್ತದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ 1008 ಪುಣ್ಯಾಮೃತ ಕಲಶಗಳಿಂದ ವಿಗ್ರಹ ಪ್ರತಿಷ್ಠಾಪಕರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬಸ್ಥರಿಂದ ಪ್ರಥಮ ಮಸ್ತಕಾಭಿಷೇಕ ನಡೆಯಲಿದೆ. ಸಂಜೆ ಧ್ವಜಪೂಜೆ, ಶ್ರೀ ಬಲಿ ವಿಧಾನ, ಮಹಾಮಂಗಳಾರತಿ ನಡೆಯಲಿದೆ. ಫೆ.11ರಂದು ಬಾಹುಬಲಿ ಪಂಚಮಹಾವೈಭವ ಅಂಗವಾಗಿ ಬೆಳಗ್ಗೆ 9.30ರಿಂದ ನವಯುಗಾರಂಭ. ಸಂಜೆ 4.30ರಿಂದ ಬಾಲಲೀಲೋತ್ಸವ. 12ರಂದು ಬೆಳಗ್ಗೆ ಆದಿನಾಥ ಮಹಾರಾಜರಿಂದ ಸ್ತ್ರೀ ಶಿಕ್ಷಣ, ಕಲೆ, ಸಂಸ್ಕೃತಿ. ಸಂಜೆ ಭೋಗದಿಂದ ತ್ಯಾಗದೆಡೆಗೆ. 13ರಂದು ಬೆಳಗ್ಗೆ ಚಕ್ರರತ್ನ ಉದಯ, ದಿಗ್ವಿಜಯ. ಸಂಜೆ ವೈಭವದ ಮೆರವಣಿಗೆಯೊಂದಿಗೆ ವೃಷಭಾಚಲದಿಂದ ಅಯೋಧ್ಯೆಗೆ ಪಯಣ. 14ರಂದು ಭರತ ಮತ್ತು ಬಾಹುಬಲಿ ಧರ್ಮಯುದ್ಧ. ಸಂಜೆ ಬಾಹುಬಲಿಯ ತ್ಯಾಗ ತಪಸ್ಸು. 15ರಂದು ಬೆಳಗ್ಗೆ ಸಮವಸರಣ ವೈಭವ, ಸಂಜೆ ಬಾಹುಬಲಿ ಕೇವಲ ಜ್ಞಾನ ನಡೆಯಲಿದೆ. ಫೆ.16, 17, 18ರಂದು ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ. ಫೆ.18ರಂದು ಮಧ್ಯಾಹ್ನ ನಂತರ ಧ್ವಜಾವರೋಹಣ, ತೋರಣವಿಸರ್ಜನೆ ನಡೆಯಲಿದೆ ಎಂದರು.

See also  ರಸ್ತೆಗಾಗಿ ಕೃಷಿಕನ ರಬ್ಬರು ಗಿಡ ಕಡಿದು ರಸ್ತೆ ನಿರ್ಮಾಣ

ಗೋಷ್ಠಿಯಲ್ಲಿ ಸುರೇಂದ್ರ ಕುಮಾರ್, ಹಷೇಂದ್ರ ಕುಮಾರ್, ಡಾ| ಯಶೋವರ್ಮ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು