News Kannada
Sunday, November 27 2022

ಕರಾವಳಿ

ಹೊಸ ವರ್ಷದ ಶುಭಾರಂಭ: ಧರ್ಮಸ್ಥಳದಲ್ಲಿ ಭಕ್ತರಗಡಣ - 1 min read

Photo Credit :

ಹೊಸ ವರ್ಷದ ಶುಭಾರಂಭ: ಧರ್ಮಸ್ಥಳದಲ್ಲಿ ಭಕ್ತರಗಡಣ

ಬೆಳ್ತಂಗಡಿ: ಶ್ರೀಮಂಜುನಾಥ ಸ್ವಾಮಿಯ ನೆಲೆವೀಡಾದ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹೊಸ ವರ್ಷ ಶುಭಾರಂಭದ ದಿನವಾದ ಬುಧವಾರ ನಾಡಿನೆಲ್ಲೆಡೆಯಿಂದ ಸುಮಾರುಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ದೇವರದರ್ಶನ ಪಡೆದು ಸೇವೆ ಸಲ್ಲಿಸಿದರು.

ಹಲವು ಮಂದಿ ಪಾದಯಾತ್ರೆಯಲ್ಲಿ ಬಂದರೆ, ಕೆಲವರು ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬಂದು ತಮ್ಮ ಸೇವೆ ಸಲ್ಲಿಸಿದ್ದಾರೆ. ಅನೇಕ ಮಂದಿ “ಮುಡಿ” ಅರ್ಪಿಸಿ (ತಲೆಕೂದಲು ತೆಗೆಸಿ) ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ದೇವರದರ್ಶನದ ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಮಂಜೂಷಾ ವಸ್ತು ಸಂಗ್ರಹಾಲಯ, ಕಾರ್ ಮ್ಯೂಸಿಯಂ, ಮಂಜುನಾಥೇಶ್ವರ ಸಂಸ್ಕøತಿ ಸಂಶೋಧನಾ ಪ್ರತಿಷ್ಠಾನ ವೀಕ್ಷಿಸಿ ತಮ್ಮಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಂಡರು. 

ಬೆಂಗಳೂರಿನ ಭಕ್ತಾದಿಗಳಿಂದ ಪುಷ್ಪಾಲಂಕಾರ ಸೇವೆ:  ಬೆಂಗಳೂರಿನ ಚಂದ್ರಾ ಲೇಔಟ್ ನಿವಾಸಿಗಳಾದ ಸಾಯಿ ಸರವಣ, ಗೋಪಾಲ ರಾವ್, ಆನಂದ, ಮಂಜುನಾಥರಾವ್, ಧರ್ಮಸ್ಥಳಕ್ಕೆ ಮಂಗಳವಾರವೇ ಬಂದು ದೇವಸ್ಥಾನಮತ್ತು ಹೆಗ್ಗಡೆಯವರ ಬೀಡು (ನಿವಾಸ) ಹಾಗೂ ಇತರ ಕಟ್ಟಡಗಳನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿದ್ದಾರೆ.

ಭತ್ತದತೆನೆ, ಕಬ್ಬು, ದಾಳಿಂಬೆ, ಬಾಳೆ ದಿಂಡು, ತೆಂಗಿನಗರಿ, ತಾವರೆ, ಲಿಲಿಯಂ, ಆಂತೂರಿಯಂ, ಜಮೈಕಾನ್ ಎಲೆ ಸೇರಿದಂತೆಆರು ಲೋಡ್ ಪರಿಸರ ಸ್ನೇಹಿ ಅಲಂಕಾರಿಕ ಪರಿಕರಗಳನ್ನು ಬಳಸಿ ಆಕರ್ಷಕವಾಗಿ ಸಿಂಗರಿಸಿ ಸೇವೆ ಮಾಡಿಧನ್ಯತೆಯನ್ನು ಹೊಂದಿದ್ದಾರೆ.

ಕಳೆದ 12 ವರ್ಷಗಳಿಂದ ಪ್ರತಿ ವರ್ಷ ಹೊಸವರ್ಷ ಶುಭಾರಂಭದ ದಿನ ತಾವುಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬಂದುಅಲಂಕಾರ ಸೇವೆ ಮಾಡುತ್ತಿದ್ದುತಮ್ಮ ವ್ಯವಹಾರದಲ್ಲಿಅಭಿವೃದ್ಧಿಯಾಗಿ, ಶಾಂತಿ, ನೆಮ್ಮದಿ ದೊರಕುತ್ತದೆಎಂದು ಸೇವಾಕರ್ತರತಂಡದ ನಾಯಕಎಸ್. ಗೋಪಾಲ ರಾವ್ ತಿಳಿಸಿದ್ದಾರೆ.

See also  ಬಸ್ಸು-ಆಟೋ ಡಿಕ್ಕಿ: ಆಟೋ ಚಾಲಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು