News Kannada
Friday, September 30 2022

ಕರಾವಳಿ

ಬೆಳ್ತಂಗಡಿಯಲ್ಲಿ ನಕ್ಸಲ್ ಕೂಂಬಿಂಗ್ ಆರಂಭ - 1 min read

Photo Credit :

ಬೆಳ್ತಂಗಡಿಯಲ್ಲಿ ನಕ್ಸಲ್ ಕೂಂಬಿಂಗ್ ಆರಂಭ

ಬೆಳ್ತಂಗಡಿ: ಮೂವರು ನಕ್ಸಲರನ್ನು ಕೇರಳದ ಅರಣ್ಯಪ್ರದೇಶದಲ್ಲಿ ಎನ್‍ಕೌಂಟರ್ ಮಾಡಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ನಡೆಸುವ ಮೂಲಕ ಎಚ್ಚರಿಕೆ ವಹಿಸಿದೆ.

ತಾಲೂಕಿನಲ್ಲಿ ಹನ್ನೊಂದು ಗ್ರಾಮಗಳನ್ನು ನಕ್ಸಲ್ ಬಾಧಿತ ಎಂದು ಈ ಹಿಂದೆ ಗುರುತಿಸಲಾಗಿದ್ದರೂ ಇತ್ತೀಚಿನ ಕೆಲ ವರ್ಷಗಳಲ್ಲಿ ಬಲಕುಗ್ಗಿದೆ. ಆದರೂ ಮುನ್ನಚ್ಚೆರಕಿದೆ ಕ್ರಮವಾಗಿ ವೇಣೂರು ಸೇರಿದಂತೆ ಮಿತ್ತಬಾಗಿಲು ಗ್ರಾಮದ ಕೊಲ್ಲಿ ಪ್ರದೇಶದಲ್ಲಿ ಮಂಗಳವಾರದಿಂದ ತಲಾ 20 ಮಂದಿ ನಿಗ್ರಹಪಡೆಯ ಸಿಬ್ಬಂದಿ ಎರಡು ತಂಡಗಳಲ್ಲಿ ಶೋಧ ಕಾರ್ಯ ಮಾಡುತ್ತಿವೆ.

ತಾಲೂಕಿನ ರಾಷ್ಟ್ರೀಯ ಉದ್ಯಾನವನದೊಳಗಿರುವ ನಕ್ಸಲ್ ಬಾಧಿತ ಪ್ರದೇಶವೆಂದೇ ಹೆಸರಾದ ನಾರಾವಿ, ಕುತ್ಲೂರು, ನಾವರ, ಎಳನೀರು, ಸುಲ್ಕೇರಿಮೊಗ್ರು, ಶಿರ್ಲಾಲು, ದಿಡುಪೆ, ಕೊಲ್ಲಿ ಪ್ರದೇಶಗಳಲ್ಲಿ ಕೂಬಿಂಗ್ ನಡೆಸಲು ಉದ್ದೇಶಿಸಲಾಗಿದೆ. ಸಾಕೇತ್ ರಾಜನ್ ಎಂಬಾತನ ಹತ್ಯೆಯದ ಬಳಿಕ ತಾಲೂಕಿನ ರಾಷ್ಟ್ರೀಯ ಉದ್ಯಾನವನದೊಳಗಿನ ಚಟುವಟಿಕೆಗಳು ನಿಂತು ಹೋಗಿವೆ.

ಕಳೆದ ಎರಡು ದಿನಗಳಿಂದ ಈ ಕಾರ್ಯಾಚರಣೆ ಮುಂದುವರಿದಿದ್ದು ಇನ್ನೂ ಒಂದೆರಡು ದಿನ ಮುಂದುವರಿಯುವ ಸಾಧ್ಯತೆಯಿದೆ. ಕೇರಳದಲ್ಲಿ ಹತರಾಗಿರುವ ನಕ್ಸಲೀಯರು ಕರ್ನಾಟಕ ಮೂಲದವರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಶಬ್ದವಾಗಿರುವ ಚಳವಳಿಯ ಬಗ್ಗೆ ಪೋಲೀಸರು ಹೆಚ್ಚು ಗಮನಹರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಕೂಂಬಿಂಗ್ ಕರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಕೇರಳದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ರಾಜ್ಯದ ಮಲೆನಾಡಿನ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ರಾಜ್ಯದ ಮಲೆನಾಡಿನಲ್ಲಿ ನಕ್ಸಲ್ ನಿಗ್ರಹದಳದವರು ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಮುಖ್ಯವಾಗಿ ಬೆಳ್ತಂಗಡಿ ತಾಲೂಕಿನ ಕುತ್ಲೂರು ರಾಷ್ಟ್ರೀಯ ಉಧುನವನದ ಒಳಗಿನ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಅದೇರೀತಿ ತಾಲೂಕಿನ ಶಿಲಾಲು, ನಾವೂರು, ಮಿತ್ತಬಾಗಿಲು ಮಲವಂತಗೆ ಪ್ರದೇಶಗಳು ಸೇರಿದಂತೆ ಕುದುರೇಮುಖ ರಾಷ್ಟ್ರೀಯ ಉಧ್ಯಾನವನದ ಒಳಗಿನ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.

See also  ಲಾರಿ - ನ್ಯಾನೋ ಡಿಕ್ಕಿ: ಇಬ್ಬರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು