News Kannada
Monday, October 03 2022

ಕರಾವಳಿ

ಕೃಷಿಯಿಂದ ವಿದ್ಯಾವಂತರು ವಿಮುಖ: ವೀರೇಂದ್ರ ಹೆಗ್ಗಡೆ - 1 min read

Photo Credit :

ಕೃಷಿಯಿಂದ ವಿದ್ಯಾವಂತರು ವಿಮುಖ: ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಆಧುನಿಕ ಕಾಲದಲ್ಲಿ ವಿದ್ಯಾವಂತ ಮಕ್ಕಳು ಕೃಷಿಯಿಂದ ವಿಮುಖವಾಗುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲೆಡೆ ಕೃಷಿ ಕೂಲಿಕಾರ್ಮಿಕರ ಕೊರತೆ ಎದ್ದುಕಾಣುತ್ತಿದೆ. ಆದ್ದರಿಂದ ಭತ್ತದ ಕೃಷಿಕ್ಷೇತ್ರದಲ್ಲಿ ಯಾಂತ್ರೀಕರಣ ಬಹಳ ಒಳ್ಳೆಯ ಪರಿವರ್ತನೆ ಎಂದುಕೊಳ್ಳುತ್ತೇವೆ. ಕೃಷಿಯಲ್ಲಿ ವೆಚ್ಚ ಕಡಿಮೆ ಮಾಡಿ, ಆದಾಯ ಹೆಚ್ಚು ಮಾಡಿ, ಕೃಷಿ ಲಾಭದಾಯಕವಾಗಿ ಆಕರ್ಷಣೀಯವಾಗಿರಬೇಕು ಎಂಬುದೇ ಶ್ರೀ ಕ್ಷೇತ್ರದ ಆಶಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನುಡಿದರು.

ಗ್ರಾ. ಯೋಜನೆಯ ಮಹತ್ವಾಕಾಂಕ್ಷಿ ಯೋಜನೆಯಾದ ಯಂತ್ರಶ್ರೀ ಯೋಜನೆಯ ಮೂಲಕ ಪ್ರಾಯೋಗಿಕ ನೆಲೆಯಲ್ಲಿ ಶ್ರೀ ಕ್ಷೇತ್ರದ ಗದ್ದೆಯಲ್ಲಿ ಬೆಳೆಸಿರುವ ಭತ್ತದ ಕೃಷಿಯ ಕಟಾವು ಕಾರ್ಯಕ್ಕೆ ಅ. 28 ರಂದು ಚಾಲನೆ ನೀಡಿದ ವೇಳೆ ಮಾಧ್ಯಮದವರ ಜೊತೆ ಅವರು ಮಾತನಾಡಿದರು.

ಯಾಂತ್ರೀಕೃತ ಪದ್ದತಿಯಿಂದ ಭತ್ತದ ಕೃಷಿಯಲ್ಲಿ ಖರ್ಚು ಕಡಿಮೆ ಮತ್ತು ಸಮಯದ ಉಳಿತಾಯ ಕೂಡ ಮಾಡಬಹುದು. ಆದ್ದರಿಂದ ಜನ ಇದನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಇದೆ. ಮತ್ತು ಒಪ್ಪಿಕೊಳ್ಳಬೇಕು ಎಂಬುದು ನಮ್ಮ ಆಶಯ ಕೂಡ. ಅದಕ್ಕಾಗಿ ಕ್ಷೇತ್ರದಿಂದ ಬಹುಮೊತ್ತವನ್ನು ತೊಡಗಿಸಿ ಯಂತ್ರೋಪಕರಣಗಳ ಖರೀದಿ ಮಾಡಿದ್ದೇವೆ. ದೇಶದಲ್ಲೇ ಇಂತಹಾ ಪರಿವರ್ತನೆ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.

ಈ ವೇಳೆ ಮಾಹಿತಿ ನೀಡಿದ ಗ್ರಾ. ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ್, ಕ್ಷೇತ್ರದ 17 ಎಕ್ರೆ ಗದ್ದೆಯಲ್ಲಿ 8.5 ಎಕ್ರೆ ಸಾಂಪ್ರದಾಯಿಕ ರೀತಿಯಲ್ಲಿ ಮತ್ತು ಉಳಿದ 8.5 ಎಕ್ರೆಯಲ್ಲಿ ಯಾಂತ್ರೀಕೃತವಾಗಿ ಭತ್ತದ ಬೇಸಾಯ ನಡೆಸಿದ್ದೇವೆ. ಇದರಲ್ಲಿ ಭೂಮಿ ಹದಮಾಡುವುದರಿಂದ ಮೊದಲ್ಗೊಂಡು ಹಸಿರೆಲೆ ಗೊಬ್ಬರ ತಯಾರಿ, ಸಾವಯವ ಗೊಬ್ಬರ ನೀಡುವುದು, ಚಾಪೆನೇಜಿ ತಯಾರಿ, ಭಿತ್ತನೆಯಿಂದ ಕೊಯಿಲಿನವರೆಗೆ ಯಂತ್ರಗಳನ್ನು ಬಳಸಿದ್ದೇವೆ. ಕೂಲಿಕಾರ್ಮಿಕರ ಸಮಸ್ಯೆ ಇರುವ ಈ ದಿನಮಾನಗಳಲ್ಲಿ ಯಂತ್ರದ ಮೂಲಕ ಒಂದು ಎಕ್ರೆಯಲ್ಲಿ 1 ಗಂಟೆಯಲ್ಲಿ ನಾಟಿ ಮಾಡಬಹುದು ಮತ್ತು ಕಟಾವನ್ನೂ ಮಾಡಬಹುದು. ಈ ಪ್ರಯೋಗದಿಂದ ನಾವು ಕಂಡಕೊಂಡದ್ದೇನೆಂದರೆ 1 ಎಕ್ರೆಯಲ್ಲಿ ಸಾಂಪ್ರದಾಯಿಕ ಶೈಲಿಗೆ 21 ಸಾವಿರ ರೂ ಖರ್ಚು ತಗಲಿದರೆ ಯಾಂತ್ರೀಕೃತ ವ್ಯವಸ್ಥೆಯಲ್ಲಿ 13 ಸಾವಿರ ರೂ. ಮಾತ್ರ ಖರ್ಚಾಗುತ್ತದೆ. ಅಲ್ಲದೆ ಯಂತ್ರದ ನಾಟಿಯಿಂದ 1 ಸಸಿಯಿಂದ 80-85 ಹಿಳ್ಳೆಗಳು ಅಧಿಕ ಬಂದಿದ್ದು ಇಳುವರಿ ಕೂಡ ಹುಲುಸಾಗಿದೆ. ಸಾಂಪ್ರದಾಯಿಕದಲ್ಲಿ ಕೇವಲ 10-12 ಹಿಳ್ಳೆಗಳು ಮಾತ್ರ ಬೆಳೆದಿದೆ. ಈ ವ್ಯತ್ಯಾಸವನ್ನು ಗಮನಿಸಿದಾಗ ಯಂತ್ರೀಕರಣ ಮಾದರಿಯಿಂದ ಕಾರ್ಮಿಕರ ಸಮಸ್ಯೆಗೆ ಪರಿಹಾರ, ಅಧಿಕ ಇಳುವರಿ ಸಾಧ್ಯತೆ ಇದೆ ಎಂಬುದು ಖಚಿತಗೊಂಡಿದೆ. ಈ ಬಾರಿ 12 ಸಾವಿರ ಎಕ್ರೆ ಪ್ರಥಮ ಮುಂಗಾರಿನಲ್ಲಿ ನಾಟಿ ಮಾಡಲಾಗಿದ್ದರೆ, ಹಿಂಗಾರಿನಲ್ಲಿ 50 ಸಾವಿರ ಎಕ್ರೆ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ಈ ವೇಳೆ ಕೇಂದ್ರದ ಕೃಷಿ ತಾಂತ್ರಿಕ ಯೋಜನಾಧಿಕಾರಿ ಸುದರ್ಶನ್, ಯೋಜನಾಧಿಕಾರಿ ಸುಧೀರ್ ಜೈನ್, ವ್ಯವಸ್ಥಾಪಕ ಸಚಿನ್, ಮೇಲ್ವಿಚಾರಕ ಹರಿಪ್ರಸಾದ್, ವಲಯ ಮೇಲ್ವಿಚಾರಕ ಪ್ರಶಾಂತ್, ಒಕ್ಕೂಟದ ಅಧ್ಯಕ್ಷ ಶಾಂತಾ ಶೆಟ್ಟಿ ಹಾಗೂ ಸದಸ್ಯರುಗಳು, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

See also  ಶಿರಾಡಿ ರಸ್ತೆ ಜುಲೈ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತ: ಡಿಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು