ಭಾರತೀಯ ಜೇಸಿಯ ಪ್ರತಿಷ್ಠಿತ ವಲಯ 15 ರ 2021 ನೇ ಸಾಲಿನ ವಲಯಾಧ್ಯಕ್ಷೆಯಾಗಿ ಜೇಸಿಐ ಮಂಗಳೂರು ಲಾಲ್ ಭಾಗ್ ನ ಜೇಸಿ ಸೆನೆಟರ್ ಸೌಜನ್ಯ ಹೆಗ್ಡೆಯವರು ಆಯ್ಕೆಯಾಗಿದ್ದಾರೆ. ಡಿಸೇಂಬರ್ 13 ರಂದು ಜೇಸಿಐ ಭಟ್ಕಳ ಸಿಟಿ ಆತಿಥ್ಯದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಇವರು ತನ್ನ ಇಬ್ಬರು ಪ್ರತಿಸ್ಪರ್ಧಿಗಳೆದುರು ಬಹುಮತದಿಂದ ಚುನಾಯಿತರಾದರು.
ಜೇಸಿಐ ಭಾರತದ ರಾಷ್ಟ್ರೀಯ ತರಬೇತುದಾರರಾದ ಇವರು ಕಳೆದ ಸಾಲಿನಲ್ಲಿ ವಲಯ ಉಪಾಧ್ಯಕ್ಷೆಯಾಗಿ ವಿಶೇಷ ಮನ್ನಣೆ ಗಳಿಸಿದ್ದರು. ವೃತ್ತಿಯಲ್ಲಿ ನಿರೂಪಕಿಯಾಗಿ, ನಟಿಯಾಗಿ ದೇಶ ವಿದೇಶಗಳಲ್ಲಿ ಖ್ಯಾತರಾಗಿರುವ ಸೌಜನ್ಯ, ಮಂಗಳೂರಿನಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಸದಾಶಿವ ಹೆಗ್ಡೆ, ಸುಮತಿ ಹೆಗ್ಡೆ ದಂಪತಿ ಗಳ ಪುತ್ರಿಯಾಗಿರುವ ಸೌಜನ್ಯ ಹೆಗ್ಡೆ, ಕಾರ್ಕಳ ಸುಧೀರ್ ಹೆಗ್ಡೆ ಯವರ ಧರ್ಮ ಪತ್ನಿ.