News Kannada
Friday, December 02 2022

ಕರಾವಳಿ

`ಉಜಿರೆ ಗ್ರಾಮವನ್ನು ಪಾಕಿಸ್ತಾನ ಮಾಡುವ ಹುನ್ನಾರ’

Photo Credit :

`ಉಜಿರೆ ಗ್ರಾಮವನ್ನು ಪಾಕಿಸ್ತಾನ ಮಾಡುವ ಹುನ್ನಾರ’

ಬೆಳ್ತಂಗಡಿ: ಉಜಿರೆಯಂತಹ ಗ್ರಾಮವನ್ನು ಪಾಕಿಸ್ತಾನ ಮಾಡಬೇಕೆಂಬ ಉದ್ದೇಶ ಘೋಷಣೆ ಹಿಂದಿದೆ. ಹೀಗಾಗಿ ಸರಕಾರಕ್ಕೆ ಸಾಕ್ಷಿ ಎಂಬಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಎಸ್.ಡಿ.ಪಿ.ಐ. ಕಾರ್ಯಕರ್ತರು ಅಮಾಯಕರನ್ನು ಬಂಧಿಸಿದೆ ಎಂದು ನಾಟಕವಾಡುತ್ತಿದೆ. ನಮಗೆ ನೋವಾಗುತ್ತಿದೆ ಎನ್ನುವ ಸಂಘನೆಗಳಿಗೆ ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. ನಿಮಗೆ ಕೆ.ಜೆ. ಹಳ್ಳಿ. ಡಿ.ಜೆ ಹಳ್ಳಿಯಲ್ಲಿ ಠಾಣೆ ಉರಿಸುವಾಗಿ ಅಖಂಡ ಶೀನಿವಾಸ್ ಮನೆಗೆ ಬೆಂಕಿ ಹಚ್ಚುವಾಗ ನೋವಾಗಿಲ್ಲವೇ ಎಂದು ವಿಹಿಂಪ ವಿಭಾಗ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಪ್ರಶ್ನಿಸಿದ್ದಾರೆ.

ಉಜಿರೆಯಲ್ಲಿ ಗ್ರಾ.ಪಂ. ಮತ ಎಣಿಕೆ ಸಂದರ್ಭದಲ್ಲಿ ಎಸ್. ‌ಡಿ.ಪಿ.ಐ. ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಗುರುವಾರ ಉಜಿರೆ ಬಸ್‌ನಿಲ್ದಾಣ ಸಮೀಪ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಭಾರತದ ಪ್ರತಿ ಜಿಲ್ಲೆ, ಗ್ರಾಮ, ಹಳ್ಳಿಯನ್ನು ಇಸ್ಲಾಂಮೀಕರಣಗೊಳಿಸಬೇಕೆಂದು ಇಸ್ಲಾಂ ಸಂಘಟನೆಗಳ ಷಡ್ಯಂತ್ರವಾಗಿದೆ. ಅದು 7ನೇ ಶತಮಾನದಿಂದಲೇ ರುಜುವಾತಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಹಿಂದು ಕಾರ್ಯರ್ತರ ಕೊಲೆ, ಲವ್ ಜಿಹಾದ್, ಲ್ಯಾಂಡ್ ಜಿಯಾದ್‌ ನಡೆಯುತ್ತಿದೆ. ಗೋಹತ್ಯೆ, ಶ್ರದ್ಧಾ ಕೇಂದ್ರಗಳ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಜಿರೆಯ ಪಾಕಿಸ್ತಾನ ಪರ ಘೋಷಣೆಗೆ ಗ್ರಾ.ಪಂ. ಚುನಾವಣೆಗೂ ಏನು ಸಂಬಂಧ ಎಂದು ಎಲ್ಲರೂ ಅಂದುಕೊಂಡಿರಬಹುದು. ಅಂದು ಮಹಮ್ಮದ್ ಅಲಿ ಜಿನ್ನಾ 1947ರಲ್ಲಿ ಹೇಳಿದ್ದ ನಗುನಗುತ್ತಾ ಪಾಕಿಸ್ತಾನ ನಿರ್ಮಾಣ ಮಾಡಿದ್ದೇವೆ. ಇನ್ನು ಮುಂದೆ ಹೋರಾಟದಿಂದ ಭಾರತವನ್ನು ಪಡೆಯೋಣ ಎಂದು ಹೇಳಿದ್ದ. ಅದೇ ಮಾತಿನಿಂದ ಪ್ರೇರಪಣೆಗೊಂಡು ಈ ದೇಶದಲ್ಲಿ ಸಾವಿರಾರು ಮುಸಲ್ಮಾನ ಸಂಘಟನೆಗಳು ಹುಟ್ಟಿಕೊಂಡಿವೆ. ಇವರಿಗೆ ಭಾರತ ಪ್ರೇರಣೆಯಲ್ಲ. ಪಾಕಿಸ್ತಾನ ಪ್ರೇರಣೆಯಾದ್ದರಿಂದ ಇಂದು ಪಾಕಿಸ್ತಾನಕ್ಕೆ ಘೋಷಣೆ ಕೂಗುತ್ತಿದ್ದಾರೆ. ಇದರರ್ಥ ಉಜಿರೆಯಂತಹ ಗ್ರಾಮವನ್ನು ಪಾಕಿಸ್ತಾನ ಮಾಡಬೇಕೆಂಬ ಉದ್ದೇಶ ಈ ಘೋಷಣೆ ಹಿಂದಿದೆ. ಹಾಗಾಗಿ ಸರಕಾರಕ್ಕೆ ಸಾಕ್ಷಿ ಎಂಬಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ ಅದಕ್ಕಾಗಿ ತಕ್ಷಣ ಇಂತಹಾ ಸಂಘಟನೆಗಳನ್ನು ನಿಷೇಧಿಸಿ, ದೇಶವಿರೋಧಿಗಳನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಿದರು.

 ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಾಧಯಕ್ಷ ಭಾಸ್ಕರ್ ಧರ್ಮಸ್ಥಳ ಮಾತನಾಡಿ, ಕಾಶ್ಮೀರದಲ್ಲಿ, ದೆಹಲಿಯಲ್ಲಿ ದೇಶವಿರೋಧಿ ಸಂಘಟನೆಗಳಿವೆ ಎಂದು ಹೇಳುತ್ತಿದ್ದೆವು. ಆದರೆ ಇಂದು ನಮ್ಮ ಗ್ರಾಮದಲ್ಲೇ ಇಂತಹಾ ವರ್ತನೆ ಕಂಡುಬರುತ್ತಿದೆ. ಮಸೀದಿ ಚರ್ಚ್ ಅಭಿವೃದ್ಧಿಗಾಗಿ ಶಾಸಕ ಹರೀಶ್ ಪೂಂಜ ಅನುದಾನ ನೀಡಿದರು. ಆದರೆ ಅವರ ವಿರುದ್ಧವೇ ಘೋಷಣೆ ಕೂಗುವ ಮಟ್ಟಕ್ಕೆ ತನ್ನ ನೀಚ ಬುದ್ಧಿಯನ್ನು ತೋರಿಸಿದೆ. ಬೆಳ್ತಂಗಡಿ ತಾಲೂಕಿನ ಸುಣ್ಣದ ಕೆರೆ ಹಾಗೂ ನರಸಿಂಹಗಡ ಹೆಸರನ್ನು ಬದಲಾಯಿಸದಂತೆ ಶಾಸಕರು ಕ್ರಮ ವಹಿಸಬೇಕು. ದೇಶದ್ರೋಹದ ಕೆಲಸ ಯಾರೇ ಮಾಡಿದಲ್ಲಿ ಪೊಲೀಸರು ಶೂಟೌಟ್‌ಗೆ ಅವಕಾಶ ನೀಡಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು. ವಿಹಿಂಪ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ಪ್ರಖಂಡ ಸಂಚಾಲಕ ಸಂತೋಷ್ ಅತ್ತಾಜೆ ಉಪಸ್ಥಿತರಿದ್ದರು. ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಕಾರ್ಯಕ್ರಮ ಸಂಯೋಜಿಸಿದರು.

See also  ದಕ್ಷಿಣ ಭಾರತದಲ್ಲಿ ಸಂಸ್ಕೃತಿ, ಸಂಸ್ಕಾರ ಉತ್ತಮವಾಗಿದೆ: ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು