News Kannada
Wednesday, November 30 2022

ಕರಾವಳಿ

ಇಳಂತಿಲದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಳದಲ್ಲಿ ಅಪೂರ್ವ ತುಳುಶಾಸನ ಪತ್ತೆ - 1 min read

Photo Credit :

ಇಳಂತಿಲದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಳದಲ್ಲಿ ಅಪೂರ್ವ ತುಳುಶಾಸನ ಪತ್ತೆ

ಬೆಳ್ತಂಗಡಿ: ತುಳು ಶಾಸನವೊಂದು ತಾಲೂಕಿನ ಇಳಂತಿಲ ಗ್ರಾಮದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಂಡು ಬಂದಿದ್ದು ಇದು ಬಹು ಪ್ರಾಚೀನವೆಂದು ತಜ್ಞರಾದ ಡಾ. ವೈ. ಉಮಾನಾಥ ಶೆಣೈ ಮತ್ತು ಡಾ. ಎಸ್.ಆರ್.ವಿಘ್ನರಾಜ ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 36 ವರ್ಷಗಳಿಂದ ದೇವಾಲಯದ ಆಗ್ನೇಯ ಮೂಲೆಯ ಕೋಣೆಯಲ್ಲಿದ್ದು ಸುಮಾರು 37 ಇಂಚು ಎತ್ತರ ಹಾಗೂ 13 ಇಂಚು ಅಗಲದ ಈ ಶಿಲಾಖಂಡವು ಪ್ರಾಚೀನ ಶಾಸನ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಭೂತದ ಕಲ್ಲು ಎಂದು ಭಾವಿಸಲಾಗಿದ್ದ ಈ ಕಲ್ಲಿನ ಕುರಿತು ಜ್ಯೋತಿಷಿಗಳು ಅನುಮಾನಗೊಂಡು ವಿಶ್ಲೇಷಿಸಿದಾಗ ದೇವಸ್ಥಾನ ಆಡಳಿ ಮೊಕ್ತೇಸರ ಸೂಚನೆಯಂತೆ ಹಿರಿಯ ಶಾಸನ ತಜ್ಞ ಡಾ. ವೈ. ಉಮಾನಾಥ ಶೆಣೈ ಮತ್ತು ಡಾ. ಎಸ್.ಆರ್.ವಿಘ್ನರಾಜರನ್ನು ಕರೆಸಿ ಓದಿಸಿದಾಗ ಇದು ಒಟ್ಟು 8 ಪಂಕ್ತಿಗಳಲ್ಲಿ ಬರೆದಿರುವ ಕ್ರಿ.ಶ. ಸುಮಾರು 16ನೇ ಶತಮಾನದ ಒಂದು ಅಪೂರ್ವ ತುಳುಶಾಸನವೆಂದು ತಿಳಿದು ಬಂದಿದೆ.

ಶಾಸನದಲ್ಲಿ ಎರಡು ವಿಚಾರಗಳನ್ನು ತಿಳಿಸಲಾಗಿದೆ. ಇಚ್ಚೂರ ಉದಕಮಣಿ ಎಂದು ಪ್ರಸಿದ್ಧರಾದ ಈ ಬಾಲಸುಬ್ರಹ್ಮಣ್ಯ ದೇವರ ದೇವಾಲಯವು ರಾಜನಿರ್ಮಿತವಾದುದು. ಆದರೆ ಇಲ್ಲಿ ರಾಜನ ಹೆಸರು ಉಲ್ಲೇಖಗೊಂಡಿಲ್ಲ. ಉಳಿದಂತೆ ಮಾಚಾರ ಸಮಾಜದ ವಾಸಪ್ಪ ಎಂಬವನು ಶಾಸನವನ್ನು ರಚಿಸಿ ಈ ಶಿಲೆಯ ಮೇಲೆ ಬರೆದ. ನಾಗಗಳಿಗೆ ಮತ್ತು ಜಲಕ್ಕೆ ದೇವತೆಯಾಗಿರುವ ಸುಬ್ರಹ್ಮಣ್ಯನನ್ನು ಇಲ್ಲಿ ಉದಕಮಣಿ ಎಂದು ವಿಶೇಷವಾಗಿ ಕರೆಯಲಾಗುತ್ತಿತ್ತು. ಇಂದಿಗೂ ಇಲ್ಲಿ ಶ್ರೀ ಬಾಲಸುಬ್ರಹ್ಮಣ್ಯನನ್ನು ನೀರಿಗಾಗಿ ಪ್ರಾರ್ಥಿಸಿ ಧಾರಾಳ ನೀರನ್ನು ಪಡೆಯಲಾಗುತ್ತದೆ. ಆದುದರಿಂದ ಪ್ರಾಚೀನ ಕಾಲದಿಂದಲೂ ಉದಕಮಣಿಯೆಂದು ಶ್ರೀ ದೇವರನ್ನು ಸಂಭೋದಿಸಲಾಗುತ್ತಿತ್ತು.

ಈ ಶಾಸನವನ್ನು ಓದುವುದರಲ್ಲಿ ಧರ್ಮಸ್ಥಳದ ಪವನಕುಮಾರ್ ಸಹಕರಿಸಿದ್ದರು. ದೇವಾಲಯದ ಆಡಳಿತ ಮೊಕ್ತೇಸರ ಹಾಗೂ ಅರ್ಚಕರಾದ ಸತೀಶ ಪುತ್ತೂರಾಯ ಮತ್ತು ಅವರ ಸಹೋದರ ಸೂರ್ಯನಾರಾಯಣ ಪುತ್ತೂರಾಯರು ವ್ಯವಸ್ಥೆಗೊಳಿಸಿದ್ದರು. ಚರಸ್ಥಿತಿಯಲ್ಲಿದ್ದ ಈ ಶಿಲಾಶಾಸನವನ್ನು ಈಗ ಸುರಕ್ಷಿತವಾಗಿ ಇಡಲಾಗಿದೆ.

ಶಾಸನದಲ್ಲಿನ ತುಳು ಲಿಪಿಯಲ್ಲಿನ ಕೆಲವು ಪದಗಳು
-ಸ್ವಸ್ತಿಶ್ರೀ
-ಹ (ಇ) ಚ್ಚೂರ ಉದಕ
-ಮಣಿಗಾದ್
-ರಾಜಕೃತ
-ಜ್ಜೆ (?) ಮಾಜಾರ
-ನರಮಾನಿಯೆರೆ
-ಮಾ (ವಾ) ಸಪ್ಪೆರೆ
-ಪದ ಬರಹ (ವು)

See also  ನಮ್ಮ ಮತ ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ: ಮಂಗಳೂರು ಕ್ರೈಸ್ತರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು