News Kannada
Sunday, November 27 2022

ಕರಾವಳಿ

ಅಂತರ್‍ ಕಾಲೇಜು ಮಟ್ಟದ ಫುಟ್‍ಬಾಲ್: ಬ್ರಹ್ಮಾವರ ಕ್ರಾಸ್ ಲ್ಯಾಂಡ್ ತಂಡ ಪ್ರಥಮ, ಆಳ್ವಾಸ್ ದ್ವಿತೀಯ - 1 min read

Photo Credit :

ಅಂತರ್‍ ಕಾಲೇಜು ಮಟ್ಟದ ಫುಟ್‍ಬಾಲ್: ಬ್ರಹ್ಮಾವರ ಕ್ರಾಸ್ ಲ್ಯಾಂಡ್ ತಂಡ ಪ್ರಥಮ, ಆಳ್ವಾಸ್ ದ್ವಿತೀಯ

ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಮತ್ತು ಸಮಾಜ ಮಂದಿರ ಸಭಾದ ಸಂಯುಕ್ತ ಆಶ್ರಯದಲ್ಲಿ ಜಿ.ವಿ.ಪೈ ಸ್ಟೇಡಿಯಂನಲ್ಲಿ 2 ದಿನ ನಡೆದ ಮಂಗಳೂರು ವಿವಿ ಅಂತರ್‍ ಕಾಲೇಜು ಉಡುಪಿ ವಲಯ ಮಟ್ಟದ ಫುಟ್‍ಬಾಲ್ ಪಂದ್ಯಾಟದಲ್ಲಿ ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜಿನ ತಂಡವು ಪ್ರಥಮ ಮತ್ತು ಮೂಡುಬಿದಿರೆಯ ಆಳ್ವಾಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ತೃತೀಯ ಮತ್ತು ಐಕಳ ಪೊಂಪೈ ಕಾಲೇಜಿನ ತಂಡವು ಚತುರ್ಥ ಸ್ಥಾನವನ್ನು ಗಳಿಸಿಕೊಂಡಿದೆ. ಆಟದಲ್ಲಿ ಕ್ರಾಸ್ ಲ್ಯಾಂಡ್ ತಂಡದ ವಿಕ್ಕಿ ಉತ್ತಮ ಹಿಡಿತಗಾರ ಮತ್ತು ಗ್ಲ್ಯಾಡ್ಸನ್ ಉತ್ತಮ ಗೋಲ್‍ಕೀಪರ್‍ ಗಳಾಗಿ ಹೊರಹೊಮ್ಮಿದ್ದಾರೆ.

ಮಂಗಳವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಬಹುಮಾನಗಳನ್ನು ವಿತರಿಸಿ ಮಾತನಾಡಿ ಫುಟ್ ಬಾಲ್ ಸಾಮಥ್ರ್ಯವನ್ನು ವ್ಯಕ್ತಪಡಿಸುವ ಆಟ. ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಉದ್ಯಮಿ ಅಬುಲ್ ಅಲಾ ಪುತ್ತಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಕೊಳ್ಳಲು ಮಾದಕ ದ್ರವ್ಯಗಳಿಗೆ ಮೊರೆ ಹೋಗದಿರಿ. ಮಾದಕ ದ್ರವ್ಯ ಸೇವಿಸಿದರೆ ನಿಮಗೆ ಒಂದು ಸಲ ಶಕ್ತಿ ಹೆಚ್ಚಬಹುದು. ಆದರೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ ಎಂದು ಎಚ್ಚರಿಸಿದರು.

See also  ಪರಿಸರವನ್ನು ಅರಿಯಲು ಇಲ್ಲೊಂದು ಶಿಬಿರ: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಪರಿಸರದ ಪಾಠ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು