News Kannada
Friday, September 30 2022

ಕಾಸರಗೋಡು

ಚಾಲಕನ ನಿಯಂತ್ರಣಕ್ಕೆ ತಪ್ಪಿ  ಕಂದಕಕ್ಕೆ ಉರುಳಿ ಬಿದ್ದ ಲಾರಿ - 1 min read

Photo Credit :

ಕಾಸರಗೋಡು : ಲಾರಿ ಚಾಲಕನ ನಿಯಂತ್ರಣಕ್ಕೆ ತಪ್ಪಿ  ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಮೃತ ಪಟ್ಟು, ನಾಲ್ವರು ಗಂಭೀರ ಗಾಯಗೊಂಡ  ಘಟನೆ ಗುರುವಾರ ಸಂಜೆ  ಪಾಣತ್ತೂರು ಸಮೀಪದ ಪರಿಯಾರದಲ್ಲಿ ನಡೆದಿದೆ.

ಪಾಣತ್ತೂರು ಕುಂಡಪಳ್ಳಿಯ  ವಿನೋದ್ ( 45) , ನಾರಾಯಣ ( 50) , ಕೆ .ಎಂ ಮೋಹನ್ ( 40) ,ಸುಂದರ ( 40) ಮೃತಪಟ್ಟವರು  ಲಾರಿ ಚಾಲಕ ವಿಜಯನ್ ಕ್ಲೀನರ್  ಅನಿಶ್ , ವೇಣುಗೋಪಾಲ್ , ಪ್ರಸನ್ನ ಗಾಯಗೊಂಡವರು ಮರ ಹೇರಿಕೊಂಡು ಕಲ್ಲಪಳ್ಳಿ ಯಿಂದ ಪಾಣತ್ತೂರಿಗೆ  ತೆರಳುತ್ತಿದ್ದ ಲಾರಿ ಪರಿಯಾರ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ  ಕಂದಕಕ್ಕೆ ಉರುಳಿ ಬಿದ್ದಿದ್ದು , ಲಾರಿ ಯಲ್ಲಿದ್ದ ಮರದ ದಿಮ್ಮಿಗಳೆಡೆ ಸಿಲುಕಿದ್ದ ಆರು ಮಂದಿಯನ್ನು ಸ್ಥಳೀಯರು , ಅಗ್ನಿಶಾಮಕದ ದಳದ ಸಿಬಂದಿಗಳು  ಹರಸಾಹಸ ಪಟ್ಟು ಹೊರತೆಗೆದರೂ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ನಾರಾಯಣ  ಆಸ್ಪತ್ರೆಯಲ್ಲಿ ಮೃತಪಟ್ಟರು.

ಬ್ರೇಕ್ ವೈಫಲ್ಯ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತಪಾಸಣೆಯಿಂದ ತಿಳಿದು ಬಂದಿದೆ. ಲಾರಿಯಲ್ಲಿ ಒಂಭತ್ತು ಮಂದಿ ಇದ್ದರೆನ್ನಲಾಗಿದೆ . ಮೃತಪಟ್ಟವರು ಲೋಡಿಂಗ್ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಮಗುಚಿ ಬಿದ್ದಾಗ ಕಾರ್ಮಿಕರು ಮರದ ದಿಮ್ಮಿಗಳಡಿ ಸಿಲುಕಿ ಈ ದುರ್ಘಟನೆ ನಡೆದಿದೆ.ಘಟನಾ ಸ್ಥಳಕ್ಕೆ   ಉಪಜಿಲ್ಲಾಧಿಕಾರಿ  ಡಿ . ಆರ್ ಮೇಘಶ್ರೀ , ತಹಶೀಲ್ದಾರ್ ಮುರಳಿ  ಪೊಲೀಸರು , ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ

See also  ಕಾಸರಗೋಡು: ಕಾಡು ಹಂದಿಗಳನ್ನು ಗುಂಡಿಟ್ಟು ಕೊಂದ ಅರಣ್ಯ ಇಲಾಖಾ ಅಧಿಕಾರಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು