ಬೆಳ್ತಂಗಡಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನ ಮೇಲೆ ಮೇಲೆ ಫೋಕ್ಸೋ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಹೋಲಿ ರೆಡಿಮೀರ್ ಆಂಗ್ಲ ಮಾಧ್ಯಮ ಶಾಲೆಯ ಎಂಟು ವರ್ಷದ ಬಾಲಕಿಯನ್ನು ಮಂಗಳವಾರ ಶಾಲೆ ಬಿಟ್ಟ ಬಳಿಕ ಕರಂಬಾರು ಎಂಬಲ್ಲಿನ ಗೌತಮ್(22) ಎಂಬಾತ ಪುಸಲಾಯಿಸಿ ಸನಿಹದ ಕೋಡಂಗೆ ಎಂಬಲ್ಲಿಯ ಗುಡ್ಡೆಯೊಂದಕ್ಕೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ.
ಈ ಸಂದರ್ಭ ಬಾಲಕಿ ಜೋರಾಗಿ ಕೂಗಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಮನೆ ಸೇರಿದ್ದಾಳೆ. ಲೈಂಗಿಕ ಕಿರುಕುಳ ನೀಡಿದ ಗೌತಮ್ ಮೇಲೆ ವೇಣೂರು ಪೋಲಿಸ್ ಠಾಣೆಯಲ್ಲಿ ಫೋಕ್ಸೋ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲ್ಪಟ್ಟಿದೆ.