News Kannada
Friday, September 22 2023
ಮಂಗಳೂರು

ಜಿಲ್ಲೆಯಲ್ಲಿ 8ಕ್ಕೆ 8ಕ್ಷೇತ್ರ ಬಿಜೆಪಿ ವಶಕ್ಕೆ, ಸಂಸದ ನಳಿನ್‌ ಹೇಳಿಕೆ

8 out of 8 seats in the district have been captured by BJP, says MP Nalin
Photo Credit : News Kannada

ಉಳ್ಳಾಲ: ನಾನು ಸರ್ವೇ ಹಿಡಿದುಕೊಂಡು ಬಂದಿದ್ದೇನೆ. ಜಿಲ್ಲೆಯಲ್ಲಿ 8 ಕ್ಕೆ 8  ಕ್ಷೇತ್ರದಲ್ಲಿ ಬಿಜೆಪಿ ಬರುತ್ತದೆ. ಉಳ್ಳಾಲದ ಬಂಧುಗಳು ಮಂಗಳೂರು ದಕ್ಷಿಣಕ್ಕೆ ಬನ್ನಿ, ಬಂಟ್ವಾಳಕ್ಕೆ ಬನ್ನಿ ಅಭಿವೃದ್ಧಿಯನ್ನು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕೊಲ್ಯದಲ್ಲಿ ಜರಗಿದ ಜಿಲ್ಲಾ ಬಿಜೆಪಿ ಕರ್ನಾಟಕ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ವೇಯಲ್ಲಿ 8 ಸೀಟುಗಳು ಬಿಜೆಪಿ ಗೆಲ್ಲುವುದು. ಬಿಜೆಪಿ ಶಾಸಕರಿದ್ದ ಜಿಲ್ಲೆಯ ಇತರೆ ಕ್ಷೇತ್ರದ ಅಭಿವೃದ್ಧಿಗಳನ್ನು ಮನದಲ್ಲಿಟ್ಟು ಮತದಾರ 8 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ.

ಎಸ್‍ಡಿಪಿಐ ಪಕ್ಷದ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದನ್ನು ಈ ಬಾರಿ ಎನು ಸಂಬಂಧ ಅಂತ ಹೇಳಬೇಕು. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ಪರಿವಾರ ರಾಜಕಾರಣ ಮೂರು ಕೊಡುಗೆಯಾಗಿದೆ.

ಭಾರತ್ ಜೋಡೋ ಮಾಡಿದ್ದು ರಾಹುಲ್ ಗಾಂಧಿಯಲ್ಲ ನರೇಂದ್ರ ಮೋದಿಯವರು. ಏಕ್ ಭಾರತ್ ಶ್ರೇಷ್ಠ ಭಾರತ್ ಅನ್ನುವ ಕಲ್ಪನೆಯಲಿ ದೇಶ ನಿರ್ಮಿಸುತ್ತಿದ್ದಾರೆ. ಸಿದ್ದರಾಮಯ್ಯನವರು ನಮ್ಮದು 40 ಶೇ. ಸರ್ಕಾರ ಎಂದು ಹೇಳುತ್ತಾರೆ. ಆದರೆ ನಿಮ್ಮ ಪಕ್ಷದ ಸೋನಿಯಾ ಗಾಂಧಿ ಜಾಮೀನಿನ ಮೇಲೆ ಇದ್ದಾರೆ. ನಿಮ್ಮ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿ ಬಂದದ್ದು ಯಾಕೆ ?  ನರೇಂದ್ರ ಮೋದಿಯವರ ಆಡಳಿತದಲ್ಲಿ ಯಾವುದೇ ಹಳ್ಳಿಯಲ್ಲಿಯೂ ಬಾಂಬ್ ಸ್ಫೋಟವಾಗಲಿಲ್ಲ. ಆದರೆ ಮಂಗಳೂರಿಗೆ ಕುಕ್ಕರ್ ಹಿಡಿದುಕೊಂಡು ಬಂದ ವ್ಯಕ್ತಿಯನ್ನು ಬಂಧಿಸಿದಾಗ ಡಿಕೆಶಿಯವರಿಗೆ ಕಣ್ಣೀರು ಬಂತು. ಆದರೆ ಹಿಂದೂಗಳ ಹತ್ಯೆಯಾದಾಗ, ಗೋವುಗಳ ಹತ್ಯೆಯಾದಾಗ ಕಣ್ಣೀರು ಬರಲಿಲ್ಲ. ಡಿಕೆಶಿ ಯವರಿಗೆ 2 ಕುಕ್ಕರ್ ಮೇಲೆ ಪ್ರೀತಿ ಮೊದಲನೆಯದು ಬೆಳಗಾವಿಯ ಕುಕ್ಕರ್ ಮತ್ತೊಂದು ಮಂಗಳೂರಿನ ಕುಕ್ಕರ್. ಕಾಂಗ್ರೆಸ್ಸಿಗರು ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ. ರಾಜಸ್ಥಾನದಲ್ಲಿ ನಿಮ್ಮ ಸರ್ಕಾರ ಇದೆ. ಅಲ್ಲಿ ಯಾಕೆ ಇಂತಹ ಯೋಜನೆ ಜಾರಿ ಮಾಡಿಲ್ಲ. ನಿಮಗೆ ಬರುವುದು ಗ್ಯಾರಂಟಿ ಇಲ್ಲ ಎಂದು ತಿಳಿದಿದೆ.

ನಮ್ಮ ಸರಕಾರ ಸರ್ಕಾರ ಬಂದರೆ  ಪಿ ಎಪ್ ಐ ನಿಷೇಧ ವಾಪಸ್ಸು ತೆಗೆದುಕೊಳ್ಳುತ್ತೇವೆ, ಗೋಹತ್ಯೆ ಕಾನೂನು ವಾಪಸ್ಸು ತೆಗೆಯುತ್ತೇವೆ, ಬಂಧನವಾಗಿರುವ ಭಯೋತ್ಪಾದಕರನ್ನು ಜೈಲಿನಿಂದ ಬಿಡಿಸುತ್ತೇವೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಇಂತಹ ಸರ್ಕಾರ ಬೇಕೆ ಎಂದು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉತ್ತರ ಶಾಸಕ ಭರತ್ ಶೆಟ್ಟಿ, ವಿಭಾಗ ಸಹಪ್ರಭಾರಿ ರಾಜೇಶ್ ಕಾವೇರಿ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ , ಜಿಲ್ಲಾ ಯುವಮೋರ್ಚಾ ಪ್ರಭಾರಿ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ, ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಜಿಲ್ಲೆ ಪ್ರ.ಕಾ ಕಸ್ತೂರಿ ಪಂಜ ಹಾಗೂ ಸುಧೀರ್ ಶೆಟ್ಟಿ ಕಣ್ಣೂರು, ರಾಮದಾಸ್ ಬಂಟ್ವಾಳ, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಜಯಶ್ರೀ ಕರ್ಕೇರ, ಮಾಧ್ಯಮ ಪ್ರಮುಖ್ ರಣದೀಪ್ ಕಾಂಚನ್, ಸಂದೇಶ್ ಶೆಟ್ಟಿ, ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ , ಯುವಮೋರ್ಚಾ ಪ್ರ.ಕಾ ಸುದರ್ಶನ್, ಸೂರಜ್ ಜೈನ್ ಮಾರ್ನಾಡು, ಯಶವಂತ್ ಬೆಳಾಲ್, ಅಶ್ವತ್ ಪಣಪಿಲಾರ್, ಭರತ್ ರಾಜ್ ಕೃಷ್ಣಾಪುರ, ಸಚಿನ್ ರಾಜ್ ರೈ, ಸಚಿನ್ ಮೋರೆ, ಕಿಶೋರ್ ಪಲ್ಲಿಪ್ಪಾಡಿ, ಸಚಿನ್ ಶೆಣೈ, ನವೀನ್ ಪಡ್ನೂರು, ಶ್ರೀಕೃಷ್ಣ ಎಂ.ಆರ್, ಚೆನ್ನಪ್ಪ ಕೋಟ್ಯಾನ್, ಧನಲಕ್ಷ್ಮೀ ಗಟ್ಟಿ, ಆರ್. ಸಿ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು. ಗುರುದತ್ ನಾಯಕ್ ಸ್ವಾಗತಿಸಿದರು.

See also  ಬೆಂಗಳೂರು: ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು