ಉಡುಪಿ: ದುಷ್ಕರ್ಮಿಗಳು ಮೀನಿಗೆ ವಿಷ ಬೆರೆಸಿ ಸುಮಾರು ಹತ್ತಕ್ಕೂ ಅಧಿಕ ನಾಯಿಗಳ ಮಾರಣ ಹೋಮ ನಡೆಸಿದ ಅಮಾನೀಯ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲದ ಮಾಂಡವಿ ಎಮಿರಾಲ್ಡ್ ಕಟ್ಟ ಬಳಿ ನಾಯಿಗಳ ಮಾರಣ ಹೋಮ ನಡೆದಿದೆ.
ವಿಷ ಸೇವಿಸಿದ ನಾಯಿಗಳು ಸುರಿಯುವ ಮಳೆಯಲ್ಲಿ ಒದ್ದಾಡಿ ಪ್ರಾಣ ಬಿಡುವ ಸ್ಥಿತಿ ಪ್ರಾಣಿ ಪ್ರಿಯರ ಕರುಳು ಹಿಂಡುವತ್ತಿದೆ. ಬೀದಿ ನಾಯಿಗಳ ಸಮಸ್ಯೆಯಿಂದ ಮುಕ್ತ ಪಡೆಯುವ ಉದ್ದೇಶದಿಂದ ಉಡುಪಿಯಲ್ಲಿ ಕೆಲವು ದುಷ್ಕರ್ಮಿಗಳು ಈ ಕೃತ್ಯವನ್ನು ಎಸಗುತ್ತಿದ್ದಾರೆ.
ಸ್ಥಳೀಯರಯ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರಾಣಿ ಪ್ರೇಮಿ ಬಬಿತಾ ಮಧ್ವರಾಜ್ ಅವರು ದೂರನ್ನು ನೀಡಿದ್ದಾರೆ.