News Kannada
Saturday, November 26 2022

ಕರಾವಳಿ

ಪ್ರಧಾನಿ ಆಗಮನಕ್ಕೆ ಕಾಯದೆ ಪರಿಹಾರ ಬಿಡುಗಡೆ ಮಾಡಲು ವೀರಪ್ಪ ಮೊಯ್ಲಿ ಆಗ್ರಹ - 1 min read

Photo Credit :

ಪ್ರಧಾನಿ ಆಗಮನಕ್ಕೆ ಕಾಯದೆ ಪರಿಹಾರ ಬಿಡುಗಡೆ ಮಾಡಲು ವೀರಪ್ಪ ಮೊಯ್ಲಿ ಆಗ್ರಹ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಭಿಕರ ಪ್ರವಾಹಕ್ಕೆ ತುತ್ತಾಗಿ ಇಪ್ಪತ್ತು ದಿನಗಳೇ ಕಳೆದಿದ್ದರೂ ಕೇಂದ್ರ ಸರಕಾರ ಇನ್ನೂ ಯಾವುದೇ ಪರಿಹಾರ ನೀಡಿಲ್ಲ, ಪ್ರವಾಹ ಸಂತ್ರಸ್ಥರಿಗೆ ಪರಿಹಾರ ಘೋಷಿಸಲು ಪ್ರಧಾನಿಯ ಬರುವಿಕೆಗಾಗಿ ಕಾಯಲಾಗುತ್ತಿದೆ, ಇದು ಪ್ರವಾಹ ಸಂತ್ರಸ್ತರ ಬಗ್ಗೆ ಸರಕಾರ ಹೊಂದಿರುವ ಧೋರಣೆಯನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ಮುಖಂಡ ಎಂ ವೀರಪ್ಪ ಮೊಯಿಲಿ ಅವರು ಆರೋಪಿಸಿದರು.

ಅವರು ಶುಕ್ರವಾರ ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನಿಡಿ ಪ್ರವಾಹ ಸಂತ್ರಸ್ಥರ ಅಹವಾಲು ಆಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕೇಂದ್ರ ಸರಕಾರದ ಗೃಹ ಸಚಿವರು, ಹಣಕಾಸು ಸಚಿವರೂ ಬಂದು ಇಲ್ಲಿನ ಪ್ರವಾಹದ ತೀವ್ರತೆಯನ್ನು ನೋಡಿ ಹೋಗಿದ್ದಾರೆ. ಪ್ರಧಾನಿಯ ಬರುವಿಕೆಗಾಗಿ ಕಾಯದೆ ರಾಜ್ಯಕ್ಕೆ ತಾತ್ಕಾಲಿಕ ಪರಿಹಾರವನ್ನಾದರೂ ಘೋಷಿಸಿ ಜನರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಬೇಕಾಗಿತ್ತು ಎಂದ ಅವರು, ರಾಜ್ಯದಲ್ಲಿಯೂ ಸರಕಾರವೇ ಇಲ್ಲದ ಸ್ಥಿತಿಯಿದ್ದು, ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ಹಾಗೂ ಪೋಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿದ್ದರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದ ಅಧಿಕಾರಿಗಳ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಿತ್ತು ಎಂದರು.

ಕೇಂದ್ರದಿಂದ ಆಗಮಿಸಿರುವ ಅಧ್ಯಯನ ತಂಡಗಳು ಕೇವಲ ನೆರೆಪೀಡಿತ ಪ್ರದೇಶಗಳನ್ನು ಕಾರಿನಲ್ಲಿ ನೋಡಿ ಹೋಗುತ್ತಿದ್ದಾರೆ, ಅತ್ಯಂತ ಹೆಚ್ಚು ಹಾನಿಯಾಗಿರುವ ಬೆಳ್ತಂಗಡಿ ತಾಲೂಕಿಗೆ ಕೇಂದ್ರದ ತಂಡವೇ ಆಗಮಿಸಿಲ್ಲ, ಕೇಂದ್ರಸರಕಾರ ಈಬಗ್ಗೆ ಗಮನಹರಿಸಬೇಕಾಗಿದೆ. ರಾಜ್ಯದಲ್ಲಿ ಆಗಿರುವ ನಷ್ಟದ ಹಾಗೂ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ವರದಿ ನೀಡಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

ರಾಜ್ಯದ ಹೆಚ್ಚಿನ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಹೋಗಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ, ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ, ಸಾವಿರಾರು ಎಕ್ರೆ ಕೃಷಿ ಹಾನಿಯಾಗಿದೆ, ಇದೆಲ್ಲವನ್ನೂ ಸರಕಾರ ಗಮನಿಸಿ ಸಂತ್ರಸ್ಥರ ನೆರವಿಗೆ ನಿಲ್ಲಬೇಕಾಗಿದೆ ಎಂದರು. ಈಗಾಗಲೇ ಕಾಂಗ್ರೆಸ್ ಪಕ್ಷವು ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರವಾಹ ಪೀಡಿತರನ್ನು ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದು ಈ ಬಗ್ಗೆ ತಕ್ಷಣ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಪಾಲರಲ್ಲಿ ಮನವಿಯನ್ನು ಮಾಡಿದೆ. 2009ರಲ್ಲಿ ಕಾಂಗ್ರೆಸ್ ಆಡಳಿತವಿರುವಾಗ ಪ್ರವಾಹ ಬಂದಿದ್ದು ಆಗಿನ ಪ್ರಧಾನಿ ಮನಮೋಹನ್ ಸಿಂಗ್‍ರವರು ರಾಜ್ಯಕ್ಕೆ ಭೇಟಿ ನೀಡಿ ತಕ್ಷಣ 1600ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು ಎಂದರು.

ಪಶ್ಚಿಮ ಘಟ್ಟದಿಂದ ಜರಿತ ಉಂಟಾಗಿ ಅನಾಹುತ ಸಂಭವಿಸಿದ್ದು ಇದು ಮುಂದೆಯೂ ಅಪಾಯಕಾರಿಯಾಗಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಜ್ಞಾನಿಗಳ ತಂಡವನ್ನು ಅದ್ಯಯನ ನಡೆಸಿ ಮುಂದೆ ಈ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ವಾಸಿಸಲು ಯೋಗ್ಯವೇ ಎಂಬುದನ್ನು ಪರಿಶೀಲಿಸಬೇಕು ಇಲ್ಲವಾದಲ್ಲಿ ಬದಲಿ ವ್ಯವಸ್ಥೆಯನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಹರ್ಷ ಮೊೈಲಿ, ನಗರ ಬ್ಲಾಕ್ ಅಧ್ಯಕ್ಷ ರಾಜಶೇಖರ ಅಜ್ರಿ, ಜಿ.ಪಂ ಸದಸರಾದ ಶೇಖರ ಕುಕ್ಕೇಡಿ, ನಮಿತಾ, ತಾ.ಪಂ ಸದಸ್ಯ ಪ್ರವೀಣ್ ಗೌಡ, ತಾ. ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಮುಖಂಡರಾದ ಶೈಲೇಶ್ ಕುಮಾರ್, ಕೇಶವ ಬೆಳಾಲು, ಈಶ್ವರ ಭಟ್, ಅಶ್ರಫ್ ನೆರಿಯ, ಹರೀಶ ಗೌಡ ಬಂದಾರು, ಲೋಕೇಶ್ವರೀ ವಿನಯಚಂದ್ರ, ಸುಂದರ ಗೌಡ, ಜೆಸೀಂತಾ ಮೋನಿಸ್, ವಿನ್ಸೆಂಟ್ ಮಡಂತ್ಯಾರು, ಅಬ್ದುಲ್ ರಹಿಮಾನ್ ಪಡ್ಪು, ರಮೇಶ ಪೂಜಾರಿ, ಮೆಹಬೂಬ್ ಬೆಳ್ತಂಗಡಿ, ಪ್ರಭಾಕರ ಓಡಿಲ್ನಾಳ, ಅನೂಪ್ ಪಾಯಸ್,ಮೊದಲಾದವರು ಉಪಸ್ಥಿತರಿದ್ದರು.

See also  ಗ್ಯಾಸ್ ಸ್ಟವ್ ನ ಬೆಂಕಿ ತಗುಲಿ ಮಹಿಳೆ ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು