News Kannada
Thursday, December 01 2022

ಕರಾವಳಿ

ಕ್ರೀಡೆ ಪಠ್ಯೇತರ ವಿಷಯವಾಗದೆ ಶಿಕ್ಷಣದ ಭಾಗವಾಗಲಿ- ಕ್ರೀಡಾ ಸಚಿವ ಕಿರೆಣ್ ರೆಜಿಜು

Photo Credit :

ಕ್ರೀಡೆ ಪಠ್ಯೇತರ ವಿಷಯವಾಗದೆ ಶಿಕ್ಷಣದ ಭಾಗವಾಗಲಿ- ಕ್ರೀಡಾ ಸಚಿವ ಕಿರೆಣ್ ರೆಜಿಜು

ಮೂಡುಬಿದಿರೆ: ಕೇವಲ ಆರ್ಥಿಕ, ಸಾಂಸ್ಕೃತಿಕ ರಂಗದಲ್ಲಿ ಮಾತ್ರವಲ್ಲ ಕ್ರೀಡಾಕ್ಷೇತ್ರದಲ್ಲೂ ಭಾರತದ ಸಾಧನೆ ಮುಖ್ಯ. ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಸಾಧನೆಯನ್ನು ಮೆರೆಯಲು ಈಗಾಗಲೇ ಸಜ್ಜಾಗಿದ್ದು ಟೋಕಿಯೋ 2020 ಒಲಂಪಿಕ್ಸ್ ನಲ್ಲಿ ಭಾರತ ಭಾಗಿಯಾಗಲಿದೆ. ಅಸ್ಸಾಂ, ಒಡಿಸ್ಸಾ ಪ್ರದೇಶದಲ್ಲಿ ಭಾರತೀಯ ಯುವಜನಾಂಗವನ್ನುದ್ದೇಶಿಸಿ ಕ್ರೀಡಾಕೂಟಗಳನ್ನು ಆಯೋಜಿಸಲಿದೆ. ಕ್ರೀಡೆ ಕೇವಲ ಪಠ್ಯೇತರ ವಿಷಯವಾಗಿರದೆ ಪಠ್ಯದ ಅವಿಭಾಜ್ಯ ಅಂಗವಾಗಬೇಕೆನ್ನುವ ನಿಟ್ಟಿನಲ್ಲಿ ಶಾಲೆ, ಯುವಜನಾಂಗ, ವಿಶ್ವವಿದ್ಯಾಲಯವೆಂಬ ವಿಭಾಗವನ್ನಿರಿಸಿ ಮುಂದಿನ ಕ್ರೀಡಾಕೂಟಗಳನ್ನು ನಡೆಸಲಿದ್ದೇವೆ ಎಂದು ಕೇಂದ್ರ ಯುವ ಸಬಲೀಕರಣ, ಕ್ರೀಡಾ ಸಚಿವ ಕಿರೆಣ್ ರೆಜಿಜು ತಿಳಿಸಿದರು.

ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಗುರುವಾರ ಸಂಜೆ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆರಂಭಗೊಂಡ ಐದು ದಿನಗಳ 80 ನೇ ಅಖಿಲ ಭಾರತ ಅಂತರ್ ವಿ.ವಿ. ಅಥ್ಲೆಟಿಕ್ ಚಾಂಪಿಯನ್‍ಶಿಪ್ ಉದ್ಘಾಟಿಸಿ ಮಾತನಾಡಿದರು.

ಭಾರತದ ಪ್ರಧಾನ ಮಂತ್ರಿಗಳು ಕ್ರೀಡಾತ್ಮಕ ನೆಲೆಯಲ್ಲಿ ಉತ್ತಮ ಚಟುವಟಿಕೆಗಳು ನಡೆಯಬೇಕೆನ್ನುವ ಉದ್ದೇಶವಿರಿಸಿ ನನಗೆ ಈ ಅಧಿಕಾರವನ್ನು ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾವೀಗಾಗಲೇ ನಿರ್ಧರಿತ ಗುರಿ ಸಾಧಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

ಕ್ರೀಡಾ ಸೌಲಭ್ಯ: ಕ್ರೀಡಾ ಕೌಶಲ್ಯದ ಕಲೆಯನ್ನು ನಾವು ಆರ್ಜಿಸಿಕೊಳ್ಳಬೇಕು. ಕ್ರೀಡಾಳುಗಳು ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಅನುಭವಿಸಬಾರದು. ಕಷ್ಠದಲ್ಲಿರುವ ಕ್ರೀಡಾ ಸಾಧಕರು ಹಾಗೂ ಅವರ ಕುಟುಂಬ ವರ್ಗದವರಿಗೆ ಆರ್ಥಿಕ, ಆರೋಗ್ಯ ಇತರ ಸೌಲಭ್ಯವನ್ನು ನಾವು ಕೊಡಲಿದ್ದೇವೆ. ಆಟಗಾರರೇ ನಮ್ಮ ದೇಶದ ತಾರೆಗಳು. ಭಾರತದ ವಾಣಿಜ್ಯ ಜಗತ್ತು ವಿಶ್ವವಿದ್ಯಾಲಯದ ಜೊತೆಗೆ ಸೇರಿಕೊಂಡು ಕ್ರೀಡಾಭಿವೃದ್ದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಸದೃಢ ಭಾರತ ಚಳವಳಿ: ಜೀವನಕ್ಕೆ ಕ್ರೀಡೆಯು ಅತೀ ಅಗತ್ಯವಾದ್ದರಿಂದ ಕ್ರೀಡೆ ಕೇವಲ ಹುದ್ದೆ, ಹವ್ಯಾಸವಾಗದೆ ಸಂಸ್ಕೃತಿಯಾಗಬೇಕು. ರಾಮಾಯಣ, ಮಹಾಭಾರತ ಕಾಲದಿಂದ ವಿವಿಧ ಕ್ರೀಡೆಗಳು ಭಾರತದಲ್ಲಿ ಚಲಾವಣೆಯಲ್ಲಿದ್ದವು. ಆದರೆ ನಾವದನ್ನು ಮುಂದುವರೆಸಲಿಲ್ಲ. ಹೊಸ ಭಾರತ ಸದೃಢಭಾರತವಾಗಬೇಕು. ಸದೃಢ ಭಾರತ ಚಳುವಳಿ ಅದು ಜನರ ಚಳುವಳಿಯಾಗಬೇಕಾದರೆ ಭಾರತಕ್ಕೆ ಯುವಜನಾಂಗ ವರದಾನವಾಗಬೇಕಾಗಿದೆ ಎಂದು ಹೇಳಿದರು.

ವಿಶೇಷ ಸನ್ಮಾನ: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆಳ್ವಾಸ್ ಸಂಸ್ಥೆಯಐವರು ಕ್ರೀಡಾಪಟುಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು.ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ  ಸತೀಶ್ ರೈ, ಅಶ್ವಿನಿ ಅಕ್ಕುಂಜೆ, ಹಾಗೂ  ಎಂ.ಆರ್.ಪೂವಮ್ಮ,ಮೋಹನ್,  ಧಾರುಣ್ ಅಯ್ಯಸಾಮಿ ಪರವಾಗಿ ಪೋಷಕರನ್ನು ವಿಶೇಷವಾಗಿ ನಗದು ಪುರಸ್ಕಾರದೊಂದಿಗೆ ಸಮ್ಮಾನಿಸಲಾಯಿತು.

 

ಮಂಗಳೂರು ವಿವಿಯ ಮನೀಶ್ ಸಿಂಗ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.  ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕ್ರೀಡಾ ವಿದ್ಯಾರ್ಥಿಗಳು ಸಚಿವರಿಗೆ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು.

ರಾಜೀವ್‍ಗಾಂದಿ ಆರೋಗ್ಯ ವಿಜ್ಞಾನ ವಿ.ವಿಯ ಕುಲಪತಿ ಡಾ.ಎಸ್. ಸಚ್ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಂಸ್ಕೃತಿ ಸಚಿವ ಸಿ.ಟಿ.ರವಿ, ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್, ರಘುಪತಿ ಭಟ್, ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಹಾಗೂ ಅಮರನಾಥ ಶೆಟ್ಟಿ, ಬಿ,ರಮಾನಾಥ ರೈ,  ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಕಿಶೋರ್ ಆಳ್ವ, ಸುರೇಶ್ ಶೆಟ್ಟಿ, ರವೀಂದ್ರ ಆಳ್ವ, ಕೆನರಾ ಬ್ಯಾಂಕಿನ ಜಿ,ಎಂ.ಯೋಗೀಶ ಆಚಾರ್ಯ, ಆರ್‍ಜಿಯುಎಚ್‍ಎಸ್‍ನ ಕುಲಸಚಿವ ಡಾ.ಶಿವಾನಂದ ಕಪಾಶಿ, ಮೌಲ್ಯಮಾಪನ ವಿಭಾಗ ಕುಲಸಚಿವ ಡಾ.ಕೆ.ಬಿ.ಲಿಂಗೇಗೌಡ, ಡೆಪ್ಯುಟಿ ರಿಜಸ್ಟ್ರಾರ್ ಬಿ.ವಸಂತ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ,ಮ್ಯಾನೇಜ್‍ಮೆಂಟ್ ಟ್ರಸ್ಟೀ ವಿವೇಕ್ ಆಳ್ವ, ಟ್ರಸ್ಟೀ ವಿನಯ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಪ್ರಾಧ್ಯಾಪಕ ರಾಜೇಶ್ ಡಿಸೋಜಾ, ರೂಬಿ ಕುಮಾರ್. ಮುತ್ತು ಎಂ.ಎಲ್ ಕಾರ್ಯಕ್ರಮ ನಿರೂಪಿಸಿದರು.

See also  ರನ್ ವೇಯಲ್ಲಿ ಕಾಣಿಸಿಕೊಂಡ ಲಗೇಜ್ ಟ್ರಕ್: ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು