News Kannada
Friday, December 02 2022

ಕರಾವಳಿ

ಅಡಿಕೆ ಕೊಯ್ಲು ಗೆ ಹೈಟೆಕ್‍ ದೋಂಟಿ: ಧರ್ಮಸ್ಥಳದಲ್ಲಿ ಪ್ರಾತ್ಯಕ್ಷಿಕೆ

Photo Credit :

ಅಡಿಕೆ ಕೊಯ್ಲು ಗೆ ಹೈಟೆಕ್‍ ದೋಂಟಿ: ಧರ್ಮಸ್ಥಳದಲ್ಲಿ ಪ್ರಾತ್ಯಕ್ಷಿಕೆ

ಬೆಳ್ತಂಗಡಿ: ಅಡಿಕೆಕೊಯ್ಲು ಮತ್ತು ಬೋರ್ಡೊ ದ್ರಾವಣ ಸಿಂಪಡಣೆಗೆ ಅಮೆರಿಕಾದಲ್ಲಿರುವ ಹಾಸನ ಮೂಲದ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಸುಧಾರಿತ ಹೈಟೆಕ್ ದೋಂಟಿ ಸಂಶೋಧನೆ ಮಾಡಿದ್ದು, ಅವರು ಶುಕ್ರವಾರ ಧರ್ಮಸ್ಥಳದಲ್ಲಿರುವ ಹರ್ಪಾಡಿ ತೋಟದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಸವಿವರ ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಈವರೆಗೆ ಲಭ್ಯಇರುವ ಕೊಯ್ಲು ದೋಂಟಿಗಳಿಂದ ಇದು ವಿಭಿನ್ನವಾಗಿದ್ದು, ಯಾವುದೇ ಇಂಧನ ಅಥವಾ ವಿದ್ಯುತ್ ಬಳಸದೆ ಸುಲಭದಲ್ಲಿ ಉಪಯೋಗಿಸಬಹುದು. ಕ್ಯಾಂಪ್ಕೋದಅಡಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ದೋಂಟಿ ಬಳಕೆಗೆ ಸೂಕ್ತ ಪ್ರೋತ್ಸಾಹ ನೀಡಲು ಪ್ರಯತ್ನಿಸಲಾಗುವುದು. ರೈತರಗೆ ಇದು ವರದಾನವಾಗಿದೆ ಎಂದು ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

ದೋಂಟಿ ಸಂಶೋಧಕ ಹಾಗೂ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಮಾತನಾಡಿ, ಮಲೆನಾಡು ಪ್ರದೇಶದ ತೋಟಗಳಲ್ಲಿ ಈಗಾಗಲೆ ಇಪ್ಪತ್ತಕ್ಕೂ ಹೆಚ್ಚು ಇಂತಹ ದೋಂಟಿಗಳು ಬಳಕೆಯಲ್ಲಿವೆ. ಇದರಿಂದಾಗಿ ಕೂಲಿಕಾರ್ಮಿಕರ ಸಮಸ್ಯೆ ನಿವಾರಣೆಯಾಗುವುದಲ್ಲದೆ ತಿಂಗಳಿಗೆ 70,000ರೂ. ಉಳಿತಾಯವಾಗುತ್ತದೆ ಎಂದು ಹೇಳಿದರು.

ಪ್ರಸಕ್ತದೋಂಟಿಯ ಬೆಲೆ 80,000ರೂ.ಆಗಿದ್ದು, ಮುಂದೆ ರೈತರಿಗೆ ಕೈಗೆಟಕುವ ಮಿತ ದರದಲ್ಲಿ ಸಾಧಾರಣ ಹತ್ತು ಸಾವಿರರೂ.ಗೆ ದೊರಕುವಂತೆ ಮಾಡಲಾಗುವುದು ಎಂದು ಬಾಲಸುಬ್ರಹ್ಮಣ್ಯ ಭರವಸೆ ನೀಡಿದರು.

ದೋಂಟಿಯ ವಿಶೇಷತೆಗಳು:

  • ಅಡಿಕೆ ಮರ ಏರದೆ ಕೊಯ್ಲು ಹಾಗೂ ಔಷಧಿ ಸಿಂಪಡಣೆ ಮಾಡಬಹುದು.
  • 60ರಿಂದ 80 ಅಡಿ ಎತ್ತರದ ದೋಂಟಿ ಅಗತ್ಯಕ್ಕೆ ಬೇಕಾದಷ್ಟು ಎತ್ತರಿಸಿ ಲಾಕ್ ಮಾಡುವ ವ್ಯವಸ್ಥೆ.
  • ನಿಂತಲ್ಲೆ 360 ಡಿಗ್ರಿ ಸುತ್ತಮುತ್ತ ಹತ್ತು ಮರಗಳಿಗೆ ಔಷಧಿ ಸಿಂಪಡಣೆ ಸಾಧ್ಯ.
  • ಫೈಬರ್‍ ತಂತ್ರಜ್ಞಾನ ಬಳಕೆ. 20 ವರ್ಷ ಬಾಳಿಕೆ.

 ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್ ಮತ್ತುಕೃಷಿ ವಿಭಾಗದಮುಖ್ಯಸ್ಥ ಬಿ.ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

See also  ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಮೂಡುಬಿದಿರೆಗೆ ಆಗಮಿಸಿದ ಶ್ವಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು