News Kannada
Sunday, September 25 2022

ಕರಾವಳಿ

ಅಭಿವ್ಯಕ್ತಿಗೆ ಅವಕಾಶದಿಂದ ಸೃಜನಶೀಲತೆಯ ವಿಕಾಸ: ಡಾ.ಕೆ.ಆರ್.ಶ್ರೀಧರ್ - 1 min read

Photo Credit :

ಅಭಿವ್ಯಕ್ತಿಗೆ ಅವಕಾಶದಿಂದ ಸೃಜನಶೀಲತೆಯ ವಿಕಾಸ: ಡಾ.ಕೆ.ಆರ್.ಶ್ರೀಧರ್

ಮೂಡುಬಿದಿರೆ: ಉತ್ತಮ ಹವ್ಯಾಸಗಳು ಸೃಜನಶೀಲತೆಯ ಜತೆಗೆ ವ್ಯಕ್ತಿತ್ವವನ್ನೂ ಅರಳಿಸುತ್ತವೆ. ಆದರೆ ಜೀವನಾಡಿಗಳಂತಿರುವ ಸಂಸ್ಕøತಿ, ಪರಂಪರೆ, ಸಂಶೋಧನೆ, ಸಾಹಿತ್ಯ, ಲಲಿತಕಲೆಯತ್ತ ಎಳೆಯರನ್ನು ಪ್ರೋತ್ಸಾಹಿಸದೇ ಬರೇ ಅಂಕಗಳಿಕೆಗೆ ಒತ್ತು ನೀಡುವ ಹೆತ್ತವರ ಮನೋಭಾವ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಎಳೆಯರಿಗೆ ಸಕಾರಾತ್ಮಕ ಸ್ಪಂದನ, ಅಭಿವ್ಯಕ್ತಿಗೆ ಅವಕಾಶ, ನೀಡಬೇಕು. ಎಂದು ಶಿವಮೊಗ್ಗದ ಹಿರಿಯ ಸಾಹಿತಿ ಮನೋವೈದ್ಯ ಡಾ.ಕೆ.ಆರ್.ಶ್ರೀಧರ್ ಹೇಳಿದರು. ಅವರು ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘದ ವತಿಯಿಂದ ಕನ್ನಡ ಭವನದ ಆವರಣದಲ್ಲಿ ಶುಕ್ರವಾರ ಎರಡು ದಿನಗಳ ಕಾಂತಾವರ ಉತ್ಸವ-2019 ಉದ್ಘಾಟಿಸಿ ಮಾತನಾಡಿದರು. ಇಂದಿನ ಜೀವನ ಶೈಲಿಯಲ್ಲಿ ವೈದ್ಯಕೀಯ ಸಾಹಿತ್ಯವೂ ಅರೋಗ್ಯಕರ ಸಮಾಜಕ್ಕೆ ಉತ್ತ ಕೊಡುಗೆ ನೀಡಲು ಶಕ್ತವಾಗಿದೆ ಎಂದವರು ಹೇಳಿದರು.

ಸರ್ಕಾರ ಮಾಡದ ಕನ್ನಡದ ಕೆಲಸ ಮತ್ತು ಪ್ರೊತ್ಸಾಹವನ್ನು ಕಾಂತಾವರ ಕನ್ನಡ ಸಂಘದ ಮೂಲಕ ಮೊಗಸಾಲೆ ಮಾಡುತ್ತಿದ್ದಾರೆ. ಇದು ಹಣವಂತರಿಂದಲೂ ಮಾಡಲಾಗದ ಕೆಲಸ. ಹಾಗಾಗಿ ಕಾಂತಾವರದ ಕನ್ನಡದ ಕೆಲಸವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಕನ್ನಡ ಸಂಘದ ದತ್ತಿನಿಧಿಯಿಂದ ಐವರು ಸಾಧಕರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಸಿ ಮಾತನಾಡಿದರು.
ಪ್ರಶಸ್ತಿ ಪ್ರದಾನ:
ಧಾರವಾಡದ ಮನೋಹರ ಗ್ರಂಥ ಮಾಲೆಗೆ ಡಾ.ರಮಾಕಾಂತ ಜೋಷಿ ಮೂಲಕ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕರ್ನಾಟಕ ಸಾಂಸ್ಕøತಿಕ ಏಕೀಕರಣ ಪ್ರಶಸ್ತಿ, ಪುಟ್ಟು ಕುಲಕರ್ಣಿಯವರಿಗೆ ಡಾ.ಯು.ಪಿ.ಉಪಾಧ್ಯಾಯ ದಂಪತಿ ಪ್ರತಿಷ್ಠಾನದ ಸಂಶೋಧನಾ ಮಹೋಪಧ್ಯಾಯ ಪ್ರಶಸ್ತಿ, ಉಡುಪಿಯ ಶಾರದಾ ಭಟ್ ಅವರಿಗೆ ಕಾಂತಾವರ ಸಾಹಿತ್ಯ ಪುರಸ್ಕಾರ, ಡಾ.ಎಸ್.ಆರ್.ವಿಘ್ನರಾಜ ಅವರಿಗೆ ವಿದ್ವತ್ ಪರಂಪರಾ ಪುರಸ್ಕಾರ, ಜಲವರ್ಣ ಕಲಾವಿದ ಪಿ.ಎಸ್.ಪುಂಚಿತ್ತಾಯ ಅವರಿಗೆ ಕಾಂತಾವರ ಲಲಿತಕಲಾ ಪುರಸ್ಕಾರವನ್ನು ತಲಾ ಹತ್ತು ಸಾವಿರ ಗೌರವ ನಗದು ಸಹಿತ ತಾಮ್ರಫಲಕ, ಸಮ್ಮಾನದೊಂದಿಗೆ ಪ್ರದಾನ ಮಾಡಲಾಯಿತು.
ಶಿವಮೊಗ್ಗ ಕನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ಅಧ್ಯಕ್ಷತೆಯಲ್ಲಿ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ.ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಬಿ.ಗಣಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ನಿರಂಜನ ಎನ್.ಮೊಗಸಾಲೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು.

ಇಂದು ನಾಡಿಗೆ ನಮಸ್ಕಾರ:
ಕಾಂತಾವರ ಉತ್ಸವದ ಎರಡನೇ ದಿನವಾದ ಶನಿವಾರ ಬೆಳಿಗ್ಗೆ ಕನ್ನಡ ಭವನದ ಆವರಣದಲ್ಲಿ ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ನೂತನ 11 ಕೃತಿಗಳ ಲೋಕಾರ್ಪಣೆಯನ್ನು ಪರಿಸರ ಚಿಂತಕ ಡಾ. ನರೇಂದ್ರ ರೈ ದೇರ್ಲ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಕನ್ನಡ ಸಂಸ್ಕøತಿ ಇಲಾಖೆಯ ಉಡುಪಿ ಜಿಲ್ಲಾ ನಿರ್ದೇಶಕ ಶ್ರೀಕುಮಾರ್ ಬೆಟ್ಕೇರಿ ಅತಿಥಿಯಾಗಿದ್ದು ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ ಬೆಂಗಳೂರಿನ ಕು. ಉಪಾಸನಾ ಗುರ್ಜರ್ ಅವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವಿದೆ.

See also  ಪುತ್ತೂರಿನಲ್ಲಿ ನಾಪತ್ತೆಯಾಗಿದ್ದ ಮಾನಸಿಕ ವ್ಯಕ್ತಿಯ ಶವ ಕೆರೆಯಲ್ಲಿ ಪತ್ತೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು