ಬೆಳ್ತಂಗಡಿ: ಅಯೋಧ್ಯೆ ಶ್ರೀರಾಮಜನ್ಮಭೂಮಿ ತೀರ್ಪಿನ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಹರ್ಷ ವ್ಯಕ್ತವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ಅಲ್ಲಲ್ಲಿ ವಿರಳವಾಗಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮುಸ್ಲಿಂ ಬಾಹುಳ್ಯ ಪ್ರದೇಶವಾದ ಪಿಲಿಚಂಡಿಕಲ್ಲು ಪರಿಸರದಲ್ಲಿ ಹೆಚ್ಚುವರಿ ಪೊಲೀಸರ ಕಾವಲು ಹಾಕಲಾಗಿತ್ತು. ಉಳಿದಂತೆ ತಾಲೂಕಿನ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಗೇರುಕಟ್ಟೆ, ಮಡಂತ್ಯಾರು, ನಾರಾವಿ, ವೇಣೂರು, ಅಳದಂಗಡಿ, ಕಕ್ಕಿಂಜೆ, ಸೋಮಂತಡ್ಕ, ಕಾಜೂರು ಮೊದಲಾದ ಪ್ರಮುಖ ಪೇಟೆಗಳಲ್ಲಿ ವ್ಯಾಪಾರ ವ್ಯವಹಾರ, ಜನಜೀವನ ಸಾಮಾನ್ಯವಾಗಿತ್ತು.