News Kannada
Friday, December 02 2022

ಕರಾವಳಿ

ಪರವಾನಿಗೆ ಇಲ್ಲದೆ ಸಿಡಿಮದ್ದು ತಯಾರಿ: ಪುತ್ತೂರಿನಲ್ಲಿ ನಾಲ್ವರ ಬಂಧನ

Photo Credit :

ಪರವಾನಿಗೆ ಇಲ್ಲದೆ ಸಿಡಿಮದ್ದು ತಯಾರಿ: ಪುತ್ತೂರಿನಲ್ಲಿ ನಾಲ್ವರ ಬಂಧನ

ಪುತ್ತೂರು:  ನೆಟ್ಟಣಿ ಮುಡ್ನೂರು ಗ್ರಾಮದ ಈಶ್ವರಮಂಗಲ ಮಡ್ಯಲಮಜಲು ಎಂಬಲ್ಲಿ ಯಾವುದೇ ಪರವಾನಿಗೆ ಪಡೆಯದೆ ಕಾನೂನು ಬಾಹಿರವಾಗಿ ಸ್ಫೋಟಕ ಸಾಮಾಗ್ರಿಗಳನ್ನು ಬಳಸಿಕೊಂಡು ಸಿಡಿಮದ್ದು ತಯಾರಿಸುತ್ತಿದ್ದ ಅಕ್ರಮ ಸ್ಪೋಟಕ ವಸ್ತುಗಳ ತಯಾರಿಕಾ ಘಟಕಕ್ಕೆ ಪುತ್ತೂರು ಸಂಪ್ಯ ಎಸ್.ಐ ಸಕ್ತಿವೇಲು ಅವರ ನೇತೃತ್ವದ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.  

ಕಾಸರಗೋಡಿನ ಕೆಳುಗುಡ್ಡೆ ನಿವಾಸಿ ಮಹಾಲಿಂಗ ಪಾಟಾಳಿ ಅವರ ಪುತ್ರ ನರೇಂದ್ರನ್ ಅಲಿಯಾಸ್ ಬಾಬು(45ವ), ತ್ರಿಶೂರ್ ಜಿಲ್ಲೆಯ ಚೆಳಕೆರೆ ಗ್ರಾಮದ ತೀತನ್ ಅವರ ಪುತ್ರ ಟಿ.ಬಾಬು(53ವ), ತಮಿಳುನಾಡಿನ ವಿರುದ್ದ ನಗರ ಜಿಲ್ಲೆಯ ದೊರೆಸ್ವಾಮಿ ಪುರಂ ನಿವಾಸಿ ತಡಗಣಿ ಅವರ ಪುತ್ರ ಟಿ.ಕಾಳಿರಾಜ್(30ವ) ಮತ್ತು ತಮಿಳುನಾಡಿನ ವಿರುದುನಗರ ಜಿಲ್ಲೆಯ ತುರೈ ಸ್ವಾಮಿ ಪುರಂನ ಮಾರಿಯಪ್ಪ ಅವರ ಪುತ್ರ ಎಂ.ಕಮಲ ಕಣ್ಣನ್ (29ವ) ಬಂಧಿತ ಆರೋಪಿಗಳು. ಆರೋಪಿಗಳು ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಯಾಲ ಮಜಲು ಎಂಬಲ್ಲಿನ ಮಹಿಳೆಯೊಬ್ಬರಿಗೆ ಸೇರಿದ ತೋಟದಲ್ಲಿ ಗುಡಿಸಲು ನಿರ್ಮಿಸಿಕೊಂಡು ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿಕೊಂಡು ಸಿಡಿಮದ್ದು ತಯಾರಿಸಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಸರಬರಾಜು ಮಾಡುತ್ತಿದ್ದರೆಂಬ ಮಾಹಿತಿ ಪೊಲೀಸ್ ವಿಚಾರಣೆಯ ವೇಳೆ ಲಭಿಸಿದೆ. ಆರೋಪಿಗಳ ವಿರುದ್ಧ ಕಲಂ 286 ಐಪಿಸಿ , 9ಬಿ(ಎ) ಎಕ್ಸಪ್ಲೋಸಿವ್ ಆಕ್ಟ್ 1884  ಕಾಯ್ದೆಯಂತೆ ಪ್ರಕರಣ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

See also  ಕೇಂದ್ರ ಸರ್ಕಾರ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

188

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು