News Kannada
Sunday, November 27 2022

ಕಾಸರಗೋಡು

ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ - 1 min read

Photo Credit :
ಕಾಸರಗೋಡು :  ಮಂಜೇಶ್ವರ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ತನಿಖಾ  ತಂಡ  ಬಂಧಿಸಿದೆ. ಇದರಿಂದ  ಬಂಧಿತರಾವರ ಸಂಖ್ಯೆ ಎರಡಕ್ಕೇರಿದೆ.ಬಂಧಿತನನ್ನು ಕಾರ್ಕಳ ಹೊಸ್ಮಾರಿನ  ಮುಹಮ್ಮದ್ ರಿಯಾಜ್ ( 32) ಎಂದು ಗುರುತಿಸಲಾಗಿದೆ. ಕುದ್ರೆಮುಖ ಪರಿಸರದಿಂದ  ಕಾಸರಗೋಡು ಡಿವೈಎಸ್ಪಿ  ಬಾಲಕೃಷ್ಣನ್ ನಾಯರ್ ಮಂಜೇಶ್ವರ  ಠಾಣಾ ಸಬ್ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ತಂಡವು ಈತನನ್ನು  ಬಂಧಿಸಿದೆ.

ಪ್ರಮುಖ ಆರೋಪಿಯಾದ ತೃಶ್ಯೂರು  ಕೊಡಂಗಲ್ಲೂರಿನ ಸತ್ಯೇಶ್ ಕೆ .ಪಿಯಾನೆ ಕಿರಣ್ ( 35) ನನ್ನು  ಈ ಹಿಂದೆ ಬಂಧಿಸಲಾಗಿತ್ತು. ಕೃತ್ಯದಲ್ಲಿ ನೇರವಾಗಿ ಶಾಮೀಲಾದ ಐದು ಮಂದಿ  ಇನ್ನೂ ತಲೆ ಮರೆಸಿಕೊಂಡಿದ್ದು ,ಇವರಲ್ಲಿ  ಬಹುತೇಕ ಮಂದಿ ಕರ್ನಾಟಕ ನಿವಾಸಿಗಳೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ
ಜುಲೈ 26 ರಂದು ಮುಂಜಾನೆ  ದರೋಡೆ ನಡೆದಿತ್ತು.
ಏಳು ಮಂದಿಯ ತಂಡವು ಕಾವಲುಗಾರ ಅಬ್ದುಲ್ಲ ರನ್ನು ಥಳಿಸಿ ಬಳಿಕ ಕಟ್ಟಿ ಹಾಕಿ  ಹದಿನೈದು ಕಿಲೋಬೆಳ್ಳಿಯ ಆಭರಣ , ನಾಲ್ಕೂವರೆ ಲಕ್ಷ ರೂ  . ನಗದು ದರೋಡೆ ಮಾಡಿತ್ತು .  ದರೋಡೆಗೆ ಬಂದಿದ್ದ ಇನ್ನೋವಾ ಕಾರು  ಉಳ್ಳಾಲ  ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು .  ಈ ಕಾರಿನಿಂದ ಏಳು  ಕಿಲೋ ಬೆಳ್ಳಿ ಆಭರಣ  ಹಾಗೂ ಎರಡು ಲಕ್ಷ ರೂ. ಪತ್ತೆಯಾಗಿತ್ತು. ಉಳಿದ ಆಭರಣ ಹಾಗೂ ನಗದು ಸಹಿತ ದರೋಡೆಕೋರರು ಇನ್ನೊಂದು ಕಾರಿನಲ್ಲಿ ಪತ್ತೆಯಾಗಿದ್ದರು.ತಲೆ ಮರೆಸಿಕೊಂಡಿರುವ ಎಲ್ಲಾ ಆರೋಪಿಗಳ ಮಾಹಿತಿ ಲಭಿಸಿದ್ದು , ಶೀಘ್ರ ಇವರನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿಗಳು  ತಿಳಿಸಿದ್ದಾರೆ.
See also  ಕಾಸರಗೋಡಿನಲ್ಲಿ ಇರಿತಕ್ಕೆ ಓರ್ವ ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು