News Kannada
Tuesday, December 06 2022

ಕರಾವಳಿ

ಸುಳ್ಯದಲ್ಲಿ ಕಾಂಗ್ರೆಸ್ `ಜನಧ್ವನಿ’ ಪ್ರತಿಭಟನೆ

Photo Credit :

ಸುಳ್ಯದಲ್ಲಿ ಕಾಂಗ್ರೆಸ್ `ಜನಧ್ವನಿ' ಪ್ರತಿಭಟನೆ

ಸುಳ್ಯ: ಕೊರೊನಾ ತಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ  ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ `ಜನಧ್ವನಿ’  ಪ್ರತಿಭಟನೆ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆಯಿತು.

ಸುಳ್ಯ ಬ್ಲಾಕ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕಾಂಗ್ರೆಸ್ ಮುಖಂಡರಾದ ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎಂ.ವೆಂಕಪ್ಪ ಗೌಡ, ಜಿ. ಕೃಷ್ಣಪ್ಪ , ಗೀತಾ ಕೋಲ್ಚಾರ್  ಮಾತನಾಡಿ, ಕೊರೊನಾ ತಡೆಯುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ, ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ, ಭೂ ಹಕ್ಕು ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳು ರಾಜ್ಯದ ಜನರ ಹಿತಕ್ಕೆ ಮಾರಕವಾಗಿದೆ ಎಂದು ಹೇಳಿದರು.

ಬಳಿಕ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಪಿ.ಎಸ್.ಗಂಗಾಧರ, ಪಿ.ಸಿ.ಜಯರಾಮ, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫಾ, ತೀರ್ಥರಾಮ ಜಾಲ್ಸೂರು, ಕೆ.ಗೋಕುಲ್‍ದಾಸ್, ಜಿ.ಕೆ.ಹಮೀದ್, ಶರೀಫ್ ಕಂಠಿ, ಧರ್ಮಪಾಲ ಕೊಯಿಂಗಾಜೆ ಮತ್ತಿತರರು ಉಪಸ್ಥಿತರಿದ್ದರು.

See also  ಕೇರಳ ವಿಧಾನಸಭೆಯಲ್ಲಿ ಕನಿಷ್ಠ 10 ಸ್ಥಾನಗಳು ಸದನದಲ್ಲಿ ಸಿಗಲಿವೆ: ಅಧ್ಯಕ್ಷ ನಳಿನ್ ಕುಮಾರ್ ಕಟೀಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು