News Kannada
Monday, November 28 2022

ಕರಾವಳಿ

ಬೆಳ್ತಂಗಡಿಯ ಕಳಿಯ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ - 1 min read

Photo Credit :

ಬೆಳ್ತಂಗಡಿಯ ಕಳಿಯ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

ಬೆಳ್ತಂಗಡಿ: ಅತಿವೃಷ್ಟಿಯಿಂದ ತಾಲೂಕಿನ ಜನತೆ ವಿವಿಧ ರೀತಿಯಲ್ಲಿ ಬವಣೆ ಪಟ್ಟಿರುವುದು ಈಗಾಗಲೇ ತಿಳಿದಿರುವ ವಿಚಾರ. ಇದೀಗ ನೀರಿನ ಕ್ಷಾಮವನ್ನು ಜನರು ಎದುರಿಸುವ ಪರಿಸ್ಥಿತಿ ಬಂದಿದೆ. ಗ್ರಾಮ ಪಂಚಾಯತಿ ಒದಗಿಸುವ ನೀರನ್ನೇ ನಂಬಿಕೊಂಡಿರುವ ಗ್ರಾಮಸ್ಥರು ನೀರಿಲ್ಲದೆ ಬವಣೆ ಪಡಬೇಕಾದ ಸನ್ನಿವೇಶ ಎದುರಾಗಿದೆ.

ಕಳಿಯ ಗ್ರಾಮ ಪಂಚಾಯಿತಿಯ ನ್ಯಾಯತರ್ಪು ಗ್ರಾಮದ ಕೈಪಳ-ಬೆಳಿಬೈಲು-ತಿಮ್ಮನೊಟ್ಟು ಎಂಬಲ್ಲಿ ನೀರಿಗಾಗಿ ಬೆವರು ಸುರಿಸುವ ಸ್ಥಿತಿ ಎದುರಾಗಿದೆ. ಅಲ್ಲಿನ ಜನ ಹೋರಾಟದ ಹಾದಿ ಹಿಡಿಯುವಲ್ಲಿಯವರೆಗೆ ತಲುಪಿದ್ದಾರೆ. ಕಳಿಯ ಗ್ರಾಪಂನ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಎಂಬಲ್ಲಿ ಬೋರ್‍ವೆಲ್ ಇದ್ದು, ಅದರ ನೀರನ್ನು ಇಲ್ಲಿನ ತಿಮ್ಮನೊಟ್ಟು ವರೆಗೆ ನೀಡಲಾಗುತ್ತಿತ್ತು. ಆದರೆ ಬೋರ್‍ವೆಲ್‍ನಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ. ದೂರದಿಂದ ಇಲ್ಲಿಯ ವರೆಗೆ ನೀರು ಸರಾಗವಾಗಿ ಬರುತ್ತಿಲ್ಲ. ಎತ್ತರ ಪ್ರದೇಶದಲ್ಲಿರುವ ಮನೆಗಳಿಗೆ ನೀರು ಸಿಗುತ್ತಿಲ್ಲ. ಸದ್ಯಕ್ಕೆ ತಿಮ್ಮನೊಟ್ಟು ತನಕ ಕುಡಿಯುವಷ್ಟು ನೀರು ಸಿಗುತ್ತಿದ್ದು, ಬೆಳಿಬೈಲು, ಕೈಪಳ ಜನರಿಗೆ ಪಂಚಾಯಿತಿ ವತಿಯಿಂದ ನೀರು ಬರುತ್ತಿಲ್ಲ. ಚುನಾವಣೆ ಬಂದಾಗ ಭರವಸೆ ನೀಡುತ್ತಾರೆ. ಆದರೆ ನಮಗೆ ಭರವಸೆ ಬೇಡ, ನೀರು ಬೇಕು ಎಂದು ಇಲ್ಲಿನ ಜನರ ಅಭಿಪ್ರಾಯ.

ಈ ಭಾಗದಲ್ಲಿ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳಿದೆ. ದಲಿತ ಕಾಲೋನಿಯೂ ಇದೆ. ಆದರೆ ಕಳೆದ ಮೂರು ವರ್ಷಗಳಿಂದ ಕೈಪಳ-ಬೆಳಿಬೈಲು ಪರಿಸರದಲ್ಲಿರುವ ಹತ್ತಕ್ಕೂ ಹೆಚ್ಚು ಮನೆಗಳಿಗೆ ಪಂಚಾಯಿತಿಯಿಂದ ಕುಡಿಯುವ ನೀರಿಗಾಗಿ ನಳ್ಳಿ ನೀರಿನ ಸಂಪರ್ಕ ನೀಡಿದ್ದರೂ ಅವರ ಮನೆ ಬಾಗಿಲಿಗೆ ನೀರು ಮುಟ್ಟಿಲ್ಲ. ಹೊಸತಾಗಿ ಪೈಪುಗಳನ್ನು ಹಾಕಲಾಗಿದ್ದರೂ ಕುಡಿಯುವ ನೀರನ್ನು ಉಪಯೋಗಿಸುವ ಭಾಗ್ಯ ಬಂದಿಲ್ಲ.

ಈ ಕುರಿತು ಪ್ರತಿ ಗ್ರಾಮಸಭೆಗಳಲ್ಲಿ ಸಮಸ್ಯೆಯನ್ನು ತಿಳಿಸಲಾಗಿತ್ತು. ಆದರೆ ಪಂಚಾಯಿತಿ ಪೈಪುಲೇನು ಹಾಕಿದ್ದರೂ ನೀರು ಬಂದಿಲ್ಲ. ಅಕ್ಕ ಪಕ್ಕದವ ಖಾಸಗಿ ಜಮೀನಿನಲ್ಲಿರುವ ಬೋರುವೆಲ್‍ನಿಂದ ನೀರು ಪಡೆಯುತ್ತಿದ್ದೇವೆ. ಕರೆಂಟ್ ಇದ್ದರೆ ನೀರು ಸಿಗುತ್ತದೆ. ಇಲ್ಲದಿದ್ದರೆ ಅದೂ ಇಲ್ಲ. ಕೆಲವೊಮ್ಮೆ ವಾಹನದಲ್ಲಿ ನೀರನ್ನು ತರುತ್ತೇವೆ. ನೀರಿನ ಸಮಸ್ಯೆ ಕುರಿತು ಈ ಪರಿಸರದ ಜನರು ಜಿಲ್ಲಾಧಿಕಾರಿಯವರಿಗೆ, ದ.ಕ.ಜಿಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅವರಿಂದಲೂ ಏನೂ ಸ್ಪಂದನೆ ಸಿಕ್ಕಿಲ್ಲ. ಇನ್ನು ನಮಗೆ ಹೋರಾಟ ಅನಿವಾರ್ಯ ಎಂದು ಇಲ್ಲಿನ ಜನರು ತಮ್ಮ ಸಮಸ್ಯೆಯನ್ನು ವಿವರಿಸುತ್ತಾರೆ.

ಟಾಸ್ಕ್ ಫೋರ್ಸ್‍ನಿಂದ ಮಂಜೂರಾದ ಅನುದಾನದಿಂದ ಬೋರ್‍ವೆಲ್ ತೆಗೆಸಿದರೆ ಒಂದೂವರೆ ಕಿ.ಮೀ. ದೂರದಿಂದ ಬರುವ ನೀರಿನ ಅವಶ್ಯಕತೆ ಇರುವುದಿಲ್ಲ. ಇಲ್ಲಿಯೇ ಬೋರ್‍ವೆಲ್ ಆದರೆ ತಿಮ್ಮನೊಟ್ಟು, ಕೈಪಳ, ಬೆಳಿಬೈಲು ಪರಿಸರದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದಂತಾಗುತ್ತದೆ. ಚುನಾವಣಾ ಸಂದರ್ಭ ಆಗಿದ್ದರಿಂದ ಸಮಸ್ಯೆ ಬಗೆಹರಿಯಲು ಸಂಬಂಧಪಟ್ಟ ಅಧಿಕಾರಿಗಳೇ ಮನಸ್ಸು ಮಾಡಬೇಕಷ್ಠೆ.

ಕಳಿಯ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಂಪರ್ಕ ಇರುವ ಕಡೆ ನೀರಿನ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಕ್ರಮಕೈಗೊಳ್ಳುವಂತೆ ಪಂಚಾಯಿತಿ ವತಿಯಿಂದ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈಗಾಗಲೇ ಟಾಸ್ಕ್ ಫೋರ್ಸ್ ವತಿಯಿಂದ ಬೆಳಿಬೈಲು ಹಾಗೂ ರಕ್ತೇಶ್ವರಿಪದವು ಎಂಬಲ್ಲಿಗೆ ಬೋರ್‍ವೆಲ್ ಮಂಜೂರಾಗಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಿಗೆ ಸಿಕ್ಕಿದ ಕೂಡಲೇ ಬೋರ್‍ವೆಲ್ ತೆಗೆಸುವ ಕಾರ್ಯ ಮಾಡಲಾಗುವುದು ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

See also  ಕಾರು-ಬೈಕ್ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ

ಎರಡು ವರ್ಷದ ಹಿಂದೆಯೇ ಪೈಪ್ ಲೈನ್ ಹಾಕಿ, ನೀರಿನ ಸಂಪರ್ಕ ನೀಡಲಾಗಿತ್ತು. ಆದರೆ ನೀರು ಮಾತ್ರ ಅಲ್ಲಿಯವರೆಗೆ ಹೋಗುತ್ತಿಲ್ಲ. ಇಲ್ಲಿ ಹೊಸ ಬೋರ್‍ವೆಲ್‍ಗೆ ಮನವಿ ಮಾಡಲಾಗಿತ್ತು. ಟಾಸ್ಕ್ ಫೋರ್ಸ್ ವತಿಯಿಂದ ಮಂಜೂರಾಗಿದ್ದು, ಅನುಮತಿ ಬರಬೇಕಾಷ್ಟೇ. ಬಂದ ತಕ್ಷಣ ಈ ಪರಿಸರಕ್ಕೆ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಕಳಿಯ ಗ್ರಾ.ಪಂ.ಪಿಡಿಒ ಸಂತೋಷ ಪಾಟೀಲ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು