ಮಂಗಳೂರು: ಸಿದ್ದರಾಮಯ್ಯ ಅವರಿಂದಾಗಿ ರಾಜ್ಯ ಸರ್ಕಾರವು ಅಸ್ಥಿರಗೊಳ್ಳಲು ಕಾರಣ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌರ ಆರೋಪ ಮಾಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೆಲಸ ಮಾಡಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಸಿದ್ದರಾಮಯ್ಯ ತನ್ನ ಬೆಂಬಲಿಗರ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಗರದಲ್ಲಿ ಇಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಡಿವಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಕಾಂಗ್ರೆಸ್ ನ ಒಳಗೆ ಕಚ್ಚಾಟವಿದೆ. ಕಾಂಗ್ರೆಸ್ ನವರು ರಾಜ್ಯ ರಾಜಕಾರಣವನ್ನು ಗಲೀಜು ಮಾಡಿದ್ದಾರೆ. ಸಿದ್ದರಾಮಯ್ಯ ಒಂದು ಕಡೆ ಬೆಂಕಿ ಹಚ್ಚಿ, ಮತ್ತೊಂದು ಕಡೆಯಲ್ಲಿ ನಂದಿಸುವ ನಾಟಕವಾಡುತ್ತಿದ್ದಾರೆ ಎಂದು ಡಿವಿ ಹೇಳಿದರು.