ಕಾಸರಗೋಡು : ಕ್ಷುಲ್ಲಕ ಕಾರಣಕ್ಕೆ ಗ್ಯಾರೇಜ್ ನೌಕರನಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕ ಪುತ್ತೂರು ನಿವಾಸಿಯೋರ್ವನನ್ನು ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪಾಲೆತ್ತಾಡಿಯ ಶೇಕ್ ಹಮೀದ್ ( ೫೦ ) ಎಂದು ಗುರುತಿಸಲಾಗಿದೆ.
ವಿಜೀಶ್( ೩೭) ಎಂಬವರನನ್ನು ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ. ಅಕ್ಟೋಬರ್ ಎರಡರಂದು ಘಟನೆ ನಡೆದಿತ್ತು. ಗ್ಯಾರೇಜ್ ಹೊಂದಿರುವ ಕಟ್ಟಡದ ಮೇಲಂತಸ್ತಿನಲ್ಲಿ ಶೇಕ್ ಹಮೀದ್ ವಾಸವಾಗಿದ್ದು , ಈ ಕಟ್ಟಡಕ್ಕಿರುವ ಗೇಟ್ ನ್ನು ತೆರೆಯಲು ವಿಳಂಬವಾದುದ್ದನ್ನು ಪ್ರಶ್ನಿಸಿದ್ದು , ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಚಾಕುವಿ ನಿಂದ ವಿಜೇಶ್ ರನ್ನು ಇರಿದಿದ್ದರು . ಶೇಕ್ ಹಮೀದ್ ವಿರುದ್ಧ ಕೊಲೆ ಯತ್ನ ಮೊಕದ್ದಮೆ ದಾಖಲಿಸಲಾಗಿತ್ತು . ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು , ನ್ಯಾಯಾಂಗ ಬಂಧ ನ ವಿಧಿಸಲಾಗಿದೆ.