News Kannada
Friday, December 09 2022

ಕರಾವಳಿ

ಲಂಚ ಸ್ವೀಕಾರ,ಆರೋಪಿಯ ಜಾಮೀನು ಅರ್ಜಿ ವಜಾ

Photo Credit :

ಲಂಚ ಸ್ವೀಕಾರ,ಆರೋಪಿಯ ಜಾಮೀನು ಅರ್ಜಿ ವಜಾ

ಮಂಗಳೂರು: ಮಂಗಳೂರು ತಾಲೂಕು  ಭೂ ದಾಖಲೆಗಳ ಸಹಾಯಕರ ಕಛೇರಿಯಲ್ಲಿ ಸರ್ವೆಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗಂಗಾಧರ್ ಎಂಬ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. 

ಮರ ಕಡಿಯುವ ವಿಚಾರಕ್ಕೆ ಸಂಬಂದಿಸಿದಂತೆ ಜಾಗವನ್ನು ಅಳತೆ ಮಾಡಿ ನಕಾಶೆಯನ್ನು ನೀಡುವ ವಿಚಾರವಾಗಿ ಉಳ್ಳಾಲದ ಸೊಹೈಲ್ ಎಂಬವರಿಂದ ಮೊದಲು ಲಂಚದ ರೂಪದಲ್ಲಿ ರೂ. 30,000/- ಕ್ಕೆ ಬೇಡಿಕೆ  ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ಸೊಹೈಲ್ ಹೇಳಿದಾಗ ರೂ. 20,000/- ನೀಡುವಂತೆ ಹೇಳಿ ರೂ. 3,500/- ಮುಂಗಡ ಪಡೆದು, ಉಳಿಕೆ ಲಂಚದ ಹಣ ರೂ. 16,5000/- ಸ್ವೀಕರಿಸುತ್ತಿದ್ದಾಗ ಸದ್ರಿ ಸೊಹೈಲ್ ರವರು  ದೂರು ನೀಡಿದ್ದರು.  ಅವರು ನೀಡಿದ ದೂರಿನ ಆದಾರದಲ್ಲಿ ಮಂಗಳೂರಿನ ರ್ಭ್ರಷ್ಟಾಚಾರ ನಿಗ್ರಹದಳದ ಪೋಲೀಸ್ ಅಧೀಕ್ಷಕ ಬೋಪಯ್ಯ ರವರ ಮಾರ್ಗದರ್ಶನದಲ್ಲಿ, ಡಿ. ವೈ.ಎಸ್.ಪಿ. ಕೆ. ಸಿ. ಪ್ರಕಾಶ್ ಮತ್ತು ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಗುರುರಾಜ್ ರವರ ತಂಡ ದಾಳಿ ನಡೆಸಿ ಆರೋಪಿಯನ್ನು 2021 ರ ಫೆಬ್ರವರಿ   23 ರಂದು ಬಂದಿಸಿದ್ದರು.

ಆರೋಪಿ ಗಂಗಾಧರ್ ಇದೀಗ ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿ ಯವರು, ಅಪರಾಧ ದ ಗಂಭೀರತೆ ಯನ್ನು ಪರಿಗಣಿಸಿ, ಸದ್ರಿ ಜಾಮೀನು ಅರ್ಜಿಯನ್ನು   ವಜಾಗೊಳಿಸುವುದಾಗಿ ಆದೇಶಿಸಿದ್ದಾರೆ. 

ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲರಾದ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ಆರೋಪಿಗಳ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪ ಸಲ್ಲಿಸಿ “ಭ್ರಷ್ಟಾಚಾರದಂತಹ ಗಂಬೀರ ಪ್ರಕರಣದಲ್ಲಿ ತನಿಖೆ ಪೂರ್ಣಗೊಳ್ಳುವ ಮೊದಲು ಜಾಮೀನು ನೀಡಿದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ” ಎಂದು ವಾದಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರಾದ ಶ್ರೀ. ಬಿ.ಬಿ.ಜಕಾತಿ ರವರು, ಆರೋಪಿ ರ್ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಪರ ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್ ವಾದಿಸಿದ್ದರು.

See also  ಮೂಡುಬಿದಿರೆ ನ್ಯಾಯಾಲಯದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು