ಕಸದಿಂದ ರಸ ಎನ್ನುವ ಮಾತುಜನಜನಿತ. ಇದು ಮನೆಯಅಲಂಕಾರಕ್ಕೂಅನ್ವಯವಾಗುತ್ತದೆ. ಬೇಡವೆಂದು ಬಿಸಾಡುವ ವಸ್ತುಗಳಿಗೆ ಹೊಸ ರೂಪು ನೀಡಿ ಮನೆಯಅಂದ ಹೆಚ್ಚಿಸಲು ಸಾಧ್ಯವಿದೆ. ಇದಕ್ಕೆಒಂದಷ್ಟು ಕ್ರಿಯಾಶೀಲತೆ ಮತ್ತು ತಾಳ್ಮೆ ಇದ್ದರೆ ಸಾಕು. ಮನೆಯಲ್ಲಿರುವ ಹಳೆಯ ವಸ್ತುಗಳನ್ನು ವ್ಯರ್ಥವೆಂದು ಬಿಸಾಡುವವರು ಸಾಕಷ್ಟು ಜನರಿದ್ದಾರೆ. ಇವುಗಳಲ್ಲಿ ಬಹುತೇಕತ್ಯಾಜ್ಯ ವಸ್ತುಗಳಿಗೆ ಹೊಸ ರೂಪ ನೀಡಲು ಸಾದ್ಯವಿದೆ. ಇವುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಮಾರ್ಪಡಿಸಿ ಮನೆಯಅಂದವನ್ನು ಹೆಚ್ಚಿಸಿಕೊಳ್ಳಬಹುದುಎಂಬುದಕ್ಕೆ ಪುಷ್ಪಇವರೇ ಸಾಕ್ಷಿ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವಲಕ್ಷದೀಪೋತ್ಸವದ ಸ್ವಸಹಾಯ ಸಂಘಗಳ ಮಳಿಗೆಯಲ್ಲಿ ಹಳೆಯ ಉಡುಪುಗಳಿಂದ ಮ್ಯಾಟ್‌ತಯಾರಿಸುವದೃಶ್ಯಜನರ ಗಮನ ಸೆಳೆಯುತ್ತಿದೆ. ಧರ್ಮಸ್ಥಳ ಗ್ರಾಮದದೊಂಡೋಲೆಯ ನಾರ್ಯ ಎಂಬಲ್ಲಿನ ಪುಷ್ಪ ಬಿಡುವಿನ ಸಮಯದಲ್ಲಿತನ್ನತಾಯಿ ಕಲಿಸಿದ ವಿದ್ಯೆಯನ್ನುಕರಗತ ಮಾಡಿಕೊಂಡು ವ್ಯರ್ಥಪೂರ್ಣವಾದ ವಸ್ತುಗಳನ್ನು ಅರ್ಥಪೂರ್ಣವಾಗಿಸಿ ದಿನಬಳಕೆಗೆ ಉಪಯೋಗಿಸುವಂತೆ ಮಾರ್ಪಾಡು ಮಾಡುತ್ತಿದ್ದಾರೆ.
ಇವರು ಸುಮಾರುಐದು ವರ್ಷಗಳಿಂದ ಈ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಇದನ್ನುಕೈಯಲ್ಲೇಸಿದ್ಧಪಡಿಸುತ್ತಿದ್ದು,ಇವುಗಳಲ್ಲಿ ತ್ರಿಭುಜಾಕಾರ, ನಕ್ಷತ್ರಾಕಾರ, ಚೌಕಾಕಾರ, ವೃತ್ತಾಕಾರಇನ್ನುಇತರ ಶೈಲಿಯ ಮಾದರಿಗಳಿವೆ.ಅವರ ಮನೆಯಲ್ಲಿತಯಾರಿಸಿದ ಮ್ಯಾಟ್‌ಗಳನ್ನು ಸೂಕ್ತವಾದ ಬೆಲೆಗೆ ಮಾರಾಟ ಮಾಡುತ್ತಾರೆ. ಇದಲ್ಲದೇತಮ್ಮ ಬಿಡುವಿನ ವೇಳೆಯಲ್ಲಿ ಆಸಕ್ತಿಯುಳ್ಳವರಿಗೆ ಮಾರ್ಗದರ್ಶನ ನೀಡುತ್ತಾರೆ.
ಇದರವಿಶೇಷತೆಯೇನೆಂದರೆಕಡಿಮೆ ಬೆಲೆಗೆ ಸಿಗುವುದಲ್ಲದೇತುಂಬಾ ವರ್ಷಗಳ ಕಾಲ ಬಾಳಿಕೆ ಬರುವ ಗುಣಮಟ್ಟವುಳ್ಳ ಗೃಹೋಪಯೋಗಿ ವಸ್ತುವಾಗಿದ್ದುಯಾವುದೇರೀತಿಯ ಬಟ್ಟೆಗಳಿಂದ ಬೇಕಾದ ಶೈಲಿ, ಆಕಾರದಲ್ಲಿತಯಾರಿಸಬಹುದು.
ಹೀಗೆ ಎಷ್ಟೋ ಬಳಕೆಯಾಗದ ವಸ್ತುಗಳು ನಮ್ಮ ಸುತ್ತ-ಮುತ್ತಲಿನಲ್ಲೇಇರುತ್ತವೆ. ಅಂತಹುವುಗಳನ್ನೇ ಬಳಸಿ ಹೇಗೆ ಉಪಯುಕ್ತಗೊಳಿಸಬೇಕು ಎಂಬುದನ್ನು ಪುಷ್ಪಅವರಕೌಶಲ್ಯ ನಿರೂಪಿಸುತ್ತದೆ.