News Kannada
Tuesday, December 06 2022

ಕರಾವಳಿ

ಕೊರೋನಾ ಹಿನ್ನೆಲೆಯಲ್ಲಿ ಗೂಡಂಗಡಿ ತೆರವುಗೊಳಿಸಿದ್ದಕ್ಕೆ ಕಾಂಗ್ರೆಸ್ ಪ್ರತಿಭಟನೆ

Photo Credit :

ಕೊರೋನಾ ಹಿನ್ನೆಲೆಯಲ್ಲಿ ಗೂಡಂಗಡಿ ತೆರವುಗೊಳಿಸಿದ್ದಕ್ಕೆ ಕಾಂಗ್ರೆಸ್ ಪ್ರತಿಭಟನೆ

ಬೆಳ್ತಂಗಡಿ: ಇಲ್ಲಿನ ನ.ಪಂ.ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಗೂಡಂಗಡಿ ಹಾಗೂ ಹಣ್ಣುಹಂಪಲು ಮಾರಾಟ ಅಂಗಡಿಗಳನ್ನು ಕೊರೋನಾ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತೆರವುಗೊಳಿಸುವಂತೆ ಕಳೆದ ಕೆಲ ದಿನಗಳಿಂದ ಸೂಚನೆ ನೀಡಿದರೂ ತೆರವುಗೊಳಿಸದ ಇದ್ದುದರಿಂದ ರವಿವಾರ ರಾತ್ರಿ ನ.ಪಂ. ಸಿಬ್ಬಂದಿಗಳು ಹಶೀಲ್ದಾರ್ ಉಪಸ್ಥಿತಿಯಲ್ಲಿ ತೆರವುಗೊಳಿಸಿದ್ದರು.

ಏಕಾಏಕಿ ಗೂಡಂಗಡಿ ತೆರವುಗೊಳಿಸುವ ಮೂಲಕ ನ.ಪಂ. ನವರು ವ್ಯಾಪರಸ್ಥರನ್ನು ಸಂಕಷ್ಟದ ಸಮಯದಲ್ಲಿ ಬೀದಿಗೆ ತಳ್ಳುವ ಕೆಲಸ ಮಾಡಿದೆ ಎಂದು ಆರೋಪಿಸಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ವ್ಯಾಪಾರಸ್ಥರು ಸೋಮವಾರ ನ.ಪಂ. ಮುಂದೆ ಧರಣಿ ನಡೆಸಿದರು.

ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದಲೂ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದ ಗೂಡಂಗಡಿಗಳನ್ನು ನ.ಪಂ. ಮುಖ್ಯಾಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ. ತೆರವುಗೊಳಿಸಿದರೆ ಎಲ್ಲವನ್ನೂ ತೆರವು ಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ.ಪಂ. ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಮಾತನಾಡಿ, ನಾವು ಕಾನೂನು ರೀತಿಯಲ್ಲೆ ತೆರವುಗೊಳಿಸಿದ್ದೇವೆ. ಈಗಾಗಲೆ ನ.ಪಂ. ವ್ಯಾಪ್ತಿಯಲ್ಲಿ 23 ಅನಧಿಕೃತ ಗೂಡಂಗಡಿಗಳಿವೆ. ಎಲ್ಲರಿಗೂ ತೆರವುಗೊಳಿಸಲು ಸೂಚನೆ ನೀಡಲಾಗುವುದು. ತಳ್ಳುಗಾಡಿಗಳ ಮೂಲಕ ಅಥವಾ ಸಂಚಾರಿ ವಾಹನದ ಮೂಲಕ ಹಣ್ಣು ಹಂಪಲು ಮಾರಾಟ ಮಾಡಬಹುದು. ನಿಯಮಾನುಸಾರ ವ್ಯಾಪಾರ ನಡೆಸದೇ ಹೋದಲ್ಲಿ ಎಲ್ಲಾ ಅಂಗಡಿ ತೆರವುಗೊಳಿಸಲಾಗುವುದು ಎಂದರು.

See also  ಕೈಕೊಟ್ಟ ಕೊಡವೂರು ಮತಯಂತ್ರ, ಮತದಾರರಿಂದ ಆಕ್ರೋಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು