ಮಂಗಳೂರು: ಮಂಗಳವಾರ ಸಂಭವಿಸಿದ ಭೋಟ್ ದುರಂತದಲ್ಲಿ ನಾಪತ್ತೆಯಾದ ನಾಲ್ವರ ಮೃತದೇಹ ಬುಧವಾರ ಪತ್ತೆಯಾಗಿದೆ. ಆದರೆ, ಓರ್ವನ ಮೃತದೇಹ ಮರಳಿ ಸಮುದ್ರ ಸೇರಿದ್ದು, ಈ ಮೃತದೇಹಕ್ಕಾಗಿ ಮತ್ತೆ ಹುಡುಕಾಟ ಮುಂದುವರೆದಿದೆ.
ಬೋಟು ಮುಳುಗಿದ ಘಟನೆ ಸಂಭವಿಸಿದ ಮಂಗಳವಾರ ಆರು ಮಂದಿ ನಾಪತ್ತೆಯಾದವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಉಳಿದ ನಾಲ್ವರು ಕೂಡ ಶವವಾಗಿ ಪತ್ತೆಯಾಗಿದ್ದಾರೆ.
ಬುಧವಾರ ಪತ್ತೆಯಾದ ಮೃತದೇಹದಲ್ಲಿ ಕಸಬಾ ಬೆಂಗರೆ ನಿವಾಸಿ ಹಸೈನಾರ್ (28), ಚಿಂತನ್ (21), ಜಿಯಾವುಲ್ಲಾ (36) ಮತ್ತು ಅನ್ಸಾರ್ ಎಂದು ಗುರುತಿಸಲಾಗಿದೆ.
ಇವರಲ್ಲಿ ಅನ್ಸಾರ್ ಮೃತದೇಹ ಬಲೆಯಲ್ಲಿ ಪತ್ತೆಯಾಗಿದ್ದು, ಅದನ್ನು ಹೊರಗೆ ತರುವಾಗ ಮರಳಿ ಸಮುದ್ರ ಪಾಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಮೃತದೇಹದ ಕುರಿತು ಅನಿಶ್ಚಿತತೆ ಮೂಡಿದಂತಾಗಿದೆ. ನಾಪತ್ತೆಯಾದವರಲ್ಲಿ ಪಾಂಡುರಂಗ ಮತ್ತು ಪ್ರೀತಂ ಎಂಬುವವರ ಮೃತದೇಹ ಮಂಗಳವಾರವೇ ಪತ್ತೆಯಾಗಿತ್ತು.