ಮಂಗಳೂರು: ಯೆನೆಪೋಯ ನರ್ಸಿಂಗ್ ಕಾಲೇಜಿನ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಶುಶ್ರುಷಾ ವಿಭಾಗದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಮಧುಮೇಹ ಹಾಗೂ ಅದರ ನಿಯಂತ್ರಣ ಕುರಿತು ಆರೋಗ್ಯ ಶಿಕ್ಷಣವನ್ನು ಈಚೆಗೆ ಕನಕಮುಗೇರುವಿನಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಶುಶ್ರುಷಾ ವಿಭಾಗದ ಮುಖ್ಯಸ್ಥ ಪ್ರೊಫೆಸರ್. ಶಶಿಕುಮಾರ್ ಜಾವಡಗಿ ಉಪಸ್ಥಿತರಿದ್ದರು.
ಯೆನೆಪೋಯ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಗಿರೀಶ್ ಜಿ .ಆರ್ ಸ್ವಾಗತಿಸಿದರು. ಪ್ರೊಫೆಸರ್. ಶಶಿಕುಮಾರ್ ಜಾವಡಗಿ ಅವರು ವಿಶ್ವಮಧುಮೇಹ ದಿನದ ಪ್ರಾಮುಖ್ಯತೆಯನ್ನು ವಿವರಿಸಿದರು.
ಪ್ರಥಮ ವರ್ಷದ ಪಿ.ಬಿ. ಬಿ. ಎಸ್ಸಿ ಹಾಗೂ ದ್ವಿತೀಯ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಮಧುಮೇಹ ಹಾಗೂ ಅದರ ನಿಯಂತ್ರಣದ ಕುರಿತ ಆರೋಗ್ಯ ಶಿಕ್ಷಣವನ್ನು ಕಿರುನಾಟಕದ ಮೂಲಕ ಪ್ರದರ್ಶಿಸಿದರು. ಸುಮಾರು 30 ಜನ ನಾಗರಿಕರು ಪಾಲ್ಗೊಂಡಿದ್ದರು. ಯೆನೆಪೋಯ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಇಂದುಮತಿ ವಂದಿಸಿದರು ಹಾಗೂ ಉಪನ್ಯಾಸಕಿ ಕುಮಾರಿ ಪವಿತ್ರ ಕಾರ್ಯಕ್ರಮವನ್ನು ನಿರೂಪಿಸಿದರು.