ಮಂಗಳೂರು: ಕೇರಳದ ಹಲವೆಡೆ ಹಬ್ಬಿರುವ ಹಕ್ಕಿಜ್ವರ ಇದೀಗ ಕರಾವಳಿ ತಿರುಕು ಕಾಲಿಟ್ಟಿದೆ. ಮಂಜುನಾಥ ಸಮೀಪದ ಅಂಗಡಿ ಎಂಬಲ್ಲಿ ಕಾಗೆಗಳ ಗುಂಪು ಸತ್ತು ಬಿದ್ದಿರುವುದು ಇದಕ್ಕೆ ಸಾಕ್ಷಿ ಎಂದು ಎಲ್ಲರೂ ಹೇಳುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಕೇರಳ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಈ ಕಾಯಿಲೆಯನ್ನು ಕೇರಳ ಸರ್ಕಾರ ರಾಜ್ಯ ವಿಪತ್ತು ಎಂದು ಘೋಷಿಸಿದೆ. ಅಷ್ಟೇ ಅಲ್ಲದೆ ಇದೇ ಹಿನ್ನೆಲೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಕಲಿಸಲು ಪಟ್ಟಿದ್ದೆ ಎಂದು ವರದಿಗಳು ಹೇಳುತ್ತಿವೆ.
ಆದರೆ ಇದೀಗ ಅದೇ ಲಕ್ಷಣಗಳು ಕರ್ನಾಟಕದ ಗಡಿಭಾಗ ಗಳಲ್ಲಿ ಕಂಡುಬಂದಿರುವುದು ಜನರಲ್ಲಿ ಆತಂಕ ಮೂಡಿಸುತ್ತಿದ್ದು, ಅರಂಗಡಿ ಪ್ರದೇಶದಲ್ಲಿ ಸುಮಾರು ಆರು ಕಾಗೆಗಳು ಸತ್ತು ಬಿದ್ದಿರುವುದು ಇದಕ್ಕೆ ಮೂಲ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಅವರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿತ್ತುದೊರೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.