News Kannada
Friday, October 07 2022

ಕರಾವಳಿ

ಆದಿವಾಸಿಗಳಿಗೆ ಪಡಿತರ ಚೀಟಿಯಲ್ಲಿ ವಿನಾಯಿತಿ ನೀಡಲು ಒತ್ತಾಯ - 1 min read

Photo Credit :

ಆದಿವಾಸಿಗಳಿಗೆ ಪಡಿತರ ಚೀಟಿಯಲ್ಲಿ ವಿನಾಯಿತಿ ನೀಡಲು ಒತ್ತಾಯ

ಬೆಳ್ತಂಗಡಿ: ಬಣ್ಣ ಬಣ್ಣದ ಪಡಿತರ ಚೀಟಿಯ ಹೆಸರಿನಲ್ಲಿ ಆದಿವಾಸಿಗಳ ಮೇಲೆ ಸವಾರಿ ಮಾಡುವ ಸರ್ಕಾರಗಳು ತನ್ನ ಜನವಿರೋಧಿ ನೀತಿಗಳನ್ನು ಬದಲಾವಣೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವರ‍್ಯ. ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ಎಚ್ಚರಿಸಿದೆ.

ಬೆಳ್ತಂಗಡಿಯಲ್ಲಿ ಮಂಗಳವಾರ  ಆದಿವಾಸಿ ಹಕ್ಕುಗಳ ಸಮಿತಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ವಿಚಾರ ತಿಳಿಸಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ವಸಂತ ನಡ ಮಾತನಾಡಿ, ಆನೆ ಕಾರಿಡಾರ್, ಪುಷ್ಪಗಿರಿ ಉದ್ಯಾನವನ, ಕಸ್ತೂರಿ ರಂಗನ್ ಮೊದಲಾದ ಯೋಜನೆಗಳ ಹೆಸರಿನಲ್ಲಿ ಆದಿವಾಸಿಗಳನ್ನು ಮೇಲೆ ಸವಾರಿ ಮಾಡುತ್ತಿದೆ. ಇದೀಗ ಪಡಿತರ ಚೀಟಿ ಹೆಸರಿನಲ್ಲಿ ಬಡವರ ಮೇಲೆ ಹೊಡೆತ ಬೀಳುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ. ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಬಿಪಿಎಲ್ ಪಡಿತರ ಚೀಟಿಯನ್ನು ಆದಿವಾಸಿ ಕುಟುಂಬಗಳಿಂದ ಕಿತ್ತುಕೊಳ್ಳದೇ ಅವರಿಗೆ ಮಾನ್ಯತೆ ನೀಡಬೇಕು ಎಂದರು.

ಸಮಿತಿಯ ಜಿಲ್ಲಾ ಸಹ ಸಂಚಾಲಕ ಶೇಖರ ಲಾಯಿಲ ಮಾತನಾಡಿ, ರಾಷ್ಟ್ರೀಯ ಉದ್ಯಾನವನದೊಳಗೆ ಮೂಲಭೂತ ಸೌಕರ್ಯ ಕೊಡದೆ ಜನರು ಸುಮಾರು 15 ಕಿ.ಮೀ. ನಡೆದುಕೊಂಡೇ ಹೋಗಬೇಕಾಗಿದೆ. ಅನಿವಾರ್ಯ ಕಡೆಗಳಲ್ಲಿ ರಸ್ತೆಗಳಿದ್ದರೂ ಯಾವುದೇ ಹೊರಗಿನ ವಾಹನಗಳು ಇಲ್ಲಿಗೆ ಬಾಡಿಗೆ ಬರುತ್ತಿಲ್ಲ. ಕಷ್ಟಪಟ್ಟು ಸಾಲ ಮಾಡಿ ಹಳೆಯ ವಾಹನ ಖರೀದಿಸಿದ ಆದಿವಾಸಿಗಳ ಮೇಲೆ ಪಡಿತರ ಚೀಟಿಯ ನೆಪದಲ್ಲಿ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸರಿಯಲ್ಲ. ಆದಿವಾಸಿಗಳಿಗೆ ಸರಕಾರ ಮಾಡಿದ ಮಾನದಂಡದಲ್ಲಿ ವಿನಾಯಿತಿಯನ್ನು ನೀಡಬೇಕು. ಯಾವುದೇ ಕ್ರಮ ಕೈಗೊಳ್ಳಬಾರದು. ಒಂದು ವೇಳೆ ಕ್ರಮ ಕೈಗೊಂಡರೆ ಮುಂದಿನ ತಿಂಗಳು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆಯುವ ಆದಿವಾಸಿ ಹಕ್ಕುಗಳ ರಾಜ್ಯ ಮಟ್ಟದ ಸಮಾವೇಶದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಿ ರಾಜ್ಯ ಮಟ್ಟದ ಹೋರಾಟಕ್ಕೆ ತೀರ್ಮಾನಕ್ಕೆ ಕೈಗೊಳ್ಳಲಾಗುವುದು ಎಂದು ಎಂದು ಎಚ್ಚರಿಸಿದರು.

ಸಮಿತಿಯ ತಾಲೂಕು ಪ್ರದಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಮಾತನಾಡಿ, ಗ್ಯಾಸ್ ನೀಡಿದ ಬಳಿಕ ಆದಿವಾಸಿಗಳಿಗೆ ಸೀಮೆಎಣ್ಣೆಯನ್ನು ವಿತರಣೆ ಮಾಡುತ್ತಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ, ಸೀಮೆಎಣ್ಣೆಯೂ ಇಲ್ಲ. ಇದರಿಂದ ಆದಿವಾಸಿಗಳು ಕತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ. ಕಳಪೆ ಸೋಲಾರ್ ನೀಡಿದ್ದು, ಅದು ಪ್ರೋಜನಕ್ಕೆ ಬಾರದ ರೀತಿಯಲ್ಲಿದೆ. ಒಂದೋ ಸೀಮೆ ಎಣ್ಣೆ ನೀಡಲಿ, ಇಲ್ಲವಾದರೆ ವಿದ್ಯುತ್ ಸಂಪರ್ಕ ಕಲ್ಪಿಸಲಿ ಎಂದರು. 

ನವೆಂಬರ್ 25ರಂದು ನೆರೆ ಪರಿಹಾರಕ್ಕಾಗಿ ಪ್ರತಿಭಟನೆ

 ನೆರೆ ಸಂತ್ರಸ್ತರ ಬದುಕುವ ಹಕ್ಕನ್ನು ಎತ್ತಿಹಿಡಿಯಲು ನ.25ರಂದು ನಮ್ಮ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿವಿಧಾನ ಸೌಧದ ಎದುರು ಧರಣಿ ಸತ್ಯಾಗ್ರಹ ನಡೆಯಲಿದೆ. ಈ ಪ್ರತಿಭಟನೆಗೆ ಹಲವಾರು ಪ್ರಗತಿಪರ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿವೆ ಎಂದು ಸಮಿತಿ ತಿಳಿಸಿದೆ.

ಗೋಷ್ಟಿಯಲ್ಲಿ ಸಮಿತಿಯ ಉಪಾಧ್ಯಕ್ಷ ಲಕ್ಷö್ಮಣ ಅಲಂಗಾಯಿ, ಜತೆ ಕಾರ್ಯದರ್ಶಿ ನವೀನ್ ಬಾಂಜಾರು ಇದ್ದರು.

See also  ಶ್ರೇಷ್ಠ ಬರಹಕ್ಕೆ ಕಾಳಜಿ ಅವಶ್ಯ: ಪೂರ್ಣಪ್ರಜ್ಞಾ ಬೇಳೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು