News Kannada
Thursday, September 29 2022

ಕರಾವಳಿ

ಶಾಲೆಯಲ್ಲಿ ಪಾಕಶಾಲೆ ತೆರೆದ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆ - 1 min read

Photo Credit :

ಶಾಲೆಯಲ್ಲಿ ಪಾಕಶಾಲೆ ತೆರೆದ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆ

ಪುತ್ತೂರು: ಮೊನ್ನೆಮೊನ್ನೆವರೆಗೂ ಪಾಠಶಾಲೆಯಾಗಿದ್ದ ಪುತ್ತೂರಿನ ಆ ವಿದ್ಯಾಸಂಸ್ಥೆಯಲ್ಲಿ ಸದ್ಯಕ್ಕೆ ಪಾಕಶಾಲೆಯೊಂದು ತೆರೆದುಕೊಂಡಿದೆ, ಆ ಮೂಲಕ ಕೊರೋನಾ ಸಂಕಷ್ಟಕ್ಕೆ ದಿಟ್ಟ ಉತ್ತರ ನೀಡಲು ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ವರ್ಗ ಸಜ್ಜಾಗಿದೆ.

ಹೌದು, ಇದು ಪುತ್ತೂರು ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಅಂಬಿಕಾ ವಿದ್ಯಾಲಯದ ಶಿಕ್ಷಕವೃಂದದ ಯಶೋಗಾಥೆ..

ಕೊರೋನಾ ಕಾರಣದಿಂದಾಗಿ ಶಾಲೆ ಕಾಲೇಜು ಯಾವಾಗ ಆರಂಭವಾಗುತ್ತೋ ಗೊತ್ತಾಗುತ್ತಿಲ್ಲ. ಈ ನಡುವೆ ರಾಜ್ಯದಲ್ಲಿ ಕೊರೋನಾ ಫಾಸಿಟಿವ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದೂ ಕೂಡ ಆತಂಕಕ್ಕೆ ಕಾರಣವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಾಗಿರುವ ಅಲ್ಲೋಲ ಕಲ್ಲೋಲ ಸ್ಥಿತಿ ಖಾಸಗಿ ವಿದ್ಯಾಸಂಸ್ಥೆಗಳಿಗೆ ಬಿಸಿತುಪ್ಪದಂತಾಗಿದೆ. ವರ್ಷಂಪ್ರತಿ ನಡೆಯುವ ಮಕ್ಕಳ ದಾಖಲಾತಿಯೂ ಈ ಬಾರಿ ನಡೆಯದಿರುವುದೂ ಖಾಸಗಿ ಶಾಲೆಗಳಿಗೆ ಆರ್ಥಿಕ ಸಂಕಷ್ಡವನ್ನೂ ತಂದೊಡ್ಡಿದೆ.‌ಇದು ಅನುದಾನರಹಿತ ಶಾಲಾ ಶಿಕ್ಷಕರ ಮಾಸಿಕ ವೇತನಕ್ಕೂ ಅಗತ್ಯ ಕತ್ತರಿ ಹಾಕಬೇಕಾದ ಸ್ಥಿತಿ ತಂದೊಡ್ಡಿದೆ.ಕೆಲವು ಖಾಸಗಿ ವಿದ್ಯಾಸಂಸ್ಥೆಗಳಂತೂ ಶೇ.10 ರಷ್ಟು ಶಿಕ್ಷಕರನ್ನೂ ಕೈ ಬಿಟ್ಟಿದ್ದಾರೆ.

ಇಂತಹಾ ಆತಂಕದ ಸನ್ನಿವೇಶದ ನಡುವೆ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಬೋಧಕ ಹಾಗೂ ಬೋಧಕೇತರ ವರ್ಗದ ಸಮಾನ ಮನಸ್ಕರ ಗುಂಪೊಂದು”ಶಿವಂ ಫುಡ್ ಫ್ರಾಡಕ್ಟ್” ಆರಂಭಿಸಿದ್ದಾರೆ. ಅಂಬಿಕಾ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತೀಶ್ ರವರ ನೇತೃತ್ವದಲ್ಲಿ ಒಗ್ಗೂಡಿರುವ ಉಪನ್ಯಾಸಕರು ಸಣ್ಣಪ್ರಮಾಣದಲ್ಲಿ ಆಹಾರ ಉದ್ಯಮವನ್ನು ಆರಂಭಿಸಿದ್ದಾರೆ. ಮೊದಲ ದಿನವಾದ ಸೋಮವಾರ ಹಲಸಿನ ಸೋಳೆಯ ಚಿಪ್ಸ್ ಹಾಗೂ ಹಲಸಿನ ಬೀಜದ ಲಡ್ಡು ತಯಾರಿಸಿದ್ದಾರೆ.

ಆಹಾರ ಉತ್ಪನ್ನಗಳ ತಯಾರಿಗೆ ಶಾಲೆಯ ಕೊಠಡಿಯನ್ನೇ ಬಳಸಲಾಗಿದ್ದು, ತಯಾರಿ ಕಾರ್ಯದಲ್ಲಿ ವಿದ್ಯಾ ಸಂಸ್ಥೆಯ ಬಹುತೇಕ ಉಪನ್ಯಾಸಕರು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಸಮೂಹ ತೊಡಗಿಸಿಕೊಂಡಿದ್ದರು. ಶುಚಿತ್ವಕ್ಕಾಗಿ ಮಾಸ್ಕ್, ತಲೆಗವಸು ಹಾಗೂ ಕೈ ಕವಚಗಳನ್ನು ಧರಿಸಿ ಶುಚಿಯ ಜೊತೆಗೆ ರುಚಿಕರ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಕೊರೋನಾ ಒಂದೆಡೆ ಸಂಕಷ್ಟ ತಂದಿದ್ದರೆ, ಮತ್ತೊಂದೆಡೆ ಬದುಕಿನ ಪಾಠ ಹೇಳಿಕೊಟ್ಟಿದೆ ಎನ್ನುವ ವಾದಕ್ಕೆ ಅಂಬಿಕಾ ವಿದ್ಯಾಲಯದ ಈ ಬಳಗದ ಈ ಪ್ರಯತ್ನವೇ ಸಾಕ್ಷಿಯಾಗಿದೆ.

ಅಂಬಿಕಾ ವಿದ್ಯಾಲಯದ ಬಹುತೇಕ ಉದ್ಯೋಗಿಗಳು ಇಲ್ಲಿ ತೊಡಗಿಸಿಕೊಂಡಿದ್ದು, ಬಂದ ಆದಾಯವನ್ನು ತಮ್ಮೊಳಗೆ ಹಂಚಿಕೊಳ್ಳುವ ಬಗ್ಗೆಯೂ ನಿರ್ಧರಿಸಿಕೊಂಡಿದ್ದಾರೆ.

ಅಂಬಿಕಾ ವಿದ್ಯಾಸಂಸ್ಥೆ ಯ ಆಡಳಿತ ಮಂಡಳಿಯಿಂದ ಅಗತ್ಯದ ನೆರವನ್ನೂ ಒದಗಿಸಲಾಗಿದ್ದು, ಸಂಸ್ಥೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ ರವರೂ ಪೂರ್ಣ ಬೆಂಬಲ ನೀಡುತ್ತಿದ್ದಾರೆ.

” ಆರಂಭಿಕ ಹಂತದಲ್ಲಿ ಮಕ್ಕಳ ಪೋಷಕರೇ ಗ್ರಾಹಕರು..”
ಶಿಕ್ಷಕರು ನಿರುದ್ಯೋಗಿಗಳಾಗದೆ, ಆರ್ಥಿಕ ಸಂಕಷ್ಟ ದೂರಮಾಡಲು ದಾರಿ ಕಂಡುಕೊಳ್ಳಬೇಕೆಂಬ ಉದ್ದೇಶಕ್ಕೆ ಆರಂಭವಾದ ಈ ಯೋಜನೆಗೆ ಆರಂಭಿಕ ಹಂತದಲ್ಲಿ ವಿದ್ಯಾಲಯದ ಮಕ್ಕಳ ಪೋಷಕರೇ ಗ್ರಾಹಕರಾಗಲಿದ್ದಾರೆ. ಬೇಡಿಕೆಯನ್ನು ಅನುಸರಿಸಿ, ವಿವಿಧ ತರಹದ ತಿಂಡಿಗಳ ಮೂಲಕ ಮತ್ತಷ್ಟು ವಿಸ್ತಾರಗೊಳಿಸುವ ಯೋಚನೆ ಇದೆ. ಶಾಲೆ ಆರಂಭವಾಗುವವರೆಗೆ ನಿರಂತರವಾಗಿ ಶಿವಂ ಫುಡ್ ಪ್ರಾಡಕ್ಟ್ ಮುಂದುವರಿಯುತ್ತದೆ. ‌ಬೇಡಿಕೆ ಇದ್ದಲ್ಲಿ ನಂತರವೂ ಮುನ್ನಡೆಸುವ ಇರಾದೆ ಇದೆ ಎನ್ನುತ್ತಾರೆ ಅಂಬಿಕಾ‌ವಿದ್ಯಾಲಯದ ಉಪನ್ಯಾಸಕ ಸತೀಶ್.

See also  ಬಸ್ ಗೆ ಕಲ್ಲು ತೂರಾಟ: ನಾಪತ್ತೆಯಾದವರ ಪತ್ತೆಗೆ ಶೋಧ

ಶಿವಂ ಫುಡ್ ಪ್ರಾಡಕ್ಟ್ ನಲ್ಲಿ ತೊಡಗಿಸಿಕೊಳ್ಳುವುದು ಯಾರಿಗೂ ಕಡ್ಡಾಯವಲ್ಲ.‌ ನಮ್ಮ ಉದ್ಯೋಗಿಗಳ ಪೈಕಿ ಆರ್ಥಿಕವಾಗಿ ಸಂಕಷ್ಟ ಎದುರಿಸುವವರು ಅಥವಾ ಇಂತಹಾ ಕೆಲಸಗಳಲ್ಲಿ ಆಸಕ್ತಿ ಇರುವವರು ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡು, ಬಂದ ಲಾಭವನ್ನು ಅವರೊಳಗೇ ಹಂಚಿಕೊಳ್ಳುತ್ತಾರೆ. ಅಂಬಿಕಾ ವಿದ್ಯಾಲಯ ಈ ಸ್ವಾವಲಂಬಿ ಯೋಜನೆಗೆ ಪೂರ್ಣ ಬೆಂಬಲ‌ನೀಡುತ್ತಿದೆ.
-ಸುಬ್ರಹ್ಮಣ್ಯ ನಟ್ಟೋಜ
ಅಧ್ಯಕ್ಷರು, ಅಂಬಿಕಾ‌ ವಿದ್ಯಾಲಯ, ಪುತ್ತೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು