ಮಂಗಳೂರು: ಅನಿಲ ಟ್ಯಾಂಕರ್ ನ ಮೇಲ್ಭಾಗದ ವಾಲ್ಟ್ ಏಕಾಏಕಿ ತೆರೆದುಕೊಂಡ ಪರಿಣಾಮ ಅನಿಲ ಸೋರಿಕೆಯಾದ ಘಟನೆ ಉಪ್ಪಿನಂಗಡಿ ಸಮೀಪದ ಕರ್ವೇಲ್ ನಲ್ಲಿ ಸೋಮವಾರ ನಡೆದಿದೆ.
ಅನಿಲ ಟ್ಯಾಂಕರ್ ಹಾಸನದ ಕಡೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.ಲಾರಿ ನಿಂತಿದ್ದ ಪ್ರದೇಶದ ಅಕ್ಕಪಕ್ಕದ ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಲಾಯಿತು.
ಪೊಲೀಸರು ಮತ್ತು ತುರ್ತು ಅನಿಲ ಸೋರಿಕೆ ಕಾರ್ಯಾಚರಣೆ ದಳದ ಸಿಬ್ಬಂದಿ ಒಂದೂವರೆ ಗಂಟೆ ಶ್ರಮಪಟ್ಟು ಸೋರಿಕೆ ತಡೆಗಟ್ಟಿದ್ದಾರೆ.