NewsKarnataka
Sunday, January 23 2022

ಕಾಸರಗೋಡು

ಬೈಕ್–ಕಾರು ಅಪಘಾತ: ಕಾಞ೦ಗಾಡ್ ವಿದ್ಯಾರ್ಥಿನಿ ಸೇರಿ ಇಬ್ಬರು ಸಾವು

ಕಾಸರಗೋಡು : ಕೊಲ್ಲಂ ನಲ್ಲಿ ನಡೆದ ಬೈಕ್ ಮತ್ತು ಕಾರಿನ ನಡುವಿನ ಅಪಘಾತದಲ್ಲಿ ಕಾ ಞ೦ಗಾಡ್ ನಿವಾಸಿಯಾದ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ.ಕಾ ಞ೦ಗಾಡ್ ಅಲಾಮಿಪಳ್ಳಿಯ ಚೈತನ್ಯ ( 20 ) ಮತ್ತು ಸಹಪಾಠಿ ಕೊಲ್ಲಂ ಕುಂಡರದ ಬಿ . ಎನ್ ಗೋವಿಂದ್ ( 20) ಮೃತಪಟ್ಟವರು.

ಇಬ್ಬರು ತಿರುವನಂತಪುರ ಸಿ ಇ ಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ . ಕೊಲ್ಲಂ – ಚೆಂಗೋಟ್ ರಾಷ್ಟ್ರೀಯ ಹೆದ್ದಾರಿಯ ಕಾನಿಕ್ಕೋಡ್ ಎಂಬಲ್ಲಿ ಅಪಘಾತ ನಡೆದಿದೆ .

ಪರೀಕ್ಷೆ ಕಳೆದು ಐದು ಬೈಕ್ ಗಳಲ್ಲಿ ಹತ್ತು ಮಂದಿ ಪ್ರವಾಸಕ್ಕೆ ತೆರಳಿ ಮರಳುತ್ತಿದ್ದಾಗ ಒಂದು ಬೈಕ್ ಅಪಘಾತಕ್ಕೀಡಾಗಿದ್ದು , ಕಾರು ಮತ್ತು ಬುಲೆಟ್ ಬೈಕ್ ನಡುವೆ ಅಪಘಾತ ನಡೆದಿದೆ . ಅತೀ ವೇಗದಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149
Subscribe to our Brand New YouTube Channel

Subscribe Newsletter

Get latest news karnataka updates on your email.