ಶಿರಾ/ನೆಲ್ಯಾಡಿ: ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ವಿಆರ್ ಎಲ್ ಲಾರಿಗೆ ಹಿಂದಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರಾ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರ ಕಾಮತ್ ಹೊಟೇಲ್ ಮುಂಭಾಗ ನಡೆದಿದೆ.
ಇನ್ನೊಂದು ಪ್ರಕರಣದಲ್ಲಿ ಸೋಮವಾರ ತಡರಾತ್ರಿ ಉಪ್ಪಿನಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲ್ಯಾಡಿಯಲ್ಲಿ ಲಾರಿ ಮತ್ತು ಬೊಲೆರೋ ಡಿಕ್ಕಿಯಾಗಿ 3ಮಂದಿ ಸಾವನ್ನಪ್ಪಿದರು. ನೆಲ್ಯಾಡಿ ಪರಿಸರ ನಿವಾಸಿಗಳಾದ ಅಬ್ದುಲ್ ಸತ್ತಾರ್, ಶೈಲೇಶ್, ಶ್ಯಾಂಸನ್ ಅವರು ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಿ ಭೇಟಿ ನೀಡಿದ್ದಾರೆ.