ಮಂಗಳೂರು: ಮಂಗಳೂರಿನ ಎ.ಜೆ. ಆಸ್ಪತ್ರೆಯು ಪ್ರಾರಂಭವಾದಾಗಿನಿಂದಲೂ ಹೊಸ ಸೌಲಭ್ಯಗಳನ್ನು ಅಳವಡಿಸುತ್ತಾ ಬರುತ್ತಿದ್ದು, ಇದೀಗ ಎಲ್ಲ ವಯೋಮಾನದ ಮಹಿಳೆಯರ ಆರೋಗ್ಯ ಅಗತ್ಯಗಳನ್ನು ಪೂರೈಸಲು “ವೆಲ್ ವುಮನ್ ಪ್ರೋಗ್ರಾಂ” ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಿದ ಮತ್ತು ವೈಯಕ್ತಿಕಗೊಳಿಸಿದ, ಕಾರ್ಯಕ್ರಮವನ್ನು ಪ್ರಾರಂಬಿಸಿದೆ.
ಮನೆ ಮತ್ತು ಸಮಾಜವನ್ನು ಸಡೆಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಾರೆ, ಅದು ಅವರ ಸಮಯ ಮತ್ತು ಆರೋಗ್ಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದೀಗ ಮಹಿಳೆಯರಿಗೆ ವೆಲ್ ವುಮನ್ ಪ್ರೋಗ್ರಾಂನಲ್ಲಿ ಸೇರ್ಪಡೆಗೊಳ್ಳಲು ಮತ್ತು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಒಂದು ಸದವಕಾಶ.
ವೆಲ್ ವುಮನ್ ಪ್ರೋಗ್ರಾಂ ಅನ್ನು ಅಂತರ್ರಾಷ್ಟ್ರೀಯ ಮಹಿಳಾ ದಿನಚಾರಣೆಯಂದು ಉದ್ಘಾಟನೆಗೊಳಿಸಲಾಯಿತು. ಡಾ. ಅಮಿತ ಮಾರ್ಲ, ವೈದ್ಯಕೀಯ ಆಡಳಿತ ನಿರ್ದೇಶಕಿ, ಡಾ. ವ್ರಂದಾ ಶೆಟ್ಟಿ-ಸ್ರೀರೋಗತಜ್ನ್ಯೆ, ಡಾ. ಕವಿತಾ-ಆಂಕೊಲಾಜಿಸ್ಟ್, ಡಾ. ಶಾಂತಿ ಕಾಮತ್, ಡಾ. ಸ್ವಾತಿ ರೈ-ಮ್ಯಾನೇಜರ್ ಆಪರೇಶನ್ಸ್, ಶ್ರೀಮತಿ ಗ್ರೇಸಿ ಡಿಸಿಲ್ವಾ-ನರ್ಸಿಂಗ್ ಅಧೀಕ್ಶಕರು, ಶ್ರೀಮತಿ ಶೆಲ್ಲಿ-ಉಪ ನರ್ಸಿಂಗ್ ಅಧೀಕ್ಶಕರು ಮತ್ತು ಶ್ರೀಮತಿ ಲಿಡ್ವಿನ್ ಡಿಸೋಜಾ-ಮ್ಯಾನೇಜರ್ ರಿಲೇಶನ್ಸ್ ದೀಪ ಬೆಳಗಿಸಿದರು.
ಸ್ತ್ರೀರೋಗತಜ್ನ್ಯ ಡಾ. ಮಂಜುನಾಥ್ ಕಾಮತ್ ಅವರು “ಮಹಿಳಾ ಆರೋಗ್ಯ” ಕುರಿತು ಮಾಹಿತಿ ನೀಡಿದರು.
ವೆಲ್ ವುಮನ್ ಕಾರ್ಯಕ್ರಮದ ಮುಖ್ಯಾಂಶಗಳು : ಕ್ಲಿನಿಕಲ್ ಅಸೆಸ್ಮೆಂಟ್, ಜೀವನಶೈಲಿಯ ಬದಲಾವಣೆಗಳ ಕುರಿತು ಸಮಾಲೋಚನೆ, ಫಲಿತಾಂಶ ಆಧಾರಿತ ವಿಧಾನ ಮತ್ತು ಮಹಿಳೆಯರ ಆರೋಗ್ಯವನ್ನು ನಿರ್ವಹಿಸಲು ತರಬೇತಿ ಪಡೆದ ನಮ್ಮ ತಜ್ನ್ಯರ ತಂಡ ಇತ್ಯಾದಿಗಳನ್ನು ಒಳಗೊಂಡಿದೆ.
ಶ್ರೀಮತಿ ಗ್ರೇಸಿ ಡಿಸಿಲ್ವಾ ಸ್ವಾಗತಿಸಿದರು. ಶ್ರೀಮತಿ ರಿಶ್ನ ಫ಼ೆರಾವೊ ವಂದಿಸಿದರು. ಕುಮಾರಿ ಸಿಮೋನ, ವಿದ್ಯಾರ್ಥಿನಿ ಕಾರ್ಯಕ್ರಮ ನಿರೂಪಿಸಿದರು. ವೈಧ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ, ಇತರೆ ವೈಧ್ಯರು, ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು..
ವೆಲ್ ವುಮನ್ ಪ್ರೋಗ್ರಾಂ ಉದ್ಘಾಟನೆಯ ಸಂದರ್ಭದಲ್ಲಿ ವೆಲ್ ವುಮನ್ ಆರೋಗ್ಯ ತಪಾಸಣೆ ಪ್ಯಾಕೇಜ್ ಅನ್ನು ಮಾರ್ಚ್ 8ರಿಂದ 22ರವರೆಗೆ 50% ರಿಯಾಯಿತಿ ದರದಲ್ಲಿ ನೀಡಲಾಗುವುದು.