News Kannada
Sunday, November 27 2022

ಕರಾವಳಿ

ಬ್ರಹ್ಮಕಲಶ ಜರುಗಲಿರುವ ಚಂದ್ಕೂರು ದೇವಾಲಯಕ್ಕೆ ವೀರೇಂದ್ರ ಹೆಗ್ಗಡೆ ಭೇಟಿ - 1 min read

Photo Credit :

ಬ್ರಹ್ಮಕಲಶ ಜರುಗಲಿರುವ ಚಂದ್ಕೂರು ದೇವಾಲಯಕ್ಕೆ ವೀರೇಂದ್ರ ಹೆಗ್ಗಡೆ ಭೇಟಿ

ಬೆಳ್ತಂಗಡಿ: ಸುಂದರವಾದ ಪರಿಸರದ ಮಡಿಲಲ್ಲಿ ದೇವಿಯ ದೇವಸ್ಥಾನ ಪುನರ್‍ ನಿರ್ಮಾಣಗೊಳ್ಳುತ್ತಿರುವುದು ಮತ್ತು ಅದಕ್ಕೆ ಊರವರೇ ನೇತೃತ್ವ ವಹಿಸುತ್ತಿರುವುದು ಸಂತಸ ತಂದಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮೇ 8ರಿಂದ 13ರವರೆಗೆ ಚಂದ್ಕೂರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ನಿಮಿತ್ತ ಅವರು ಭೇಟಿ ನೀಡಿ ಅಲ್ಲಿನ ಕಾರ್ಯಕಾರಿ ಸಮಿತಿಯವರೊಂದಿಗೆ ಮಾತುಕತೆ ನಡೆಸಿದರು.

ಹಲವಾರು ವರ್ಷಗಳ ಹಿಂದೆ ಊರವರು ಧನ, ಧಾನ್ಯ, ಜಲ ಮೂಲ ಮೊದಲಾದ ಸಂಪತ್ತಿಗಾಗಿ ಕಷ್ಟ ಕಾಲದಲ್ಲಿಯೂ ದೇವಸ್ಥಾನವನ್ನು ಪ್ರತಿಷ್ಠಾಪಿಸುತ್ತಿದ್ದರು. ಇದು ಪರಿಸರ ಸಂರಕ್ಷಣೆ ಹಾಗೂ ಭವಿಷ್ಯದ ಯೋಜನೆಗಳಿಗೆ ದೇವರು ಕೊಟ್ಟ ಅನುಗ್ರಹ. ಇಂದು ಚಂದ್ಕೂರಿನಲ್ಲಿ ಉತ್ತಮ ಪರಿಸರದ ಮಧ್ಯೆ ದೇವಿಯ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಮತ್ತು ಅದಕ್ಕೆ ಊರವರೇ ನೇತೃತ್ವ ವಹಿಸಿರುವುದು ಉತ್ತಮ ಬೆಳವಣಿಗೆ. ಇಲ್ಲಿನ ಕ್ಷೇತ್ರದ ಸಾನಿಧ್ಯವಿರುವುದು ಗೊತ್ತಾಗುತ್ತದೆ ಎಂದರು.

ಹಿಂದೆ ಕೃಷಿ ಪದ್ದತಿಯನ್ನು ಮಾಡುತ್ತಿದ್ದಂತಹ ಸಂದರ್ಭದಲ್ಲಿ ನಂಬಿಕೆಯಿಂದಲೇ ದೇವರ ಹರಕೆ ಹೊತ್ತು ಕೃಷಿ ಚಟುವಟಿಕೆಯನ್ನು ಮಾಡುತ್ತಿದ್ದರು. ಇದು ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನು ನಂಬಿಕೊಂಡು ದೇವರನ್ನು ನಂಬುವಂತಹ ಕಾಲವಿತ್ತು ಇದಕ್ಕೆ ಉದಾಹರಣೆಯಾಗಿ ಸುರ್ಯ ಕ್ಷೇತ್ರದಲ್ಲಿ ಇಂದಿಗೂ ಅದೇ ಪರಂಪರೆಯಾಗಿ ಪ್ರಾಣಿ, ಮನೆ ಇನ್ನಿತರ ವಿಷಯವನ್ನು ನಂಬಿಕೆಯಾಗಿರಿಸಿ ಹರಕೆ ಹೊರುವಂತಹ ಪದ್ದತಿ ಮತ್ತು ನಂಬಿಕೆ ಇದೆ. ಅದೇ ರೀತಿ ಈ ಕ್ಷೇತ್ರದಲ್ಲಿ ಗ್ರಾಮಸ್ಥರು ಅಚಲವಾದ ನಂಬಿಕೆಯಿಂದ ದೇವಸ್ಥಾನ ನಿರ್ಮಿಸಿದ್ದಾರೆ. ಆದಷ್ಟು ಬೇಗ ಕ್ಷೇತ್ರದ ಕಾಮಗಾರಿ ಮುಗಿದು ಬ್ರಹ್ಮಕಲಶೋತ್ಸವ ಯಶಸ್ವಿಯಾಗಲಿ ಎಂದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಅಜ್ರಿ, ಪ್ರಧಾನ ಕಾರ್ಯದರ್ಶಿ ಧನಂಜಯ ರಾವ್, ಕಾರ್ಯದರ್ಶಿ ವಸಂತ ಸುವರ್ಣ, ಖಜಾಂಚಿ ಯೋಗೀಶ ಭಿಡೆ, ಸುಭ್ರಾಯ ಡೋಂಗ್ರೆ, ಗಿರೀಶ್ ಡೋಂಗ್ರೆ, ಧ.ಗ್ರಾ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ್ ಶೆಟ್ಟಿ, ವಿಠಲ ಶೆಟ್ಟಿ, ರಾಜೇಶ್ ಶೆಟ್ಟಿ ಲಾಯಿಲ, ಕೃಷ್ಣಪ್ಪ ಪೂಜಾರಿ, ಪ್ರಸಾದ್ ಶೆಟ್ಟಿ ಏಣಿಂಜೆ, ಹಾಗೂ ಊರವರು ಉಪಸ್ಥಿತರಿದ್ದರು.

See also  ಅ.10ರಿಂದ 20ರ ತನಕ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು