News Kannada
Saturday, December 03 2022

ಕರಾವಳಿ

ಸಾಧನೆಯ ಹಾದಿಯಲ್ಲಿ ಯುವ ಕಲಾವಿದೆ ಕೃತಿಕಾ

Photo Credit :

ಸಾಧನೆಯ ಹಾದಿಯಲ್ಲಿ ಯುವ ಕಲಾವಿದೆ ಕೃತಿಕಾ

ಸಾಧಿಸ ಬಲ್ಲೆಯೆಂಬ ಹಠ, ಕಲೆಯನ್ನು ಆರಾಧಿಸುವ ಗುಣವಿದ್ದರೆ ಏನ್ನನ್ನು ಸಾಧಿಸಬಹುದು ಎಂಬುದಕ್ಕೆ ಗುರುವಿಲ್ಲದೆ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಕೃತಿಕಾ ಅರಿಗ ಸಾಕ್ಷಿ. ಬಾಲ್ಯದಲ್ಲೇ ತನ್ನ ಅಭಿರುಚಿಯೊಂದಿಗೆ ಚಿತ್ರಕಲೆಯನ್ನು ಅಭ್ಯಾಸ ಮಾಡಿದ ಕೃತಿಕಾ ಇದೀಗ ಅಬ್ ಸ್ಟ್ರಾಕ್ಟ್ ಪೇಟಿಂಗ್ ಮುಖಾಂತರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

ಮಂಗಳೂರಿನ ಗೋಪಾಲಕೃಷ್ಣ ಅರಿಗ ಹಾಗೂ ಶರ್ಮಿಳಾ ಅರಿಗ ದಂಪತಿಯ ಪುತ್ರಿ ಕೃತಿಕಾ ಬಾಲ್ಯದಿನಿಂದಲೇ ಚಿತ್ರಕಲೆಯಲ್ಲೇ ಅಪಾರ ಆಸಕ್ತಿಯನ್ನು ಹೊಂದಿದ್ದರು. ಎರಡನೇ ತರಗತಿಯಿಂದಲೇ ತನ್ನಷ್ಟಕ್ಕೇ ಚಿತ್ರ ಗೀಚುತ್ತಿದ್ದ ಈಕೆಗೆ  ತನ್ನ ಶಾಲಾ ದಿನಗಳಲ್ಲಿ ಹಲವು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತನ್ನ ಪಾಡಿಗೆ ಚಿತ್ರಕಲೆ ಅಭ್ಯಾಸ ಮಾಡುತ್ತಿದ್ದ ಈಕೆಗೆ ಯೂಟ್ಯೂಬ್ ಮುಖಾಂತರ ಅಬ್ ಸ್ಟ್ರಾಕ್ಟ್ ಪೇಟಿಂಗ್ ನ ಪರಿಚಯವಾಗುತ್ತದೆ. ಯೂಟ್ಯೂಬ್ ಮುಖಾಂತರನೇ ಅಬ್ ಸ್ಟ್ರಾಕ್ಟ್ ಪೇಟಿಂಗ್ ಕಲಿತ ಈಕೆ ಯಾರದೇ ಮಾರ್ಗದರ್ಶನವಿಲ್ಲದೆ 300ಕ್ಕೂ ಅಧಿಕ ಪೇಟಿಂಗ್ ಮಾಡಿದ್ದಾರೆ.

ಅಬ್ ಸ್ಟ್ರಾಕ್ಟ್ ಶೈಲಿಯ ಚಿತ್ರಕಲೆ ಭಾರತದ ಗಮನಾರ್ಹ ಚಿತ್ರಕಲೆ ಸಾಲಿನಲ್ಲಿ ನಿಲ್ಲುತ್ತದೆ. ಕಲಾವಿದನ ಒಳನೋಟದಲ್ಲಿ ಮೂಡುವ ರೂಪ, ಮನುಷ್ಯನ ಮನಸ್ಸನ್ನು ಪ್ರತಿಬಿಂಬಿಸುವ ಚಿತ್ರಕಲೆಯೇ ಅಬ್ ಸ್ಟ್ರಾಕ್ಟ್ ಪೇಟಿಂಗ್. ಕಲಾವಿದನಾದವನಿಗೆ ತನ್ನದೇ ಕಲ್ಪನಾ ಲೋಕ, ತಾಳ್ಮೆ ಮತ್ತು ನೈಪುಣ್ಯತೆಯಿದ್ದರೆ ಮಾತ್ರ ಅಬ್ ಸ್ಟ್ರಾಕ್ಟ್ ಪೇಟಿಂಗ್ ನಲ್ಲಿ ಸಾಧನೆ ಮಾಡಲು ಸಾಧ್ಯ.

ಈಕೆಯ ಕಲ್ಪನೆಯಲ್ಲಿ ರೂಪಗೊಂಡ ಚಿತ್ರಗಳು ಸೂಜಿಗಲ್ಲಿನಂತೆ ಆಕರ್ಷಣೆಯನ್ನು ಮಾಡುತ್ತದೆ. ಪ್ರತಿಯೊಂದು ಚಿತ್ರವೂ ಒಬ್ಬೊಬ್ಬರಿಗೆ ಒಂದೊಂದು ಕಲ್ಪನೆಯನ್ನು ಕಟ್ಟಿಕೊಡುತ್ತಿದೆ.

‘ನನ್ನಹೆಚ್ಚಿನ ಪೇಟಿಂಗ್ ಗಳು ಮನುಸ್ಯನ ಮಾನಸಿಕ ವೇದನೆಗಳನ್ನು ವ್ಯಕ್ತಪಡಿಸುತ್ತದೆ. ಪ್ರಾರಂಭಿಕ ಹಂತದಲ್ಲಿ ಬೇರೆಯವರ ಪೇಟಿಂಗ್ ನ್ನು ನೋಡಿ ಮಾಡುತ್ತಿದೆ. ಇದೀಗ ನನ್ನ ಆಲೋಚನೆಯಲ್ಲೇ ಮೂಡುವ ಕಲ್ಪನೆಯನ್ನು ಚಿತ್ರರೂಪಕ್ಕೆ ಇಳಿಸುತ್ತೇನೆ. ಇದೀಗ ತೃಷಾದಲ್ಲಿ  ಬಿಕಾಂ ಜತೆ ಸಿಎ ಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಮೊದಲ ಪ್ರಧಾನ್ಯತೆಯನ್ನು ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದು, ಬಿಡುವಿನ ವೇಳೆ ಫೇಟಿಂಗ್ ಮಾಡುತ್ತಿದ್ದು, ಮುಂದೆ ಕೆಲಸದ ಜತೆ ಚಿತ್ರಕಲೆಗೂ ಸಮಯವಿಡುತ್ತೇನೆ’.

See also  ಪೇಜಾವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ: ವೈದ್ಯರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು