News Kannada
Friday, February 03 2023

ಕರಾವಳಿ

ಎಸ್ ಡಿಎಂ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ

Photo Credit :

ಎಸ್ ಡಿಎಂ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ

ಬೆಳ್ತಂಗಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿರುತ್ತಾರೆ. ಅವರ ಪ್ರತಿಯೊಂದು ಮತಕ್ಕೂ ಬಹಳ ಮಹತ್ವವಿದೆ.

ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೂ ಚುನಾವಣಾ ಮಹತ್ವದ ಅರಿವಿರಬೇಕು ಎನ್ನುವ ನಿಟ್ಟಿನಲ್ಲಿ  ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿ. ಪ್ರಾ.ಶಾಲೆಯಲ್ಲಿ ಚುನಾವಣೆಯನ್ನು ಮಾದರಿ ಇ.ವಿ.ಎಂ. ಮೂಲಕ ಕೈಗೊಳ್ಳಲಾಯಿತು.

ಶಾಲೆಯ ಮುಖ್ಯೊಪಾಧ್ಯಾಯ ಸುಬ್ರಹ್ಮಣ್ಯ ರಾವ್ ಇವರ ಸೂಕ್ತ ನೇತೃತ್ವದಲ್ಲಿ ಮತ್ತು ಚುನಾವಣಾಧಿಕಾರಿಯಾಗಿ ನೇಮಕಗೊಂಡ ಸಹ ಶಿಕ್ಷಕಿ ಪೂರ್ಣಿಮಾ ಜೋಷಿ ಮುಂದಾಳತ್ವದಲ್ಲಿ ಸುಸೂತ್ರವಾಗಿ ಚುನಾವಣಾ ಪ್ರಕ್ರಿಯೆ ನೆರವೇರಿತು. ನಾಮಪತ್ರ ಸಲ್ಲಿಕೆಯಿಂದ ಹಿಡಿದು ಫಲಿತಾಂಶ ಘೋಷಣೆವರೆಗೂ ಮತದಾನ ಸರ್ಕಾರದ ರೀತಿಯಲ್ಲೇ ನಡೆದದ್ದು ಗಮನಾರ್ಹ. ಈ ಮಾದರಿ ಮತಯಂತ್ರದ ಪರಿಕಲ್ಪನೆಯ ರೂವಾರಿ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕ ನಿಖಿತ್ ಜೈನ್ ಇವರು.

4ನೇ ತರಗತಿಯಿಂದ 7ನೇ ತರಗತಿಯವರೆಗಿನ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಶಾಲಾ ನಾಯಕನನ್ನು ಆರಿಸುವ ಈ ಚುನಾವಣಾ ಹಬ್ಬದಲ್ಲಿ ಪಾಲ್ಗೊಂಡು ಶಾಲಾ ಸರ್ಕಾರ ರಚನೆಗೆ ಕಾರಣೀಭೂತರಾದರು. ಅಂತಿಮವಾಗಿ ವಿಕಾಸ್ ನಾಯಕನಾಗಿ ಹಾಗೂ ಪ್ರಜ್ಞಾ ಉಪನಾಯಕಿಯಾಗಿ ಆಯ್ಕೆಗೊಂಡರು.

See also  ಸಹ್ಯಾದ್ರಿ ಕಾಲೇಜ್ ಒಲಂಪಿಯಾಡ್ ಪ್ರಾದೇಶಿಕ ಕೇಂದ್ರವಾಗಿ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು