News Kannada
Friday, December 02 2022

ಕರಾವಳಿ

‘ಲಿಂಗ ಸಮಾನತೆ ರಾಷ್ಟ್ರೀಯ ಆದ್ಯತೆಯಾಗಿದೆ’

Photo Credit :

‘ಲಿಂಗ ಸಮಾನತೆ ರಾಷ್ಟ್ರೀಯ ಆದ್ಯತೆಯಾಗಿದೆ’

ಮಂಗಳೂರು: ಬಡತನ ನರ‍್ಮೂಲನೆ ಮತ್ತು ರ‍್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ನಮ್ಮ ರಾಷ್ಟ್ರೀಯ ಆದ್ಯತೆಗಳು, ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ, ನವದೆಹಲಿಯ ಶಾಸ್ತ್ರಿ ಇಂಡೋ-ಕೆನಡಿಯನ್ ಇನ್ಸ್ಟಿಟ್ಯೂಟ್ (ಎಸ್‌ಐಸಿಐ) ಸಹಯೋಗದೊಂದಿಗೆ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಸಹಕಾರದೊಂದಿಗೆ ಇತ್ತೀಚೆಗೆ “ಭಾರತ ಮತ್ತು ಕೆನಡದಲ್ಲಿ ಲಿಂಗತ್ವ ಮುಖ್ಯವಾಹಿನಿಯ ಪ್ರಯೋಗಗಳು” ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ರ‍್ಚುವಲ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು. ಲಿಂಗ ಸಮಾನತೆಗೆ ಲಿಂಗತ್ವ ಮುಖ್ಯವಾಹಿನಿ ಅಗತ್ಯ. ಇದು ಒಂದು ಗುರಿ ಮಾತ್ರವಲ್ಲ, ಲಿಂಗ ಸಮಾನತೆಯನ್ನು ಸಾಧಿಸುವ ಮರ‍್ಗವೂ ಹೌದು, ಎಂದರು.

ತಮ್ಮ ಶಿಖರೋಪಾನ್ಯಾಸದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಿಕೆ ಪ್ರೊ.ಇಂದಿರಾ, ಲಿಂಗತ್ವ ಮುಖ್ಯವಾಹಿನಿಯ ಕುರಿತ ನಮ್ಮ ತಿಳುವಳಿಕೆ ನೀತಿ ನಿರೂಪಣೆಯಲ್ಲಿ ಕಂಡುಬರಬೇಕು, ಎಂದು ಅಭಿಪ್ರಾಯಪಟ್ಟರು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಎಸ್‌ಎನ್‌ಡಿಟಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಿಕೆ ಪ್ರೊ.ವಿಭೂತಿ ಪಟೇಲ್ ಲಿಂಗ ಸಮಾನತೆಯೇ ಅಭಿವೃದ್ಧಿಯ ಗುರಿಯಾಗಿರಬೇಕು ಎಂದರು. ಎಸ್‌ಐಸಿಐ ನರ‍್ದೇಶಕಿ ಡಾ. ಪ್ರಾಚಿ ಕೌಲ್, ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಯೂನಿರ‍್ಸಿಟಿ ಆಫ್ ಆಲ್ರ‍್ಟಾ (ಕೆನಡಾ) ಪ್ರೊಫೆಸರ್ ಡಾ. ಡೆನಿಸ್ ಎಲ್. ಸ್ಪಿಟ್ಜರ್ ಅವರು ತಮ್ಮ ಅನುಭವ ಹಂಚಿಕೊಂಡರು.

ಯುಜಿಸಿ ಜಂಟಿ ಕರ‍್ಯರ‍್ಶಿ ಡಾ.ರ‍್ಚನಾ ಠಾಕೂರ್ ಮಾತನಾಡಿ, ಹೊಸ ಶೈಕ್ಷಣಿಕ ನೀತಿ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ನರ‍್ದೇಶಕಿ, ಕರ‍್ಯಕ್ರಮದ ಸಂಘಟನಾ ಕರ‍್ಯರ‍್ಶಿ ಡಾ.ಅನಿತಾ ರವಿಶಂಕರ್ ಅವರು ರ‍್ನಾಟಕದ ‘ಬಾಗೆಪಲ್ಲಿ ಕೂಲಿ ಸಂಘ’ ಎಂಬ ದೊಡ್ಡ ಜನರ ಸಂಘಟನೆ ಲಿಂಗತ್ವ ಮುಖ್ಯವಾಹಿನಿಗೆ ನಡೆಸಿರುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಿದರು.

ಆಲ್ರ‍್ಟಾ ವಿಶ್ವವಿದ್ಯಾನಿಲಯದ ಮಹಿಳಾ ಮತ್ತು ಲಿಂಗತ್ವ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಡಾ. ಸುಸೇನ್ ಲುಹ್ಮಾನ್, ವಿಕ್ಟೋರಿಯಾ ವಿಶ್ವವಿದ್ಯಾನಿಲಯ (ಕೆನಡಾ) ಲಿಂಗತ್ವ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಲಾರಾ ಪ್ಯಾರಿಸಿ, ಭಾರತಿದಾಸನ್ ವಿಶ್ವವಿದ್ಯಾನಿಲಯದ ಪ್ರೊ.ಎನ್. ಮಣಿಮೇಕಲೈ, ಮೈಸೂರು ವಿಶ್ವವಿದ್ಯಾನಿಲಯದ ಎಂ. ಇಂದಿರಾ ಅವರು ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಹ-ಸಂಘಟನಾ ಕರ‍್ಯರ‍್ಶಿಗಳಾದ ಮಂಗಳೂರು ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಪ್ರೊ.ಜಯರಾಜ್ ಅಮೀನ್ ಮತ್ತು ಇಂಗ್ಲಿಷ್ ಪ್ರಾಧ್ಯಾಪಕ ಡಾ.ರವಿಶಂಕರ್ ರಾವ್ ಉಪಸ್ಥಿತರಿದ್ದರು.

 

 

See also  ಬಸ್ ನಲ್ಲೇ ಹೃದಯಾಘಾತ: ಪ್ರಯಾಣಿಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು