News Kannada
Sunday, December 04 2022

ಕರಾವಳಿ

ಸ್ಪಿಯರ್ ಹೆಡ್ ಸಮೂಹದ ನಿರ್ದೇಶಕ ಕೆನೂಟ್ ಪಿಂಟೋ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರಾಗಿ ನೇಮಕ

Photo Credit :

ಸ್ಪಿಯರ್ ಹೆಡ್ ಸಮೂಹದ ನಿರ್ದೇಶಕ ಕೆನೂಟ್ ಪಿಂಟೋ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರಾಗಿ ನೇಮಕ

ಮಂಗಳೂರು: ಸ್ಪಿಯರ್ ಹೆಡ್ ಸಮೂಹದ ನಿರ್ದೇಶಕ ಕೆನೂಟ್ ಜೀವನ್ ಪಿಂಟೋ ಅವರನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜಗದೀಶ್ ಪೈ ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ಅನುಮತಿ ಹಾಗೂ ಕನ್ನಡ-ಸಂಸ್ಕೃತಿ ಸಚಿವರ ಪೂರ್ವಾನುಮತಿಯೊಂದಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಕೆನೂಟ್ ಜೀವನ್ ಪಿಂಟೋ ಹಾಗೂ ಸಾಣೂರಿನ ನರಸಿಂಹ ಕಾಮತ್ ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸದಸ್ಯತನ ಅವಧಿಯು ಎರಡು ವರ್ಷಗಳ ಕಾಲ ಇರಲಿದೆ. ಕೆನೂಟ್ ಅವರು ಸ್ಪಿಯರ್ ಹೆಡ್ ಸಮೂಹ ಸಂಸ್ಥೆಗಳ ವ್ಯಾವಹಾರಿಕ ಅಭಿವೃದ್ಧಿ ಹಾಗೂ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ.

ಸ್ಪಿಯರ್ ಹೆಡ್ ಸಮೂಹ ಸಂಸ್ಥೆಯ ಅಡಿಯಲ್ಲಿ ನ್ಯೂಸ್ ಕರ್ನಾಟಕ ಡಾಟ್ ಕಾಮ್, ನ್ಯೂಸ್ ಕನ್ನಡ ಡಾಟ್ ಕಾಮ್, ಕರ್ನಾಟಕ ಟುಡೆ, ಎನ್ ಕೆ ಪ್ಲಸ್ ಇ ಮ್ಯಾಗಜಿನ್ ಇದ್ದು, ಕೆನೂಟ್ ಅವರು ಕರ್ನಾಟಕ ಟುಡೇ ಮಾಸಿಕ ಆಂಗ್ಲ ಮ್ಯಾಗಜಿನ್ ನ ಪ್ರಕಾಶಕರಾಗಿರುವರು.

ಕೆಲವು ವರ್ಷಗಳ ಕಾಲ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದ ಕೆನೂಟ್ ಅವರು ಅಬುಧಾಬಿ ಕೊಂಕಣಿ ಸಂಘಟನೆಯ ಕಾರ್ಯದರ್ಶಿ ಹಾಗೂ ಸದಸ್ಯರಾಗಿದ್ದರು. ಅವರು ರೋಟರಿ ಸದಸ್ಯರಾಗಿದ್ದು, ರೋಟರಿ ಜಿಲ್ಲಾ ವಿಶೇಷ ಮ್ಯಾಗಜಿನ್ `ಹೊಸ ಚಿಗುರು’ ಸಂಪಾದಕರಾಗಿರುವರು.

ನೀರುಮಾರ್ಗದ ನಿವಾಸಿಯಾಗಿರುವ ಕೆನೂಟ್ ಅವರು ಎನ್ ಎಂಪಿಟಿ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದ ಬಳಿಕ ಗೋವಿಂದಾಸ್ ನಲ್ಲಿ ಸುರತ್ಕಲ್ ನಲ್ಲಿ ಕಾಲೇಜು ಶಿಕ್ಷಣ ಪೂರೈಸಿರುವರು. ಕಳೆದ 15 ವರ್ಷಗಳಿಂದ ಅವರಿಗೆ ಮುದ್ರಣ ಹಾಗೂ ಅಂತರ್ಜಾಲ ಮಾಧ್ಯಮ ರಂಗದಲ್ಲಿ ಅನುಭವವಿದೆ.

ಇವರು ಈಗಾಗಲೇ ಹಲವಾರು ಕೊಂಕಣಿ ನಾಟಕಗಳಲ್ಲಿ ನಟಿಸಿರುವರು ಮತ್ತು ಹಲವಾರು ಕೊಂಕಣಿ ಭಾಷಿಕ ಮ್ಯಾಗಜಿನ್ ಗಳಲ್ಲಿ ಉಪಸಂಪಾದಕ, ಸಂಪಾದಕರಾಗಿಯೂ ದುಡಿದಿರುವರು.

See also  ಮೀನು ಹಿಡಿಯಲು ಹೋದ ಇಬ್ಬರು ನೀರುಪಾಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು