News Kannada
Friday, December 09 2022

ಕರಾವಳಿ

ಚಾರ್ಮಾಡಿಯಲ್ಲಿ ಕಾಡಾನೆ ದಾಳಿ: ಕೃಷಿ ಭೂಮಿಗೆ ಹಾನಿ

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳು ದಾಳಿ ಮಾಡಿದ್ದು ಹೆಚ್ಚಿನ ಪ್ರಮಾಣದ ಕೃಷಿ ಹಾನಿ ಉಂಟಾಗಿದೆ.

ತೋಟತ್ತಾಡಿ ಗ್ರಾಮದ ಕುಂಟಾಡಿ ಪರಿಸರದ ಆಂಟನಿ ಎಂಬವರ 150 ಬಾಳೆಗಿಡ, 50 ಅಡಕೆ ಮರ, ರೂ.10 ಸಾವಿರಕ್ಕಿಂತ ಅಧಿಕ ಮೌಲ್ಯದ ಸ್ಪ್ರಿಂಕ್ಲರ್, ಪೈಪ್ ಲೈನ್, ತೋಮಸ್ ಎಂಬವರ 10 ತೆಂಗಿನ ಮರ ಮಿನಿ ಬೇಬಿಯವರ 50ಕ್ಕಿಂತ ಅಧಿಕ ಬಾಳೆ ಗಿಡಗಳು ಆನೆಗಳ ದಾಳಿಗೆ ತುತ್ತಾಗಿವೆ. ಅಲ್ಲದೆ ಸಮೀಪದ ಇತರ ಕೃಷಿಕರ ತೋಟಗಳಿಗೂ ಕಾಡಾನೆಗಳಿಂದ ಹಾನಿ ಸಂಭವಿಸಿದೆ.

ಆನೆಗಳ ಹಿಂಡು ಪರಿಸರದ ಪಕ್ಕದ ಕಾಡಿನಲ್ಲಿ ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದ್ದು ಸಂಜೆಯ ಬಳಿಕ ಈ ಭಾಗದ ಜನರು ಮನೆಯಿಂದ ಹೊರಬರಲು ಭಯಪಡು ವಂತಾಗಿದೆ. ಮನೆಗಳ ಸಮೀಪ ಇರುವ ಇವರ ತೋಟಗಳಿಗೆ ಆನೆಗಳು ದಾಳಿ ಇಡುತ್ತಿವೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಆನೆಗಳನ್ನು ಓಡಿಸಲು ಪಟಾಕಿಗಳನ್ನು ಸಿಡಿಸುವ ಜತೆ ಇನ್ನಿತರ ಪ್ರಯತ್ನಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

See also  ಸುಳ್ಯ ನಗರದಲ್ಲಿ ಅನಧಿಕೃತ ಕಟ್ಟಡ ತೆರವಿಗೆ ತಾ.ಪಂ.ಕೆಡಿಪಿ ಸಭೆ ಆದೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು