News Kannada
Wednesday, November 30 2022

ಕರಾವಳಿ

ಮಾರ್ಚ್ 27 ರಂದು 3 ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ - 1 min read

Photo Credit :

ಮಾರ್ಚ್ 27 ರಂದು 3 ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್

ಮಂಗಳೂರು: ಎಲ್ಲಾ ರೀತಿಯ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಮಾರ್ಚ್ 27 ರಂದು ಮಂಗಳೂರು ಲಿಟ್ ಫಸ್ಟ್ನ ಮೂರನೇ ಆವೃತ್ತಿ ನಗರದ ಕೊಡಿಯಾಲ್ಬೈಲಿನಲ್ಲಿರುವ ಓಷಿಯನ್ ಪರ್ಲ್ ಹೊಟೇಲ್ನಲ್ಲಿ ನಡೆಯಲಿದೆ.

ಕೊರೋನಾ ಕಾರಣದಿಂದ ಈ ಬಾರಿ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿರುವ ಈ ಲಿಟ್ ಫೆಸ್ಟ್ ʼReimagining the Idea of Bharat’ ಎಂಬ ಥೀಮ್ನಡಿಯಲ್ಲಿ ನಡೆಯಲಿದೆ. ಆಮಂತ್ರಿತ ಅಭ್ಯಾಗತರಷ್ಟೇ ಈ ಬಾರಿಯ ಲಿಟ್ ಫೆಸ್ಟ್ನಲ್ಲಿ ಭಾಗವಹಿಸಲಿದ್ದು, 6 ಅವಧಿಗಳ ವಿಚಾರ ಸಂಕಿರಣ ಸಹ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಾಗ್ಮಿಗಳಾಗಿ ವಿಕ್ರಂ ಸೂದ್, ಶಕ್ತಿ ಸಿನ್ಹಾ, ಪ್ರೊ. ಮಾಧವ ನಲ್ಪಾಟ್, ಮಂಗಳ ಸಿದ್ದಿ, ವಿಕ್ರಂ ಸಂಪತ್, ಶೇಶಾದ್ರಿ ಚಾರಿ, ಸುನಿಲ್ ಪುರಾಣಿಕ್, ಸುಚೇಂದ್ರ ಪ್ರಸಾದ್, ಡಾ ಬಿ ವಿ ವಸಂತ್ ಕುಮಾರ್, ರೋಹಿತ್ ಚಕ್ರತೀರ್ಥ ಮೊದಲಾದವರನ್ನೊಳಗೊಂಡಂತೆ ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಭಾರತೀಯ ಗ್ರಂಥಗಳಲ್ಲಿನ ಪ್ರಾಚೀನ ಐತಿಹಾಸಿಕ ದೃಷ್ಟಿಕೋನವನ್ನು ಬೌದ್ಧಿಕ ಪ್ರವಚನದ ಮೂಲಕ ಜಗತ್ತಿನಾದ್ಯಂತ ಪಸರಿಸುವ ಉದ್ದೇಶದ ಜೊತೆಗೆ ಈ ಲಿಟ್ ಫೆಸ್ಟ್ ನಡೆಯುತ್ತಿದೆ.

See also  ಗಿನ್ನೀಸ್ ದಾಖಲೆ ನಿರ್ಮಿಸಿದ ಬಂಟ್ವಾಳದ ತಾಯಿ ಮಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು