ಉಡುಪಿ: ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಜೀವನದ ಬಹುದೊಡ್ಡ ಅಪೇಕ್ಷೆ ಈಡೇರುತ್ತಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನನಗೆ ಸಂತಸವಾಗಿದೆ. ವಿವಾದಿತ ಭೂಮಿಯು ರಾಮಲಲ್ಲಾಗೆ ಸಿಕ್ಕಿದೆ. ಮಸೀದಿಗೆ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಐದು ಎಕರೆ ಜಮೀನು ನೀಡಲು ಸೂಚಿಸಲಾಗಿದೆ. ತೀರ್ಪು ನ್ಯಾಯಯುತವಾಗಿದೆ ಎಂದು ತೀರ್ಪಿನ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಪೇಜಾವರ ಶ್ರೀ ತಿಳಿಸಿದರು.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಹಿಂದೂಗಳಿಗೆ ಮುಸ್ಲಿಮರು ಕೈಜೋಡಿಸಿದರೆ, ಆಗ ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಕೈಜೋಡಿಸುವರು. ಸೌಹಾರ್ದತೆಯ ಹೊಸ ಯುಗ ಆರಂಭವಾಗಲಿ ಎಂದು ಅವರು ಹೇಳಿದರು.