ಮಂಗಳೂರು: ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ‘ಪ್ರಿ ಯೂನಿಕ್ 2019′ ಎಂಬ ವಿಜ್ಞಾನ ತಂತ್ರಜ್ಞಾನ ಸ್ಪರ್ಧೆ ನಡೆಯಿತು.
ಅದರಲ್ಲಿ ದ್ವಿತೀಯ ಸ್ಥಾನವನ್ನು ಸೃಜನ್ ಪ್ರಸಾದ್ ಮತ್ತು ಜೋಯೆಲ್ ಮೋರಸ್ ಇಬ್ಬರೂ ಮಂಗಳೂರಿನ ಕ್ಯಾಂಬ್ರಿಡ್ಜ್ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳು ಪಡೆದುಕೊಂಡರು.
ಸೃಜನ್ ಪ್ರಸಾದ್ ಮಂಗಳೂರಿನ ನ್ಯಾಯವಾದಿ ರಾಮಪ್ರಸಾದ್ ರವರ ಪುತ್ರ. ಜೋಯೆಲ್ ಕುಪ್ಪೆಪದವು ಜೋಸೆಫ್ ಮೋರಸ್ ಅವರ ಪುತ್ರ.